More

    ಭಾರತೀಯರ ಮನೆಯಲ್ಲೇಕೆ ಇಂಥದ್ದೊಂದು ಇರಲು ಸಾಧ್ಯವಿಲ್ಲ?; ಹೀಗೆಂದ ಕೆಲವೇ ಗಂಟೆಗಳಲ್ಲಿ ಸರಸ್ವತಿ ಟ್ರೆಂಡಿಂಗ್

    ಬೆಂಗಳೂರು: ಟ್ವಿಟರ್​ನಲ್ಲಿ ಸದಾ ಯಾವುದಾದರೂ ಒಂದು ವಿಷಯ ಟ್ರೆಂಡಿಂಗ್ ಆಗುತ್ತಲೇ ಇರುತ್ತದೆ. ಆ ಮೂಲಕ ಜನರ ಮೂಡ್​, ಜಗತ್ತಿನ ದಿನದ ಬೆಳವಣಿಗೆ ಇತ್ಯಾದಿಗಳು ಸುಲಭದಲ್ಲಿ ಅರಿವಿಗೆ ಬರುತ್ತಿರುತ್ತವೆ. ಇಂದು ಮೆಟ್ಟಿಲೊಂದರ ವಿಷಯದ ಕುರಿತಾಗಿ ಮಾಡಿದ್ದ ಟ್ವೀಟ್​ಗೆ ಪ್ರತಿಯಾಗಿ ಸರಸ್ವತಿ ಟ್ರೆಂಡಿಂಗ್ ಆಗಿರುವುದರಿಂದ ಪುಸ್ತಕಗಳ ಕುರಿತು ಭಾರತೀಯರ ದೈವಿಕ ಭಾವನೆ ಮತ್ತೊಮ್ಮೆ ಜಾಹೀರಾಗಿದೆ.

    ಸುಧೀರ್ ಎಂಬ ಇಂಜಿನಿಯರ್​ ಒಬ್ಬರು ಪುಸ್ತಕಗಳ ಶೆಲ್ಫ್​ ಥರ ಇರುವಂಥ ಮೆಟ್ಟಿಲ ಚಿತ್ರವೊಂದನ್ನು ಹಂಚಿಕೊಂಡು, ‘ಭಾರತೀಯರ ಮನೆಯಲ್ಲೇಕೆ ಇಂಥದ್ದೊಂದು ಇರಲು ಸಾಧ್ಯವಿಲ್ಲ?’ ಎಂದು ಪ್ರಶ್ನಿಸಿದ್ದರು. ಅವರು ಹೀಗೆ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಪುಸ್ತಕಗಳೆಂದರೆ ನಮಗೆ ಸರಸ್ವತಿ ಎಂದು ನಾನಾ ರೀತಿಯಲ್ಲಿ ಹಲವರು ಪ್ರತಿಕ್ರಿಯಿಸಿದ್ದರಿಂದ ಸರಸ್ವತಿ ಟ್ರೆಂಡಿಂಗ್ ಆಗಿತ್ತು.

    ಇದನ್ನೂ ಓದಿ: ನೌಕರಿ ಕೊಟ್ಟವರನ್ನೇ ಕೊಲೆ ಮಾಡಲು ಯತ್ನ; ಸಲೂನ್​ ಶಾಪ್​ ಮಾಲೀಕ ಹಾಗೂ ತಂದೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

    ಇದನ್ನು ಟ್ವೀಟ್ ಮಾಡಲಾದ ಐದೇ ಗಂಟೆಗಳಲ್ಲಿ 290ಕ್ಕೂ ಅಧಿಕ ಮಂದಿ ಇದನ್ನು ರಿಟ್ವೀಟ್​ ಮಾಡಿಕೊಂಡಿದ್ದಷ್ಟೇ ಅಲ್ಲದೆ, 160ಕ್ಕೂ ಅಧಿಕ ಮಂದಿ ಕೋಟ್​ ಟ್ವೀಟ್ ಮಾಡಿದ್ದು, 2900ಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಹೀಗೊಂದು ಟ್ವೀಟ್​ ಹಾಕಿದ್ದ ವ್ಯಕ್ತಿಗೆ ಕೆಲವರು ನೆಗೆಟಿವ್ ಆಗಿ ರಿಪ್ಲೈ ಮಾಡಿದ್ದರೂ ಬಹಳಷ್ಟು ಮಂದಿ ಭಾರತೀಯರು ಯಾಕೆ ಹೀಗೆ ಮಾಡುವುದಿಲ್ಲ ಎಂದು ತಮ್ಮದೇ ಆದ ರೀತಿಯಲ್ಲಿ ವಿವರಿಸಿ ಸರಸ್ವತಿಯನ್ನು ನೆನಪಿಸಿಕೊಳ್ಳುವ ಜತೆಗೆ ಭಾರತೀಯ ಸಂಸ್ಕೃತಿಯ ಮಹತ್ವವನ್ನೂ ಹೇಳಿದ್ದಾರೆ. ಹೀಗೆ ಜನರೆಲ್ಲ ಪ್ರತಿಕ್ರಿಯಿಸಲಾರಂಭಿಸಿದ್ದು, ಟ್ವೀಟ್​ ಮಾಡಿದ್ದ ವ್ಯಕ್ತಿ ಪೋಸ್ಟ್​ ಮಾಡಿದ್ದ ನಾಲ್ಕು ಗಂಟೆಗಳ ಒಳಗೆ, ‘ಪುಸ್ತಕ ಎಂದರೆ ಸರಸ್ವತಿ ಇದ್ದಂತೆ..’ ಎಂದು ತಾವೂ ರಿಪ್ಲೈ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts