More

    ಧಾರ್ಮಿಕ ಕಾರ್ಯಗಳಿಂದ ಸಮಬಾಳ್ವೆ ಸಂದೇಶ

    ದೇವದುರ್ಗ: ಪಟ್ಟಣದ ಹಜರತ್ ಜಹೀರುದ್ದೀನ್ ಪಾಷಾ ದರ್ಗಾ ಹಿಂದು ಮುಸ್ಲಿಮರ ಭಾವೈಕ್ಯ ಕೇಂದ್ರವಾಗಿದ್ದು, ದರ್ಗಾದಿಂದ ಹಲವು ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ದರ್ಗಾದ ಮುಖ್ಯಸ್ಥ ಶ್ರೀ ಸೈಯದ್ ರಾಜ್ ಮಹಮ್ಮದ್ ಹೇಳಿದರು.

    ಇದನ್ನೂ ಓದಿ: ಧಾರ್ಮಿಕ ಕಾರ್ಯಕ್ರಮಗಳಿಂದ ಒತ್ತಡ ನಿವಾರಣೆ

    ಪಟ್ಟಣದ ಹಜರತ್ ಜಹೀರುದ್ದೀನ್ ಪಾಷಾ ದರ್ಗಾದಲ್ಲಿ ಶ್ರೀಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಹಮ್ಮಿಕೊಂಡಿದ್ದ ಪ್ರಸಾದ ವ್ಯವಸ್ಥೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಜಾತಿ ತಾರತಮ್ಯವಿಲ್ಲದೆ ಬಡವರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ, ಹಿಂದುಗಳಿಂದ ದೇವರ ಪೂಜೆ ಕಾರ್ಯಕ್ರಮ ನಡೆಯುತ್ತಿವೆ.

    ಶ್ರೀಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಪ್ರಸಾದ ವ್ಯವಸ್ಥೆ


    ಪ್ರಸಾದ ವ್ಯವಸ್ಥೆ ಮಾಡುವ ಮೂಲಕ ಸಮಬಾಳ್ವೆ ಸಂದೇಶ ಸಾರಲಾಗಿದೆ. ತಾಲೂಕು ಶಾಂತಿಯ ನಾಡಾಗಿದ್ದು ಇಲ್ಲಿ ಹಿಂದು ಮುಸ್ಲಿಮರು ಸಹೋದರರಂತೆ ಜೀವನ ನಡೆಸುತ್ತಿದ್ದೇವೆ. ಇಂಥ ಮಹತ್ವದ ಕಾರ್ಯಗಳು ಹೆಚ್ಚಾಗಿ ನಡೆಯಬೇಕು. ಇದರಿಂದ ನಾಡಿನಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದರು.

    ಮಲಾಧಾರಿಗಳಾದ ಪ್ರಕಾಶ, ಕಾಮರಡ್ಡಿ, ನಾಗರಾಜ ಹೂಗಾರ, ಈರಪ್ಪ ಮೆಜ್ಜಿಗಿ, ನಾಗರಾಜ ಕಾಲೇಗಾರ್, ಶರಣಗೌಡ ಹೋಟೆಲ್, ವೀರೇಶ ಹೂಗಾರ, ಆಂಜನೇಯ, ಬಾಳಪ್ಪ, ಕುಮಾರಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts