More

    ಯಶಸ್ವಿನಿ ಯೋಜನೆಗೆ ನೋಂದಣಿ, ನವೀಕರಣ: ಫೆ.29ರವರೆಗೆ ಮಾತ್ರ ಕಾಲಾವಕಾಶ

    ಮಂಡ್ಯ: ಪ್ರಸಕ್ತ ಸಾಲಿಗೆ ಯಶಸ್ವಿನಿ ಯೋಜನೆಯಲ್ಲಿ ಸದಸ್ಯರಾಗಲು ಮತ್ತು ನವೀಕರಣಗೊಳಿಸಲು ಫೆ.29ರವರೆಗೆ ಕಾಲಾವಕಾಶ ನೀಡಲಾಗಿದೆ.
    2022-23ರಲ್ಲಿ ನೋಂದಣಿಯಾಗಿರುವ ಸಂಘದಲ್ಲಿಯೇ ನವೀಕರಣಗೊಳಿಸಲು ಗ್ರಾಮಾಂತರ ಪ್ರದೇಶದಲ್ಲಿ ಪ್ರಧಾನ ಅರ್ಜಿದಾರ ಸೇರಿ 4 ಜನರಿಗೆ 500 ರೂ ಹಾಗೂ ಅದಕ್ಕಿಂತ ಹೆಚ್ಚಾದ ಒಬ್ಬ ವ್ಯಕ್ತಿಗೆ ತಲಾ 100 ರೂನಂತೆ ಮತ್ತು ನಗರ ಪ್ರದೇಶಕ್ಕೆ 4 ಜನರಿಗೆ 1000 ರೂ, ನಾಲ್ಕಕ್ಕಿಂತ ಒಬ್ಬ ವ್ಯಕ್ತಿ ಹೆಚ್ಚಾದಲ್ಲಿ 200 ರೂಗಳನ್ನು ಹೆಚ್ಚಿಗೆ ನೋಂದಣಿ ಶುಲ್ಕ ಪಾವತಿಸಬೇಕು.
    ಪ್ರಸಕ್ತ ವರ್ಷದಲ್ಲಿ ಹೊಸದಾಗಿ ಯೋಜನೆಗೆ ಸದಸ್ಯರಾಗಲು ಯಾವುದೇ ಸಹಕಾರ ಸಂಘ/ ಸೌಹಾರ್ದ/ ಸ್ವ ಸಹಾಯ ಗುಂಪುಗಳಲ್ಲಿ ಸದಸ್ಯರಾಗಿ 3 ತಿಂಗಳು ಕಳೆದಿರಬೇಕು. ಗ್ರಾಮಾಂತರ ಪ್ರದೇಶಕ್ಕೆ ಪ್ರಧಾನ ಅರ್ಜಿದಾರ ಸೇರಿ 4 ಜನಕ್ಕೆ 500 ರೂ, ಅದಕ್ಕಿಂತ ಹೆಚ್ಚಾದ ಒಬ್ಬ ವ್ಯಕ್ತಿಗೆ ತಲಾ 100 ರೂ ಹಾಗೂ ನಗರ ಪ್ರದೇಶಕ್ಕೆ 4 ಜನರಿಗೆ 1000 ರೂ, ನಾಲ್ಕಕ್ಕಿಂತ ಒಬ್ಬ ವ್ಯಕ್ತಿ ಹೆಚ್ಚಾದಲ್ಲಿ ತಲಾ 200 ರೂ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರ ನೋಂದಣಿ ಹಾಗೂ ನವೀಕರಣ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ ಎಂದು ಸಹಕಾರ ಸಂಘಗಳ ಉಪನಿಬಂಧಕಿ ಟಿ.ಆರ್.ರೇಖಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts