More

    ಗಣರಾಜ್ಯೋತ್ಸವ: ಮಾಣಿಕ್ ಷಾ ಮೈದಾನದ ಸುತ್ತ ಖಾಕಿ ಕಣ್ಗಾವಲು, 7 ಸಾವಿರ ಸಾರ್ವಜನಿಕರಿಗೆ ಪರೇಡ್ ವೀಕ್ಷಿಸಲು ಅವಕಾಶ

    ಬೆಂಗಳೂರು: ಮಾಣಿಕ್ ಷಾ ಮೈದಾನದಲ್ಲಿ 74ನೇ ಗಣರಾಜ್ಯೋತ್ಸವ ಅದ್ದೂರಿ ಆಚರಣೆಗೆ ಸಕಲ ಸಿದ್ಧತೆ ನಡೆದಿದ್ದು, ಮೈದಾನದ ಸುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರತೆಗಾಗಿ ಮೈದಾನದ ಮೂಲೆ ಮೂಲೆಯಲ್ಲೂ 100ಕ್ಕೂ ಅಧಿಕ ಸಿಸಿಟಿವಿ ಅಳವಡಿಸಲಾಗಿದೆ.

    ಗುರುವಾರ ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರು ಧ್ವಜಾರೋಹಣ ನೇರವೇರಿಸಲಿದ್ದಾರೆ. ‌ಕಾರ್ಯಕ್ರಮದಲ್ಲಿ 1,520 ಜನ ಭಾಗಿಯಾಗಲು ಅವಕಾಶ ನೀಡಲಾಗಿದ್ದು, 35 ಕಲಾ ತಂಡಗಳು ಪ್ರದರ್ಶನ ನೀಡಲಿವೆ. 7 ಸಾವಿರ ಸಾರ್ವಜನಿಕರಿಗೆ ಪರೇಡ್ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. 2 ಸಾವಿರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

    12 ಡಿಸಿಪಿ, 22 ಎಸಿಪಿ, 45 ಇನ್​ಸ್ಪೆಕ್ಟರ್, 115 ಪಿಎಸ್​ಐ, 70ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿ 1300ಕ್ಕೂ ಹೆಚ್ಚು ಪೊಲೀಸರನ್ನು ಮಾಣಿಕ್​ ಷಾ ಮೈದಾನದಲ್ಲಿ ಭಧ್ರತೆಗಾಗಿ ನಿಯೋಜಿಸಲಾಗಿದೆ.

    ಸಂಪಾದಕೀಯ: ಅಭಿವೃದ್ಧಿಯ ಹೆಜ್ಜೆ; ಗಣರಾಜ್ಯೋತ್ಸವಕ್ಕೆ ಆತ್ಮಾವಲೋಕನ

    ಅವನಿಗೆ ಪ್ಯಾಂಟ್ ಬಿಚ್ಚೋಕೆ ನಾನು ಹೇಳಿದ್ನಾ? ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts