More

    ಕರೊನಾ ವೈರಸ್ ನಿಜವಾಗಿ ಹುಟ್ಟಿದ್ದು ಹೇಗೆ ? ಸದ್ಯದಲ್ಲೇ ಬರಲಿದೆ ತಜ್ಞರ ವರದಿ

    ವುಹಾನ್: ಜಗತ್ತನ್ನೇ ಅಲ್ಲೋಲಕಲ್ಲೋಲ ಮಾಡಿದ ಮಹಾಮಾರಿ ಕರೊನಾ ನಿಜವಾಗಿ ಹುಟ್ಟಿದ್ದು ಹೇಗೆ ಎಂಬುದು ಶೀರ್ಘದಲ್ಲೇ ಬೆಳಕಿಗೆ ಬರಲಿದೆ. ಏಕೆಂದರೆ, ಕರೊನಾ ವೈರಸ್ ಮೊದಲು ಕಾಣಿಸಿಕೊಂಡ ಚೀನಾದ ವುಹಾನ್​ನಲ್ಲಿ ತನಿಖೆ ನಡೆಸುತ್ತಿರುವ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ ಸದ್ಯದಲ್ಲೇ ತನಿಖೆ ಪೂರೈಸಲಿದೆ ಎನ್ನಲಾಗಿದೆ.

    ಇಡೀ ಜಗತ್ತಿಗೆ ಕರೊನಾ ಮಹಾಮಾರಿಯನ್ನು ಹರಡಿರುವ ಕೋವಿಡ್-19 ವೈರಾಣು, ಡಿಸೆಂಬರ್ 2019 ರಲ್ಲಿ ವುಹಾನ್​ನಲ್ಲಿ ಜನಿಸಿದ್ದರ ಕಾರಣವನ್ನು 10 ಸ್ವತಂತ್ರ ವಿಜ್ನಾನಿಗಳ ತಂಡವು ಶೋಧಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ತಜ್ಞರ ತಂಡ ಜನವರಿ 14 ಕ್ಕೆ ವುಹಾನ್​ಗೆ ತೆರಳಿತ್ತು. ಕರೊನಾ ವೈರಾಣು ಮೊದಲು ಹುಟ್ಟಿತು ಎನ್ನಲಾದ ವುಹಾನ್​ನ ಸೀಫುಡ್​ ಮಾರುಕಟ್ಟೆ ಸೇರಿದಂತೆ ಹಲವು ಸಂಶೋಧನಾ ಕೇಂದ್ರ, ಆಸ್ಪತ್ರೆಗಳಲ್ಲಿ ತಂಡ ಶೋಧ ಕಾರ್ಯ ನಡೆಸಿದೆ. ಸಾರ್ಸ್-ಕೋವ್-2 ವೈರಾಣುವಿನ ಪ್ರಾಣಿಮೂಲವನ್ನು ಕಂಡುಹಿಡಿದು, ಅದು ಮನುಷ್ಯರಿಗೆ ಹೇಗೆ ತಲುಪಿತು ಎಂಬುದನ್ನು ಅಧ್ಯಯನ ಮಾಡುತ್ತಿದೆ.

    ಇದನ್ನೂ ಓದಿ: ಮೇಡ್ ಇನ್ ಇಂಡಿಯಾ ಕರೊನಾ ಲಸಿಕೆಗಾಗಿ 25 ದೇಶಗಳು ಕ್ಯೂನಲ್ಲಿವೆ

    ತಂಡದ ಸದಸ್ಯರಾದ ನ್ಯೂಯಾರ್ಕ್​ ಮೂಲದ ಪ್ರಾಣಿಶಾಸ್ತ್ರಜ್ಞ, ಪೀಟರ್ ಡಾಸ್ಜಾಕ್ , ತಮ್ಮ ತಂಡ ಚೀನಾದ ತಜ್ಞರೊಂದಿಗೆ ಕೆಲಸ ಮಾಡಿದ್ದು, “ಏನು ನಡೆಯಿತು ಎಂಬ ಬಗ್ಗೆ ಕೆಲವು ನಿಜವಾದ ಸುಳಿವುಗಳನ್ನು ಪತ್ತೆ ಹಚ್ಚಿದೆ” ಎಂದಿದ್ದಾರೆ. ತಾವು ಫೆಬ್ರವರಿ 10 ರಂದು ಚೀನಾದಿಂದ ಮರಳುವ ವೇಳೆಗೆ ಈ ಸುದೀರ್ಘ ತನಿಖೆಯ ಫಲಿತಾಂಶವು ಹೊರಬೀಳಲಿದೆ ಎಂದೂ ತಿಳಿಸಿದ್ದಾರೆ.

    “ಏನಾಯಿತು ಎಂಬ ಬಗ್ಗೆ ಆಳವಾದ ಅರಿವು ಮೂಡಿಸುವುದಕ್ಕೆ ಈ ತನಿಖಾ ವರದಿ ನಾಂದಿ ಹಾಡಲಿದೆ. ಈ ಮುಂದೆ ಈ ರೀತಿಯ ಮಹಾಮಾರಿ ಹರಡದಂತೆ ಎಚ್ಚರ ವಹಿಸಲು ಸಹಾಯಕವಾಗಲಿದೆ” ಎಂದಿದ್ದಾರೆ. “ಇಂಥ ವೈರಾಣುಗಳು ಹೇಗೆ ಹುಟ್ಟುತ್ತವೆ ಎಂದು ಅರಿತುಕೊಳ್ಳುವುದು ನಮ್ಮ ಮೂಲ ಉದ್ದೇಶವಾಗಿದೆ. ಏಕೆಂದರೆ ಈ ರೀತಿಯ ಜಾಗತಿಕ ಆರ್ಥಿಕ ಸಂಕಟವನ್ನು ಮತ್ತು ಅಗಾಧ ಸಂಖ್ಯೆಯ ಸಾವುಗಳನ್ನು ಮತ್ತೆ ಅನುಭವಿಸುವುದು ತರವಲ್ಲ” ಎಂದು ಪೀಟರ್ ಡಾಸ್ಜಾಕ್ ಹೇಳಿದ್ದಾರೆ.(ಏಜೆನ್ಸೀಸ್)

    ಅರ್ಧ ಕೋಟಿ ಭಾರತೀಯರಿಗೆ ತಲುಪಿದ ಕರೊನಾ ಲಸಿಕೆ ; ಉತ್ತರಪ್ರದೇಶದಲ್ಲಿ ಅತಿಹೆಚ್ಚು ಫಲಾನುಭವಿಗಳು

    ಟೆಕ್ರಿ ಗಡಿಯಲ್ಲಿ ರೈತನ ಆತ್ಮಹತ್ಯೆ? 40 ಲಕ್ಷ ಟ್ರ್ಯಾಕರ್​ ತಂದು ರ‍್ಯಾಲಿ ನಡೆಸುವುದು ಗುರಿ ಎಂದಿದ್ದಾರೆ ಟಿಕಾಯತ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts