More

    30ರಂದು ‘ಎನ್ನ ನಲಿಕೆ’ ತುಳು ಕೃತಿ ಬಿಡುಗಡೆ

    ಮಂಗಳೂರು: ಸುರತ್ಕಲ್ ಗೋವಿಂದದಾಸ ಕಾಲೇಜಿನ ಸಾಹಿತ್ಯ ಸಂಘ, ದ.ಕ. ಜಿಲ್ಲಾ ಹಾಗೂ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್, ವಿದ್ಯಾ ಪ್ರಕಾಶನ ಆಶ್ರಯದಲ್ಲಿ ರಘು ಇಡ್ಕಿದು ಅವರ 30ನೇ ಕೃತಿ ‘ಎನ್ನ ನಲಿಕೆ’ ತುಳು ಕವನ ಸಂಕಲನ ಬಿಡುಗಡೆ ಡಿ.30ರಂದು ಮಧ್ಯಾಹ್ನ 2ಕ್ಕೆ ಗೋವಿಂದದಾಸ ಕಾಲೇಜಿನಲ್ಲಿ ನಡೆಯಲಿದೆ. ದೈವ ನರ್ತಕ ಲೋಕಯ್ಯ ಸೇರ ಮಾಣಿ ಕೃತಿ ಬಿಡುಗಡೆ ಮಾಡುವರು. ಗೋವಿಂದದಾಸ ಕಾಲೇಜು ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ಪ್ರಕಾಶಕ ಕಲ್ಲೂರು ನಾಗೇಶ, ಪತ್ರಕರ್ತ ರಾಜೇಶ್ ಶೆಟ್ಟಿ ದೋಟ, ಚುಸಾಪ ದ.ಕ. ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಮಂಗಳೂರು ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರಿ ಭಾಗವಹಿಸುವರು. ಬಳಿಕ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳಾರು ಅಧ್ಯಕ್ಷತೆಯಲ್ಲಿ ನಡೆಯುವ ತುಳು ಕವಿಗೋಷ್ಠಿಯಲ್ಲಿ ಡಾ.ಸುರೇಶ ನೆಗಳಗುಳಿ, ಡಾ.ಸಂತೋಷ ಆಳ್ವ, ಚೆನ್ನಪ್ಪ ಅಳಿಕೆ, ರೇಮಂಡ್ ಡಿಕುನ್ಹಾ ತಾಕೊಡೆ, ಸುಮಂಗಲಾ ದಿನೇಶ್ ಶೆಟ್ಟಿ ಕುಂಪಲ, ಅಶೋಕ ಎನ್.ಕಡೇಶಿವಾಲಯ, ಉಮೇಶ್ ಶಿರಿಯ, ಜೀವಪರಿ, ರೇಖಾ ಸುದೇಶ್ ರಾವ್, ಸೌಮ್ಯಾ ಆರ್.ಶೆಟ್ಟಿ, ಅನುರಾಧಾ ರಾಜೀವ್ ಸುರತ್ಕಲ್, ಭಾಸ್ಕರ್ ವರ್ಕಾಡಿ, ಎಸ್.ಕೆ.ಕುಂಪಲ, ಎಂ.ಎಸ್.ವೆಂಕಟೇಶ್ ಗಟ್ಟಿ, ಗೀತಾ ಲಕ್ಷ್ಮೀಶ್, ಸೌಮ್ಯಾ ಗೋಪಾಲ್, ರಶ್ಮಿ ಸನಿಲ್, ಹಿತೇಶ್ ಕುಮಾರ್, ರಾಜೇಶ್ವರಿ ಎಚ್.ಬಜ್ಪೆ ಭಾಗವಹಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts