More

  ದೆಹಲಿಯ ರಾಜಪಥ್​ನಲ್ಲಿ ಗಣರಾಜ್ಯೋತ್ಸವ ಸಂಭ್ರಮ: ಪರೇಡ್​ನಲ್ಲಿ ಅನಾವರಣಗೊಳ್ಳಲಿದೆ ದೇಶದ ಮಿಲಿಟರಿ ಸಾಮರ್ಥ್ಯ

  ನವದೆಹಲಿ: ದೇಶಾದ್ಯಂತ 74ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಪರೇಡ್‌ನಲ್ಲಿ ಅನಾವರಣಗೊಳ್ಳಲಿರುವ ದೇಶದ ಮಿಲಿಟರಿ ಸಾಮರ್ಥ್ಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ವಿಶಿಷ್ಟತೆಯ ಅದ್ಭುತ ಕ್ಷಣವನ್ನ ಕಣ್ತುಂಬಿಕೊಳ್ಳಲು ಭಾರತೀಯರು ಕಾತರದಿಂದ ಕಾಯುತ್ತಿದ್ದಾರೆ.

  ಇಂದಿನ ಗಣರಾಜ್ಯೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ರಾಜಪಥ್​ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ಮಾಡುವ ಮೂಲಕ ಗಣರಾಜ್ಯೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 10:30ಕ್ಕೆ ಪ್ರಾರಂಭವಾಗುವ ಗಣರಾಜ್ಯೋತ್ಸವ ಪರೇಡ್, ದೇಶದ ಮಿಲಿಟರಿ ಸಾಮರ್ಥ್ಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ವಿಶಿಷ್ಟ ಮಿಶ್ರಣವಾಗಿದ್ದು, ದೇಶದ ಬೆಳೆಯುತ್ತಿರುವ ಸ್ಥಳೀಯ ಸಾಮರ್ಥ್ಯಗಳು, ನಾರಿ ಶಕ್ತಿ ಮತ್ತು ‘ನವ ಭಾರತ’ದ ಚಿತ್ರಣ ಅನಾವರಣ ಗೊಳ್ಳಲಿದೆ.

  ಎನ್‌ಎಸ್‌ಜಿ ಸೇರಿದಂತೆ ಸುಮಾರು 6,000 ಯೋಧರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಸುಮಾರು 150 ಸಿಸಿಟಿವಿ ಕ್ಯಾಮರಾಗಳ ಸಹಾಯದಿಂದ ಕರ್ತವ್ಯಪಥವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಸರ್ಕಾರಿ ಚಾನೆಲ್‌ಗಳಾದ ದೂರದರ್ಶನ ಮತ್ತು ಸಂಸದ್ ಟಿವಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಮತ್ತು ಪರೇಡ್‌ ನೇರ ಪ್ರಸಾರವಾಗಲಿದೆ.

  ಗಣರಾಜ್ಯೋತ್ಸವ: ಮಾಣಿಕ್ ಷಾ ಮೈದಾನದ ಸುತ್ತ ಖಾಕಿ ಕಣ್ಗಾವಲು, 7 ಸಾವಿರ ಸಾರ್ವಜನಿಕರಿಗೆ ಪರೇಡ್ ವೀಕ್ಷಿಸಲು ಅವಕಾಶ

  ಅವನಿಗೆ ಪ್ಯಾಂಟ್ ಬಿಚ್ಚೋಕೆ ನಾನು ಹೇಳಿದ್ನಾ? ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಆಕ್ರೋಶ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts