More

    ಮಹಾಕ್ರಾಂತಿಗೆ ಸಜ್ಜಾಗಿದೆ ರಿಲಯನ್ಸ್​ ರಿಟೇಲ್​; ಅಮೆಜಾನ್​, ವಾಲ್​ಮಾರ್ಟ್​ ದೈತ್ಯರಿಗೆ ಶುರುವಾಯ್ತು ಭೀತಿ

    ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ಕಂಪನಿಯೊಂದು ಜಾಗತಿಕ ದೈತ್ಯರಿಗೆ ಭೀತಿ ಮೂಡಿಸುವ ಮಟ್ಟದಲ್ಲಿ ಬೆಳೆದು ನಿಲ್ಲಲು ಸಜ್ಜಾಗಿದೆ.

    ಡಿಜಿಟಲ್​ ಕ್ಷೇತ್ರದಲ್ಲಿ ರಿಲಯನ್ಸ್​ನ ಜಿಯೋ ಕ್ರಾಂತಿಯನ್ನೇ ಉಂಟು ಮಾಡಿದೆ. ವರ್ಷದ ಹಿಂದಷ್ಟೇ ಆರಂಭಿಸಿದ ಜಿಯೋ ಪ್ಲಾಟ್​ಫಾರಂಗೆ ಈಗಾಗಲೇ ಒಂದೂವರೆ ಲಕ್ಷ ಕೋಟಿ ರೂ. ಗೂ ಹೆಚ್ಚು ಬಂಡವಾಳ ಹರಿದು ಬಂದಿದೆ. ಗೂಗಲ್​, ಫೇಸ್​ಬುಕ್​ ಸೇರಿ ಜಾಗತಿಕ ಕಂಪನಿಗಳು ಇದರಲ್ಲಿ ಹೂಡಿಕೆ ಮಾಡಿವೆ.

    ಇದನ್ನೂ ಓದಿ; ರಿಲಾಯನ್ಸ್​ ಪ್ರತಿಷ್ಠಾನ ಮುನ್ನಡೆಸ್ತಾರಾ ಮಗಳು ಇಶಾ ಅಂಬಾನಿ? 

    ಭಾರತದಲ್ಲಿ ಫೇಸ್​ಬುಕ್​ನ 40 ಕೋಟಿ ಬಳಕೆದಾರರಿದ್ದು, ಅವರನ್ನು ಜಿಯೋ ಮಾರ್ಟ್​ಗೆ ಸಂಪರ್ಕಿಸುವ ನಿಟ್ಟಿನಲ್ಲಿ ಮಹಾತ್ವಾಕಾಂಕ್ಷಿ ಯೋಜನೆ ರೂಪಿಸಲಾಗಿದೆ. ಇದು ಸಹಜವಾಗಿಯೇ ರಿಟೇಲ್​ ಕ್ಷೇತ್ರದಲ್ಲಿ ಜಾಗತಿಕ ದೈತ್ಯರೆನಿಸಿರುವ ಅಮೆಜಾನ್​ ಹಾಗೂ ವಾಲ್​ ಮಾರ್ಟ್​ಗೆ ಭಾರಿ ಭೀತಿ ಮೂಡಿಸಿದೆ.

    ಈವರೆಗೆ ತೈಲೋದ್ಯಮವನ್ನೇ ಪ್ರಮುಖ ಕ್ಷೇತ್ರವಾಗಿಸಿಕೊಂಡಿದ್ದ ರಿಲಯನ್ಸ್​ ಇಂಡಸ್ಟ್ರೀಸ್​ ಈಗ ಡಿಜಿಟಲ್​ ಬಳಿಕ ರಿಟೇಲ್​ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದೆ. ಇದಕ್ಕಾಗಿ ಬಿಗ್​ ಬಜಾರ್​ ಸರಣಿಯ ಸೂಪರ್​ ಮಾರ್ಕೆಟ್​ಗಳನ್ನು ತನ್ನದಾಗಿಸಿಕೊಳ್ಳುತ್ತಿದೆ

    ಇದನ್ನೂ ಓದಿ; ಅಮೆಜಾನ್​ ಹಿಂದಿಕ್ಕಿ ಬಿಗ್​ ಬಜಾರ್​ ತೆಕ್ಕೆಗೆ ಪಡೆದ ಅಂಬಾನಿ…? 

    ಆನ್​ಲೈನ್​ ಶಾಪಿಂಗ್​, ಕ್ಲೌಡ್​ ಕಂಪ್ಯೂಟಿಂಗ್​, ಟೆಲಿಕಾಮ್​, ಡಿಜಿಟಲ್​ ಪೇಮೆಂಟ್ಸ್​ ಮೊದಲಾದ ಕ್ಷೇತ್ರಗಳಲ್ಲಿ ವಿಸ್ತರಿಸಿಕೊಳ್ಳುತ್ತಿರುವ ರಿಲಯಲ್ಸ್​ ಡಿಜಿಟಲ್​ ಸಂಸ್ಥೆಯನ್ನು ಚೀನಾದ ಅಲಿಬಾಬಾ, ಟೆನ್ಸೆಂಟ್​ ಮೊದಲಾದ ಕಂಪನಿಗಳೊಂದಿಗೆ ಹೋಲಿಸಲಾಗುತ್ತಿದೆ.

    ಜಿಯೋ ಮಾರ್ಟ್​ ಸದ್ಯಕ್ಕೆ 200 ನಗರಗಳಲ್ಲಿ ಸೇವೆಗಳನ್ನು ನೀಡುತ್ತಿದೆ. ಇದನ್ನು ದೇಶಾದ್ಯಂತ ಇನ್ನಷ್ಟು ನಗರಗಳಿಗೆ, ಇನ್ನಷ್ಟು ವರ್ಗಗಳಿಗೆ ಹಾಗೂ ಕ್ಷೇತ್ರಗಳಿಗೆ ವಿಸ್ತರಿಸಿಕೊಳ್ಳಲಿದೆ ಎಂದು ಮುಖೇಶ್​ ಅಂಬಾನಿ ತಿಳಿಸಿದ್ದಾರೆ. ಇದು ಸಹಜವಾಗಿಯೇ ಪ್ರತಿಸ್ಪರ್ಧಿ ಕಂಪನಿಗಳಾದ ಅಮೆಜಾನ್​ ಹಾಗೂ ವಾಲ್​ಮಾರ್ಟ್​ಗಳ ನಿದ್ದೆಗೆಡಿಸಿರುವುದಂತೂ ಹೌದು.

    ಗುಣಲಕ್ಷಣಗಳಿಲ್ಲದವರಿಂದ ಕರೊನಾ ಹರಡುವುದಿಲ್ಲ; ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಯಿಂದಲೇ ಹೇಳಿಕೆ; ಇಲ್ಲಿದೆ ಫ್ಯಾಕ್ಟ್​ಚೆಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts