More

    ಅಪರಾಧಿಗಳ ವಿರುದ್ಧ ಕ್ರಮಕ್ಕೆ ಆಗ್ರಹ, ಪ್ರಜಾ ವಿಮೋಚನಾ ಚಳವಳಿ ಪ್ರಜಾ ವಿಮೋಚನಾ ಚಳವಳಿ 

    ದೊಡ್ಡಬಳ್ಳಾಪುರ: ದೇವಾಲಯದಲ್ಲಿ ಸಮನಾಗಿ ಕುಳಿತ ಎಂಬ ಕಾರಣಕ್ಕೆ ದಲಿತ ಯುವಕನನ್ನು ಹತ್ಯೆ ಮಾಡಿದ್ದಾರೆ. ಇಂತಹ ಕೃತ್ಯ ಎಸಗಿದ ಅಪರಾಧಿಗಳನ್ನು ಕೂಡಲೆ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಜಾ ವಿಮೋಚನಾ ಚಳವಳಿ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ಆಗ್ರಹಿಸಿದರು.

    ದೊಡ್ಡಬಳ್ಳಾಪುರ ನಗರದ ತಾಲೂಕು ಕಚೇರಿ ವೃತ್ತದಲ್ಲಿ ವಿಜಯಪುರದ ಸಿಂಧಗಿಯ ಬೂದಿಹಾಳ್ ಗ್ರಾಮದಲ್ಲಿ ದಲಿತ ಯುವಕ ಅನಿಲ್ ಇಂಗಳಗಿಯ ಕೊಲೆ ಖಂಡಿಸಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

    ಬಸವಣ್ಣನವರು ಸೇರಿ ಹಲವಾರು ಮಹನೀಯರು ಸಾರಿದ ಸಮಾನತೆ, ಅಸ್ಪೃಶ್ಯತೆಯ ಸಮಾಜ ಎಲ್ಲಿದೆ. ಕೇವಲ ದೇವಸ್ಥಾನದಲ್ಲಿ ಸರಿಸಮನಾಗಿ ಕುಳಿತ ಎಂಬ ಕಾರಣಕ್ಕೆ ಕೊಲೆ ಮಾಡುತ್ತಾರೆ. ಇಂತಹ ಕೀಳು ಮನಸ್ಥಿತಿಯ ಸಮಾಜ ತೊಲಗಬೇಕಿದೆ. ಕೂಡಲೇ ಕೊಲೆ ಅಪರಾಧಿಗಳನ್ನು ಬಂಧಿಸಿ ಶಿಕ್ಷಿಸಿಬೇಕು ಎಂದರು.

    ಪ್ರಜಾ ವಿಮೋಚನಾ ಚಳುವಳಿ ಜಿಲ್ಲಾಧ್ಯಕ್ಷ ಗೂಳ್ಯಹನುಮಣ್ಣ, ತಾಲೂಕು ಅಧ್ಯಕ್ಷ ತಳಗವಾರ ಪುನೀತ್, ಕಮ್ಯುನಿಸ್ಟ್ ಪಕ್ಷದ ಆರ್.ಚಂದ್ರತೇಜಸ್ವಿ, ತಾಲೂಕು ಕನ್ನಡ ಪಕ್ಷದ ಅಧ್ಯಕ್ಷ ಸಂಜೀವನಾಯ್ಕ, ಕಾರ್ಯದರ್ಶಿ ಡಿ.ಪಿ.ಆಂಜನೇಯ, ದಲಿತ ಹಕ್ಕುಗಳ ಸಮಿತಿಯ ಮಂಜುನಾಥ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಾಜುಸಣ್ಣಕ್ಕಿ, ತಾಲೂಕು ಸಂಚಾಲಕ ಛಲವಾದಿ ಸುರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts