ಬಳ್ಳಾರಿ: ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿದ್ದ ಕ್ಲಾಕ್ ಟವರ್‌ಅನ್ನು ರಾತ್ರೋರಾತ್ರಿ ಧ್ವಂಸ ಮಾಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರ ಕ್ರಮ ಸರಿಯಿಲ್ಲ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವಿ.ಬಿ.ಮಲ್ಲಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ಇದೊಂದು ಅನುಚಿತ ಕೆಲಸವಾಗಿದೆ. 2023ರ ಚುನಾವಣೆ ಹಿನ್ನೆಲೆಯಲ್ಲಿ ಕೆಡವಿ-ಕಟ್ಟುವ ಪ್ರಕ್ರಿಯೆ ನಡೆಸಲಾಗಿದೆ. ಇದರ ಹಿಂದೆ ಅಭಿವೃದ್ಧಿಗಿಂತ ಲಾಭದ ಉದ್ದೇಶವೇ ಪ್ರಧಾನವಾಗಿದೆ.
ಜನತೆಗೆ ಉಪಯುಕ್ತವಾಗುವಂತಹ ಕೆಲಸಗಳನ್ನು ಮಾಡುವುದು ಸಾಕಷ್ಟಿವೆ. ಅದೆಲ್ಲ ಬಿಟ್ಟು ಕ್ಲಾಕ್ ಟವರ್‌ಅನ್ನು ರಾತ್ರೋರಾತ್ರಿ ಬೀಳಿಸಿರುವುದು ಅನುಮಾನ ಮೂಡಿಸಿದೆ. ಸಚಿವರು ಪಸೆರ್ಂಟೇಜ್ ತಂದುಕೊಡುವ ಮಾರ್ಗಗಳನ್ನು ಹುಡುಕುತ್ತಿರುವಂತೆ ಕಾಣುತ್ತಿದೆ ಎಂದರು.
ಪಕ್ಷದ ಪ್ರಮುಖರಾದ ಅಮೀರ್ ಸೈಯ್ಯದ್ ಖಾದ್ರಿ, ಕಿರಣ್ ಕುಮಾರ್, ಖಲಂದರ್, ಮಹಮ್ಮದ್ ಹಾಸಿಮ್, ಶೇಖರ್ ಯಾದವ್, ಗೌಸ್, ಪದ್ಮಾವತಿ, ಖಾದರ್, ಸಾಹೇಬ್ ಇತರರು ಇದ್ದರು.