More

    ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿಸಿ: ಅಶೋಕ್ ನಾಯ್ಕ

    ಹೊಳೆಹೊನ್ನೂರು: ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುವುದು ಪುಣ್ಯದ ಕೆಲಸ ಎಂದು ಮಾಜಿ ಶಾಸಕ ಅಶೋಕ್‌ನಾಯ್ಕ ಹೇಳಿದರು.
    ಸೋಮವಾರ ಸಮೀಪದ ಅರಹತೋಳಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಂಘದ ಸದಸ್ಯತ್ವ ಹೆಚ್ಚಿಸಿಕೊಂಡು ಕ್ಷೇತ್ರ ವಿಸ್ತರಿಸಿಕೊಳ್ಳಬೇಕು. ಗ್ರಾಮದ ಪ್ರತಿಯೊಬ್ಬರು ಷೇರು ಹಾಕಿ ಖಾತೆ ತೆರೆದು ನಿಯಮಿತವಾಗಿ ವ್ಯವಹರಿಸಬೇಕು. ರೈತರು ಸಂಘದಲ್ಲಿ ದೊರೆಯುವ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಸಂಘದ ಏಳಿಗೆಗೆ ಶ್ರಮಿಸಬೇಕು ಎಂದರು.
    ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್.ಷಡಕ್ಷರಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ರೈತರಿಗೆ ಹಲವು ರೀತಿಯ ಹಣಕಾಸಿನ ನೆರವು ಲಭಿಸುತ್ತಿವೆ. ಪ್ರತಿಯೊಬ್ಬರು ಸಹಕಾರ ಬ್ಯಾಂಕ್‌ಗಳಲ್ಲಿ ವ್ಯವಹರಿಸಬೇಕು. ಕೃಷಿಕರಿಗೆ ಸಿಗುವ ಕಡಿಮೆ ಬಡ್ಡಿದರದ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರ ಸುಸ್ತಿ ಕೃಷಿ ಸಾಲಗಳಿಗೆ ಬಡ್ಡಿ ಮನ್ನಾ ರಿಯಾಯಿತಿ ನೀಡಿದೆ. ನಿಗದಿತ ಸಮಯದಲ್ಲಿ ಸುಸ್ತಿದಾರರು ಅಸಲು ಮೊತ್ತವನ್ನು ಪಾವತಿಸಿ ಋಣ ಮುಕ್ತರಾಗಬಹುದು ಎಂದು ಹೇಳಿದರು.
    ಸಿ.ಪಿ ಚಂದ್ರಶೇಖರ್, ಯತೀಶ್ವರ ಆಚಾರ್ ರಾಜೀನಾಮೆಯಿಂದ ತೆರವಾಗಿದ್ದ ಅರಹತೊಳಲು ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ಎ.ಆರ್.ಬಸವರಾಜಪ್ಪ(ಅಧ್ಯಕ್ಷ), ಡಿ.ಎಚ್.ಪಾಲಾಕ್ಷಪ್ಪ(ಉಪಾಧ್ಯಕ್ಷ) ಅವಿರೋಧವಾಗಿ ಆಯ್ಕೆಯಾದರು. ಸಹಕಾರ ಇಲಾಖೆಯ ಜಲಜಾಕ್ಷಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

    ಮುಖಂಡರಾದ ರಾಜೇಶ್ ಪಾಟೀಲ್, ಸುಬ್ರಹ್ಮಣಿ, ಮೂಡಬಾಗಿಲು ಚಂದ್ರಶೇಖರ್, ಎ.ಎಂ ಮಲ್ಲಿಕಾರ್ಜುನ್, ಮಹೇಶ್ವರಪ್ಪ, ಸಿ.ಪಿ.ಚಂದ್ರಶೇಖರ್, ರವಿಕುಮಾರ್, ಶೇಖರಪ್ಪ, ಜಯದೇವಪ್ಪ, ಯತೀಶ್ವರ ಆಚಾರ್, ನಾಗೇಂದ್ರಯ್ಯ, ಯಶೋಧಮ್ಮ, ಜಯಲಕ್ಷ್ಮೀ, ರೇಖಾ, ಸಿದ್ದಪ್ಪ, ಎಸ್.ಶ್ರೀನಿವಾಸ್, ಶ್ರೀಧರ್, ಶಿವಕುಮಾರ್ ಪಾಟೇಲ್, ಕೆ.ಆರ್.ಸತೀಶ್, ರಂಗನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts