More

    ನಿಮ್ಮ ಕಾರಿನ ಮೇಲೆ ಸ್ಕ್ರ್ಯಾಚ್ ಆಗಿದೆಯಾ? ಗ್ಯಾರೇಜಿಗೆ ಹೋಗುವ ಅಗತ್ಯ ಇಲ್ಲ, ಮನೆಯಲ್ಲೇ ಹೀಗೆ ಸರಿಪಡಿಸಬಹುದು!

    ಬೆಂಗಳೂರು: ಕಾರ್ ಅನ್ನು ಎಷ್ಟೇ ನಾಜೂಕಾಗಿ ಬಳಸಿದರೂ ಕೆಲವೊಮ್ಮೆ ಸ್ಕ್ರ್ಯಾಚ್ ಅಗುತ್ತದೆ. ಆಗಾಗ ಸಣ್ಣ ಮಕ್ಕಳು ಆಟ ಆಡುವಾಗ ಕಾರ್ ಮೇಲೆ ಗೀಟೆಳೆದು ಹೋಗುತ್ತಾರೆ. ಅದನ್ನು ತೆಗೆಯಲು ಗ್ಯಾರೇಜಿಗೆ ಅಥವಾ ಶೋ ರೂಮ್ ಗೆ ಹೋಗಬೇಕು. ಮೆಕ್ಯಾನಿಕ್​ಗೆ ದುಡ್ಡು ತೆರಬೇಕು. ಅದರ ಬದಲು ಮನೆಯಲ್ಲಿಯೇ ಕುಳಿತು, ಕಡಿಮೆ ಖರ್ಚಿನಲ್ಲಿ ನಿಮ್ಮ ಕಾರಿನ ಸ್ಕ್ರ್ಯಾಚ್ ತೆಗೆಯಲು ಇಲ್ಲಿದೆ ನೋಡಿ ಉಪಾಯ.

    ಮಾರ್ಕೆಟ್​ನಲ್ಲಿ ಹತ್ತು ಹಲವಾರು ಸ್ಕ್ರ್ಯಾಚ್ ರಿಮೂವಲ್ ಸಲ್ಯೂಶನ್ ದೊರೆಯುತ್ತದೆ. ಅದನ್ನು ಮನೆಗೆ ತನ್ನಿ. ಅದು ಒಂದು ತರಹದ ಕ್ರೀಮ್ ಆಗಿದ್ದು, ಗಾಡಿ ಮೇಲಿನ ಸ್ಕ್ರ್ಯಾಚ್ ತೆಗೆಯುವ ಕೆಲಸ ಮಾಡುತ್ತದೆ.

    ಸ್ಕ್ರ್ಯಾಚ್ ಆಗಿರುವ ಜಾಗವನ್ನು ಸ್ವಚ್ಚಗೊಳಿಸಿ:
    ಗಾಡಿಯ ಸ್ಕ್ರ್ಯಾಚ್ ಆದ ಭಾಗವನ್ನು ಸ್ವಲ್ಪ ಕೂಡ ಮಣ್ಣಿರದಂತೆ ಒಳ್ಳೆಯ ಬಟ್ಟೆಯಿಂದ ಬೆಚ್ಚಗಿನ ನೀರಿನ ಮೂಲಕ ಸ್ವಚ್ಚಗೊಳಿಸಿ. ಸ್ಕ್ರ್ಯಾಚ್ ರಿಮೂವಲ್ ಸಲ್ಯೂಶನ್ ಬಳಸುವ ಮುಂಚೆ ಮೈಕ್ರೊ-ಫೈಬರ್ ಬಟ್ಟೆಯಿಂದ ಸ್ಕ್ರ್ಯಾಚ್ ಆದ ಜಾಗವನ್ನು ಒರೆಸಿ.

    ನೀವು ಸ್ಕ್ರ್ಯಾಚ್ ರಿಮೂವಲ್ ಸಲ್ಯೂಶನ್ ಕೊಳ್ಳಲು ಹೋದಾಗ ಅಂಗಡಿಯವನನ್ನು ಬಫಿಂಗ್ ಪ್ಯಾಡ್ ಕೇಳಿ. ರಿಮೂವಲ್ ಸಲ್ಯೂಶನ್ ಅನ್ನು ಬಫಿಂಗ್ ಪ್ಯಾಡ್ ಮೇಲೆ ಹರಡಿ. ಈ ಬಫಿಂಗ್ ಪ್ಯಾಡ್ ತೂತುಗಳನ್ನು ಮುಚ್ಚುವ ಕೆಲಸ ಮಾಡುತ್ತದೆ. ರಿಮೂವಲ್ ಸಲ್ಯೂಶನ್ ಅನ್ನು ತೆಳುವಾಗಿ ಸ್ಕ್ರ್ಯಾಚ್ ಆದ ಭಾಗಕ್ಕೆ ಹಚ್ಚಿ. ಆ ಭಾಗ ಮೃದುವಾಗುವವರೆಗೆ ಚೆನ್ನಾಗಿ ಉಜ್ಜಿ.

    ಈ ಕ್ರಮವನ್ನು ಒಂದೆರಡು ಬಾರಿ ಮಾಡ ಬೇಕಾಗುತ್ತದೆ. ಸ್ಕ್ರ್ಯಾಚ್ ಎಷ್ಟು ಆಳವಾಗಿದೆ ಮತ್ತು ಸ್ಕ್ರ್ಯಾಚ್ ರಿಮೂವಲ್ ಸಲ್ಯೂಶನ್ ಎಂಥ ಗುಣ ಮಟ್ಟದ್ದು ಎಂಬುದರ ಮೇಲೆ ಎಷ್ಟು ಬಾರಿ ಹೀಗೆ ಮಾಡ ಬೇಕೆಂಬುದು ನಿರ್ಧಾರವಾಗುತ್ತದೆ. ನಿಮಗೆ ಸ್ಕ್ರ್ಯಾಚ್ ಸಂಪೂರ್ಣವಾಗಿ ಹೋಗ ಬೇಕೆಂದರೆ ತಾಳ್ಮೆಯಿಂದ ಮೇಲೆ ಹೇಳಿರುವ ಕ್ರಮವನ್ನು ಪಾಲಿಸಿ. ಕೊನೆಗೆ ನಿಮ್ಮ ಕಾರಿನ ಸ್ಕ್ರ್ಯಾಚ್ ಆದ ಭಾಗ ಮೊದಲಿದ್ದಂತೆ ಕಾಣಿಸತೊಡಗುತ್ತದೆ. ಇಲ್ಲಿ ಸ್ಕ್ರ್ಯಾಚ್ ಆಗಿತ್ತು ಎಂಬುದು ಯಾರ ಗಮನಕ್ಕೂ ಬರದಂತೆ ಆಗುತ್ತದೆ. – ಏಜೆನ್ಸೀಸ್

    ‘ಫಾರ್ ಎವರ್ ಮುಂಬೈ’; ನಿವೃತ್ತಿಯ ನಂತರವೂ ಮುಂಬೈ ತಂಡದ ಸದಸ್ಯನಾಗಿರುತ್ತೇನೆ ಎಂದ ಪೊಲಾರ್ಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts