More

    ನರೇಂದ್ರ ಮೋದಿ ಸ್ಟೇಡಿಯಂ ಹೆಸರೂ ಬದಲಾಯಿಸಿ ಎಂದ ನೆಟ್ಟಿಗರು!

    ನವದೆಹಲಿ : ಭಾರತದ ಅತ್ಯುನ್ನತ ಕ್ರೀಡಾ ಪುರಸ್ಕಾರಕ್ಕೆ ಇಂದಿನವರೆಗೆ ರಾಜೀವ್ ಗಾಂಧಿ ಖೇಲ್​ ರತ್ನ ಪ್ರಶಸ್ತಿ ಎಂಬ ಹೆಸರಿತ್ತು. ಇಂದು ಬೆಳಿಗ್ಗೆ ಅದಕ್ಕೆ ಹಾಕಿ ದಿಗ್ಗಜ ಮೇಜರ್​ ಧ್ಯಾನ್​ ಚಂದ್​ ಖೇಲ್​ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿರುವುದಾಗಿ ಪ್ರಧಾನಿ ಮೋದಿ ಟ್ವಿಟರ್​ನಲ್ಲಿ ಘೋಷಿಸಿದರು.

    ಕ್ರೀಡಾ ಪ್ರಶಸ್ತಿಗೆ ಕ್ರೀಡಾ ಕ್ಷೇತ್ರದವರದೇ ಹೆಸರು ಇಡುವುದು ಉತ್ತಮ ಕ್ರಮವಾಗಿದೆ ಎಂದು ಹಲವಾರು ಜನರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅದರೊಂದಿಗೇ, ವಿಪಕ್ಷ ನಾಯಕರೂ ಸೇರಿದಂತೆ ಹಲವರು ಗುಜರಾತ್​ನ ಮೊಟೆರಾ ಕ್ರಿಕೆಟ್​ ಕ್ರೀಡಾಂಗಣಕ್ಕೆ ಇತ್ತೀಚೆಗೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಿದ ಬಗ್ಗೆ ಉಲ್ಲೇಖಿಸಿದ್ದಾರೆ. ಕ್ರೀಡಾಂಗಣಗಳಿಗೂ ರಾಜಕಾರಣಿಗಳ ಹೆಸರಿನ ಹಂಗು ಬೇಡ ಎಂದು ಕೆಲವರು ಟ್ವಿಟರ್​ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಯುವ ಕ್ರೀಡಾಪಟುಗಳಿಗೆ ಸರ್ಕಾರಿ ನೆರವು; ಶಾಸಕ ರಾಜಾ ವೆಂಕಟಪ್ಪ ನಾಯಕ ಭರವಸೆ

    “ಇದು ಮೋದಿ ಸರ್ಕಾರದಿಂದ ಉತ್ತಮ ನಿರ್ಧಾರವಾಗಿದೆ. ನರೇಂದ್ರ ಮೋದಿ ಸ್ಟೇಡಿಯಂ ಮತ್ತು ಜೈಟ್ಲಿ ಸ್ಟೇಡಿಯಂಗೂ ಮರುನಾಮಕರಣ ಮಾಡುವರೆಂದು ಆಶಿಸುತ್ತೇನೆ. ಎಲ್ಲಾ ರಾಜಕಾರಣಿಗಳ ಹೆಸರನ್ನು ತೆಗೆಯಿರಿ” ಎಂದು ಯೂಟ್ಯೂಬರ್​ ಧೃವ ರಾಠಿ ಬರೆದಿದ್ದಾರೆ. ಮೋದಿ ಸ್ಟೇಡಿಯಂ ಹೆಸರನ್ನು ಕಪಿಲ್ ದೇವ್​ ಅಥವಾ ಸಚಿನ್ ಸ್ಟೇಡಿಯಂ ಎಂದು ಬದಲಿಸಿ ಎಂದು ಅಮರ್​ಕಾಂತ್​ ಸಿಂಗ್​ ಎಂಬುವರು ಸಲಹೆ ನೀಡಿದ್ದಾರೆ.

    ಈ ರೀತಿ ಸಂದೇಶ ಕಳುಹಿಸಿದವರಲ್ಲಿ ಕ್ರಿಕೆಟಿಗ ಇರ್​​ಫಾನ್ ಪಠಾನ್ ಕೂಡ ಒಬ್ಬರು. “ಕ್ರೀಡಾಪಟುವಿಗೆ ಮಾನ್ಯತೆ ಸಿಗುವುದು, ಅವರ ಮೇಲೆ ಪ್ರಶಸ್ತಿಯನ್ನು ಹೆಸರಿಸುವುದು ಉತ್ತಮ ಬೆಳವಣಿಗೆಯಾಗಿದೆ… ಭವಿಷ್ಯದಲ್ಲಿ ಕ್ರೀಡಾಂಗಣಗಳಿಗೂ ಕ್ರೀಡಾಪಟುಗಳ ಹೆಸರು ಸಿಗಲಿವೆ ಎಂದು ಆಶಿಸುತ್ತೇನೆ” ಎಂದು ಪಠಾಣ್​ ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್)

    ಸರ್ವೋನ್ನತ ಕ್ರೀಡಾ ಪುರಸ್ಕಾರಕ್ಕೆ ಹಾಕಿ ದಿಗ್ಗಜ ಮೇಜರ್ ಧ್ಯಾನ್​ಚಂದ್​ ಹೆಸರು

    ಬೆನ್ನು, ಸೊಂಟ ನೋವು ನಿಯಂತ್ರಣಕ್ಕೆ ಈ ಆಸನ ಉಪಯುಕ್ತ

    ಸಾಧನೆಯ ಪಥದಲ್ಲಿ ನೆರವಾದ ಟ್ರಕ್​ ಚಾಲಕರನ್ನು ಸತ್ಕರಿಸಿದ ಮೀರಾಬಾಯಿ ಚಾನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts