More

    ಧಾರ್ಮಿಕ ಕಾರ್ಯದಿಂದ ಸಾಮರಸ್ಯ ವೃದ್ಧಿ

    ಉಗರಗೋಳ: ಧಾರ್ಮಿಕ ಕಾರ್ಯದಿಂದ ಸಮಾಜದಲ್ಲಿ ಸಾಮರಸ್ಯ ವೃದ್ಧಿಯಾಗುತ್ತದೆ. ಸಂಸ್ಕೃತಿ ಮತ್ತು ಸಂಪ್ರದಾಯ ಉಳಿಯಬೇಕಾದರೆ ಸಾಧು-ಸಂತರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕ ಆನಂದ ಮಾಮನಿ ಹೇಳಿದ್ದಾರೆ.

    ಸಮೀಪದ ಹಂಚಿನಾಳ ಗ್ರಾಮದಲ್ಲಿ 7.50 ಲಕ್ಷ ರೂ.ವೆಚ್ಚದ ಸಭಾಭವನ ಉದ್ಘಾಟನೆ ಹಾಗೂ ಹರಿಮಂದಿರದಲ್ಲಿ ಶ್ರೀ ರುಕ್ಮಿಣಿ, ಪಾಂಡುರಂಗ, ಗಣಪತಿ ವೆಂಕಟೇಶ್ವರ, ಹನುಮ ದೇವರು ಹಾಗೂ ಶ್ರೀಗುರು ಜ್ಞಾನೇಶ್ವರ ಸದ್ಗುರು ತುಕಾರಾಮ ಮಹಾರಾಜರ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು. ದಡ್ಡೇರಕೊಪ್ಪ ಹಾಗೂ ಹಂಚಿನಾಳ ಗ್ರಾಮದ ಶಿಥಿಲಗೊಂಡ ಸೇತುವೆ ದುರಸ್ತಿಗೆ 2 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಹಂಚಿನಾಳ, ಚುಳಕಿ ರಸ್ತೆ ನಿರ್ಮಾಣವಾಗಿದೆ. ಕೆರೆ ಅಭಿವೃದ್ಧಿಗೆ 2 ಕೋಟಿ ರೂ.ಅನುದಾನ ಮಂಜೂರಾಗಿದೆ ಎಂದರು.

    ದೇವಸ್ಥಾನಕ್ಕೆ ದಾನ ನೀಡಿದ ಅನಸಮ್ಮ ಕುಲಕರ್ಣಿ, ರಂಗರಡ್ಡಿ ಜಾಲಿಕೊಪ್ಪ, ಹನುಮಂತರಾವ್ ಕುಲಕರ್ಣಿ, ಗೋವಿಂದರಡ್ಡಿ ಮೇಟಿ ಇತರರನ್ನು
    ಶಾಲು ಹೊದಿಸಿ ಸತ್ಕರಿಸಲಾಯಿತು. ಶ್ರೀ ಫಲಹಾರೇಶ್ವರ ಮಠದ ಶಿವಮೂರ್ತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಗುರುಸಿದ್ಧ ಹಿರೇಮಠ, ಗ್ರಾಪಂ ಅಧ್ಯಕ್ಷೆ ಸಿದ್ದಮ್ಮ ಕಂಬಳಿ, ಸವದತ್ತಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಜಗದೀಶ ಶಿಂತ್ರಿ, ಸವದತ್ತಿ ಎಪಿಎಂಸಿ ಅಧ್ಯಕ್ಷ ಜಗದೀಶ ಹನಶಿ, ಜಿಪಂ ಸದಸ್ಯ ಗುರುನಾಥ ಗಂಗಲ, ಎನ್.ಬಿ.ಅಂಗಡಿ, ಗುರುಸಿದ್ಧಯ್ಯ ಹಿರೇಮಠ, ಲಕ್ಷ್ಮಣರಾವ್ ಕುಲಕರ್ಣಿ, ಉದಯಕುಮಾರ ಕುಲಕರ್ಣಿ, ರಾಸರಡ್ಡಿ ಚುಳಕಿ ಇತರರು ಇದ್ದರು. ಫಕೀರಗೌಡ ಪಾಟೀಲ ನಿರೂಪಿಸಿದರು. ವಿ.ಆರ್.ಜಾಡರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts