More

    ‘ಫಾರ್ ಎವರ್ ಮುಂಬೈ’; ನಿವೃತ್ತಿಯ ನಂತರವೂ ಮುಂಬೈ ತಂಡದ ಸದಸ್ಯನಾಗಿರುತ್ತೇನೆ ಎಂದ ಪೊಲಾರ್ಡ್

    ನವದೆಹಲಿ: ಮುಂಬೈ ತಂಡದ ಖಾಯಂ ಆಟಗಾರನಂತಿದ್ದ ಆಲ್​ರೌಂಡರ್ ಕೈರೊನ್ ಪೊಲಾರ್ಡ್​, ಐಪಿಎಲ್​ ಲೀಗ್​ಗೆ ನಿವೃತ್ತಿ ಘೋಷಿಸಿದ್ದಾರೆ. ಪೊಲಾರ್ಡ್​ ತನ್ನ ನಿವೃತ್ತಿಯನ್ನು ತಿಳಿಸುತ್ತಿದ್ದಂತೆ ಮುಂಬೈ ಇಂಡಿಯನ್ಸ್​ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯ ಪ್ರೊಫೈಲ್ ಫೋಟೋದಲ್ಲಿ, ಪೊಲಾರ್ಡ್ ಫೋಟೋ ಬಳಸಿ ಗೌರವ ಸೂಚಿಸಿದೆ. ಜತೆಗೆ ‘ಫಾರ್ ಎವರ್ ಮುಂಬೈ’ ಎಂದು ಬರೆದುಕೊಂಡಿದೆ.

    2010ರಿಂದ ಮುಂಬೈ ತಂಡದ ಭಾಗವಾಗಿದ್ದ ಪೊಲಾರ್ಡ್​​ನ್ನು, ಈ ಬಾರಿ ಹರಾಜಿಗೂ ಮುನ್ನ ಮುಂಬೈ ತಂಡ ಕೈಬಿಟ್ಟಿತ್ತು. ಇದರ ಬೆನ್ನಿಗೇ ಪೊಲಾರ್ಡ್​ ತನ್ನ ನಿವೃತ್ತಿಯನ್ನು ಹಂಚಿಕೊಂಡಿದ್ದು, ನಾನಿನ್ನು ಐಪಿಎಲ್​ ಆಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಬ್ಯಾಟಿಂಗ್ ಕೋಚ್​ ಆಗಿ, ಮುಂಬೈ ತಂಡದ ಸದಸ್ಯನಾಗಿರುತ್ತೇನೆ ಎಂದು ಪೊಲಾರ್ಡ್ ಹೇಳಿಕೊಂಡಿದ್ದಾರೆ.

    5 ಬಾರಿಯ ಚಾಂಪಿಯನ್ ತಂಡದ ಸದಸ್ಯನಾಗಿದ್ದುಕೊಂಡು, ಕಠಿಣವಾದ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಮುಂಬೈ ತಂಡದಲ್ಲಿ ಬದಲಾವಣೆಯ ಅಗತ್ಯವಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ ನನಗೆ ಮುಂಬೈ ತಂಡದಿಂದ ಹೊರಹೋಗಿ, ಬೇರೆ ತಂಡದಲ್ಲಿದ್ದುಕೊಂಡು ಮುಂಬೈ ವಿರುದ್ಧ ಆಡಲು ನನಗೆ ಸಾಧ್ಯವಿಲ್ಲ. ನಾನು ಸದಾ ಮುಂಬೈ ಇಂಡಿಯನ್ಸ್​ ತಂಡದ ಭಾಗವಾಗಿಯೇ ಇರುತ್ತೇನೆ ಎಂದು ಪೊಲಾರ್ಡ್​​ ನಿವೃತ್ತಿಯ ಸಂದರ್ಭದಲ್ಲಿ ಬರೆದುಕೊಂಡಿದ್ದಾರೆ.

    2010ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ್ದ ಕೈರೊನ್ ಪೊಲಾರ್ಡ್, ಮುಂಬೈ ಇಂಡಿಯನ್ಸ್‌ 5 ಬಾರಿ ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈವರೆಗೆ 189 ಪಂದ್ಯಗಳನ್ನಾಡಿ 3412 ರನ್‌ಗಳು ಹಾಗೂ 69 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts