More

    ಕರೊನಾ ಲಸಿಕೆ ಪಡೆಯಲು ಆನ್​ಲೈನ್ ನೋಂದಣಿ ಅಗತ್ಯ; 12 ದಾಖಲೆಗಳ ಪೈಕಿ ಒಂದು ಅನಿವಾರ್ಯ

    ನವದೆಹಲಿ: ಭಾರತದಲ್ಲಿ ಕರೊನಾ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಜಾರಿ ಮಾಡಿದ್ದು, ಸುಮಾರು 30 ಕೋಟಿ ಜನರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಲಸಿಕೆ ಪಡೆಯಲು ಬಯಸುವವರು ಕೋ-ವಿನ್ ವೆಬ್​ಸೈಟ್ ಅಥವಾ ಆಪ್​ನಲ್ಲಿ ಹೆಸರು ನೋಂದಾಯಿಸಬೇಕು. ನೋಂದಣಿಗೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ವಾಹನ ಚಾಲನಾ ಪರವಾನಗಿ, ಪಾಸ್​ಪೋರ್ಟ್, ಪಿಂಚಣಿ ದಾಖಲೆ ಸೇರಿ ಫೋಟೋ ಗುರುತಿನ ಮಾಹಿತಿ ಹೊಂದಿರುವ ಹನ್ನೆರಡು ಬಗೆಯ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ನೀಡಬಹುದು.

    ಲಸಿಕೆ ಪಡೆದ ಬಳಿಕ 30 ನಿಮಿಷ ವಿಶ್ರಾಂತಿ: ಪ್ರತಿ ಲಸಿಕೆ ಕೇಂದ್ರಕ್ಕೆ ಒಬ್ಬ ಹಿರಿಯ ಅಧಿಕಾರಿ ಸೇರಿ ಐದು ಸಿಬ್ಬಂದಿ ನಿಯೋಜಿಸಲಾಗುತ್ತದೆ. ಲಸಿಕೆ ಪಡೆಯುವವರ ನೋಂದಣಿ ಪರಿಶೀಲನೆ, ಭದ್ರತೆ, ಇಂಜೆಕ್ಷನ್ ನೀಡುವುದು ಸೇರಿ ಹಲವು ಕೆಲಸಗಳನ್ನು ಇವರು ಹಂಚಿಕೊಂಡಿರುತ್ತಾರೆ. ಲಸಿಕೆ ಪಡೆದ ಪ್ರತಿಯೊಬ್ಬರಿಗೂ ಸುಮಾರು 30 ನಿಮಿಷಗಳ ಕಾಲ ಕೋಣೆಯಲ್ಲಿ ವಿಶ್ರಾಂತಿ ಪಡೆಯಲು ಸೂಚಿಸಲಾಗುತ್ತದೆ. ಒಂದು ವೇಳೆ ಅವರ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸ ಉಂಟಾದರೆ ತಕ್ಷಣ ಚಿಕಿತ್ಸೆ ನೀಡುವ ಸಲುವಾಗಿ ಸಮೀಪದ ಆಸ್ಪತ್ರೆಗಳನ್ನು ಗುರುತಿಸಿಟ್ಟುಕೊಳ್ಳಲಾಗುತ್ತದೆ. ಪ್ರತಿ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ದಿನವೊಂದಕ್ಕೆ ಸುಮಾರು 100 ಮಂದಿಗೆ ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ ಸಮುದಾಯ ಸಭಾಂಗಣಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, ಹಲವೆಡೆ ತಾತ್ಕಾಲಿಕ ಟೆಂಟ್​ಗಳನ್ನೂ ಸ್ಥಾಪಿಸಲು ಚಿಂತಿಸಲಾಗಿದೆ. ಲಸಿಕೆ ನೀಡಲಾಗುವ ಕೋಣೆಯಲ್ಲಿ ಒಮ್ಮೆ ಒಬ್ಬರಿಗೆ ಮಾತ್ರ ಪ್ರವೇಶವಿದ್ದು, ಉಳಿದವರಿಗೆ ಕಾಯುವ ಮತ್ತು ವೀಕ್ಷಣಾ ಕೊಠಡಿಗಳಲ್ಲಿ ಆಸನದ ವ್ಯವಸ್ಥೆ ಇರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts