More

    ಹಾವೇರಿಯಲ್ಲಿ ವಿಜಯವಾಣಿ ‘ರಾಮೋತ್ಸವ’ ಪುರವಣಿ ಬಿಡುಗಡೆ

    ಹಾವೇರಿ: ಅಯೋಧ್ಯೆಯಲ್ಲಿ ಬಾಲರಾಮನ ಪಟ್ಟಾಭಿಷೇಕದ ನಿಮಿತ್ತ ಕನ್ನಡದ ನಂಬರ್ ಒನ್ ದಿನಪತ್ರಿಕೆ ‘ವಿಜಯವಾಣಿ’ ಪ್ರಕಟಿಸಿರುವ 56 ಪುಟಗಳ ‘ರಾಮೋತ್ಸವ’ ವಿಶೇಷ ಪುರವಣಿಯನ್ನು ಹುಕ್ಕೇರಿ ಮಠದಲ್ಲಿ ಸೋಮವಾರ ಜಗದ್ಗುರು ಶ್ರೀ ಸದಾಶಿವ ಸ್ವಾಮೀಜಿ ಬಿಡುಗಡೆಗೊಳಿಸಿದರು.

    ‘ಅಯೋಧ್ಯೆಯಲ್ಲಿ ಶ್ರೀರಾಮರ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಇದನ್ನು ಇಡೀ ದೇಶವೇ ಸಂಭ್ರಮಿಸುತ್ತಿದೆ. ಬಹಳ ವರ್ಷಗಳಿಂದ ಭಾರತೀಯರು ಕಾಯುತ್ತಿದ್ದ ಸುದಿನ ಇದು. ಭಾರತದ ಧಾರ್ವಿುಕ ಮತ್ತು ಸಾಮಾಜಿಕತೆಯನ್ನು ಬಿಂಬಿಸುವ ಈ ಮಂದಿರ ಸರ್ವಜನಾಂಗದ ಶಾಂತಿಯ ತೋಟ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ಪಸರಿಸುವ ಆಶಯದೊಂದಿಗೆ ನಿರ್ವಣಗೊಂಡಿದೆ’ ಎಂದು ಸದಾಶಿವ ಸ್ವಾಮೀಜಿ ಹೇಳಿದರು.

    ಮಠದ ನಿರ್ದೇಶಕ ಜಯಣ್ಣ ಸಾವಿರಮಠ, ಮ್ಯಾನೇಜರ್ ಎಸ್.ಎಸ್. ಕಟಗಿಹಳ್ಳಿಮಠ, ಕಲಾವಿದ ಗಣೇಶ ರಾಯ್ಕರ, ಇತರರಿದ್ದರು.

    ಅಯೋಧ್ಯೆಯ ವಿಶೇಷತೆಯನ್ನು ಒಳಗೊಂಡಂಥ ವಿಶೇಷ ಪುರವಣಿಯನ್ನು ‘ವಿಜಯವಾಣಿ’ ಪತ್ರಿಕೆಯವರು ರಾಮೋತ್ಸವ ಪುರವಣಿ ಮೂಲಕ ಹೊರತಂದಿರುವುದು ಶ್ಲಾಘನೀಯ. ರಾಮಮಂದಿರ ನಿರ್ವಣದಲ್ಲಿ ನಾಡಿನ ಕೊಡುಗೆ, ಅದರ ಹಿಂದೆ ಶ್ರಮಿಸಿದವರ ಕುರಿತ ಲೇಖನಗಳುಳ್ಳ ಸುಂದರವಾದ ಸಂಚಿಕೆಯನ್ನು ಪ್ರಕಟಿಸಿದ್ದಾರೆ. ಜನರು ಇದನ್ನು ಓದಿ ಸಂತಸಪಡುತ್ತಿದ್ದಾರೆ.

    | ಶ್ರೀ ಸದಾಶಿವ ಸ್ವಾಮೀಜಿ, ಹುಕ್ಕೇರಿ ಮಠ, ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts