More

    ‘ನೆನಪಿರಲಿ ಫಸ್ಟ್ ವೋಟ್, ನಂತರ ರಿಫ್ರೆಶ್​ಮೆಂಟ್​!’

    ನವದೆಹಲಿ: ಬಿಹಾರ ವಿಧಾನಸಭೆಗೆ ಮೊದಲ ಹಂತದ ಮತದಾನ ಇಂದು ಆರಂಭವಾಗಿದೆ. ಕೋವಿಡ್ 19 ತಡೆಯುವುದಕ್ಕೆ ಸುರಕ್ಷಾ ನಿಯಮ ಪಾಲಿಸಿಕೊಂಡು ಪ್ರಜಾಪ್ರಭುತ್ವದ ಈ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಬಿಹಾರದ ಜನತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಮನವಿ ಮಾಡಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಬಿಹಾರ ವಿಧಾನಸಭೆಗೆ ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. ಕೋವಿಡ್ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಪ್ರಜಾಪ್ರಭುತ್ವದ ಈ ಉತ್ಸವದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಎಲ್ಲ ಮತದಾರರಲ್ಲೂ ಕೇಳಿಕೊಳ್ಳುತ್ತೇನೆ. ನೆನಪಿರಲಿ ಮೊದಲು ಮತದಾನ ನಂತರ ಉಪಾಹಾರ ಎಂಬ ಸಂದೇಶ ಅಪ್ಡೇಟ್ ಮಾಡಿದ್ದಾರೆ.

    ಇದನ್ನೂ ಓದಿ: ಜಮ್ಮು-ಕಾಶ್ಮೀರದ ಬದ್ಗಾಂನಲ್ಲಿ ಇಬ್ಬರು ಉಗ್ರರ ಹತ್ಯೆ

    ಬಿಹಾರದಲ್ಲಿ ಇಂದು 71 ವಿಧಾನಸಭಾ ಕ್ಷೇತ್ರಗಳ ಮತದಾನ ನಡೆಯುತ್ತಿದ್ದು, 1066 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇನ್ನೆರಡು ಹಂತಗಳ ಮತದಾನ ನವೆಂಬರ್ 3 ಮತ್ತು 7 ರಂದು ನಡೆಯಲಿದೆ. ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ. (ಏಜೆನ್ಸೀಸ್)

    ಎಸ್​ಎಂಎಸ್​, ವಾಟ್ಸ್​ಆ್ಯಪ್​, ಇಮೇಲ್​ ಮೂಲಕ ಸಮನ್ಸ್ – ಸುಪ್ರೀಂ ಕೋರ್ಟ್​ ಒಲವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts