More

    ರೇಣುಕಾಚಾರ್ಯರರು ಮನುಕುಲದ ಉದ್ಧಾರಕ; ಕಲ್ಯಾಣಿಚೌಕಿಮಠದ ಬಸವರಾಜಶಾಸ್ತ್ರಿ

    ಕಂಪ್ಲಿ: ಲಿಂಗದೀಕ್ಷೆ ನೀಡುವರೊಂದಿಗೆ ಮನುಕುಲದ ಉದ್ಧಾರಕ್ಕೆ ಆದಿ ಜಗದ್ಗುರು ಶ್ರೀರೇಣುಕಾಚಾರ್ಯರು ಶ್ರಮಿಸಿದ್ದಾರೆ ಎಂದು ಕಲ್ಯಾಣಿಚೌಕಿಮಠದ ಬಸವರಾಜಶಾಸ್ತ್ರಿ ಹೇಳಿದರು.


    ಇಲ್ಲಿನ ಪುರಸಭಾಂಗಣದಲ್ಲಿ ಭಾನುವಾರ ಜರುಗಿದ ವೀರಶೈವ ಧರ್ಮ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀರೇಣುಕಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನವನನ್ನು ಮಹಾದೇವ, ಅಂಗವನ್ನು ಲಿಂಗವನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮನುಕುಲದ ಏಕತೆ, ಉದ್ಧಾರಕ್ಕಾಗಿ ರೇಣುಕಾಚಾರ್ಯರು ಶ್ರಮಿಸಿದ್ದಾರೆ ಎಂದರು.


    ವೀರಶೈವ ಸಂಘದ ತಾಲೂಕು ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಮಾತನಾಡಿ, ಮಾ.12ರಂದು ಪಟ್ಟಣದಲ್ಲಿ ಶ್ರೀರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ, ಧರ್ಮಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು. ಪುರಸಭೆ ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ, ವೀರಶೈವ ಲಿಂಗಾಯತ ಸಮಾಜದ ಪ್ರಮುಖರಾದ ಎನ್.ಎಂ.ಪತ್ರೇಯ್ಯಸ್ವಾಮಿ, ವಿ.ವಿದ್ಯಾಧರ, ಎಸ್.ಡಿ.ಬಸವರಾಜ್, ಎಚ್.ನಾಗರಾಜ, ಮುಕ್ಕುಂದಿ ಮಮತಾ ತಿಪ್ಪೇಸ್ವಾಮಿ, ಯು.ಎಂ.ವಿದ್ಯಾಶಂಕರ್, ವಸ್ತ್ರದ ಜಡೆಯ್ಯಸ್ವಾಮಿ, ಅರವಿ ಅಮರೇಶ, ಎಲಿಗಾರ ವೆಂಕಟರೆಡ್ಡಿ, ಡಿ.ಎಚ್.ಎಂ.ರವೀಂದ್ರ, ಟಿ.ಎಚ್.ಎಂ.ರಾಜಕುಮಾರ್, ಎಸ್.ಬಂಡೆಯ್ಯಸ್ವಾಮಿ, ಮೃತ್ಯುಂಜಯಸ್ವಾಮಿ, ಮುತ್ತಣ್ಣ ಬೆನಕನಾಳಮಠ ಸೇರಿ ಇತರರಿದ್ದರು.


    ವಿವಿಧಡೆ ಆಚರಣೆ: ತಹಸೀಲ್ದಾರ್ ಗೌಸಿಯಾಬೇಗಮ್ ಸಮ್ಮುಖದಲ್ಲಿ ತಹಸಿಲ್ ಕಚೇರಿಯಲ್ಲಿ, ತಾಲೂಕು ಪಂಚಾಯಿತಿ, ಉಪನೋಂದಣಿ, ಶಾಸಕರ ಕಚೇರಿ ಹಾಗೂ ಪೊಲೀಸ್ ಠಾಣೆಯಲ್ಲಿ ಯುಗಮಾನೋತ್ಸವ ಕಾರ್ಯಕ್ರಮ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts