More

    ಪೂರಕ ಪರೀಕ್ಷೆಗೆ ನೋಂದಣಿ ಇಳಿಕೆ: ಕಳೆದ ವರ್ಷಕ್ಕಿಂತ ಶೇ.50 ಅರ್ಜಿ ಕಡಿಮೆ; 27ರಿಂದ ಎಕ್ಸಾಂ..

    | ಮಂಜುನಾಥ ಕೆ. ಬೆಂಗಳೂರು

    ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆಗೆ ಈ ಬಾರಿ ನೋಂದಣಿ ಮಾಡಿಕೊಂಡವರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಮರು ಮೌಲ್ಯಮಾಪನಕ್ಕೆ ಹಾಗೂ ಉತ್ತರ ಪತ್ರಿಕೆಗಳ ಫೋಟೋ ಕಾಪಿಗೆ (ನಕಲು ಪ್ರತಿ) ನೋಂದಣಿ ಮಾಡಿಕೊಂಡವರ ಸಂಖ್ಯೆಯೂ ಕಡಿಮೆಯಾಗಿದೆ.

    2022-23ನೇ ಸಾಲಿನ ಎಸ್​ಎಸ್​ಎಲ್​ಸಿ ಮುಖ್ಯ ಪರೀಕ್ಷೆ ಫಲಿತಾಂಶದಲ್ಲಿ ಶೇ.85.63 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಇನ್ನು ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಜೂ.27 ರಿಂದ ಜು.4ರವರೆಗೆ ಪೂರಕ ಪರೀಕ್ಷೆಯನ್ನು ನಡೆಸಲು ಸಿದ್ಧತೆ ನಡೆಸಲಾಗಿದೆ. ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಜೂ.10ರವರೆಗೆ ಇದ್ದ ಅವಧಿಯನ್ನೂ ಸಹ ವಿಸ್ತರಿಸಲಾಗಿತ್ತು. ಆದರೆ ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಮರು ಮೌಲ್ಯಮಾಪನಕ್ಕೆ ಹಾಗೂ ಪೂರಕ ಪರೀಕ್ಷೆಗೆ ನೋಂದಣಿ ಮಾಡಿಕೊಂಡವರ ಸಂಖ್ಯೆ ಇಳಿಕೆಯಾಗಿದೆ. ಈ ವರ್ಷ ಪೂರಕ ಪರೀಕ್ಷೆಗೆ 93,887 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 2020ರಲ್ಲಿ ದುಪ್ಪಟು ನೋಂದಣಿ ಮಾಡಿಕೊಂಡಿದ್ದರು.

    ಪೂರಕ ಪರೀಕ್ಷೆಗೆ ನೋಂದಣಿ ಇಳಿಕೆ: ಕಳೆದ ವರ್ಷಕ್ಕಿಂತ ಶೇ.50 ಅರ್ಜಿ ಕಡಿಮೆ; 27ರಿಂದ ಎಕ್ಸಾಂ..

    ಇನ್ನು ಫೋಟೋ ಕಾಪಿಗಾಗಿ 39,759 ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೆ 39,759 ಫೋಟೋ ಕಾಪಿಯನ್ನು ಇಲಾಖೆಯ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ. ಮರು ಮೌಲ್ಯಮಾಪನಕ್ಕೆ ಈವರೆಗೂ 10,261 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. 2020ರ ಸಾಲಿನಲ್ಲಿ ಮರು ಮೌಲ್ಯ ಮಾಪನಕ್ಕೆ 24,720, ಫೋಟೋ ಕಾಪಿಗಾಗಿ 89088 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.

    2020 ಮತ್ತು 2022 ಹೋಲಿಕೆ ಮಾಡಿ ನೋಡಿದಾಗ ಪೂರಕ ಪರೀಕ್ಷೆ ಮತ್ತು ಫೋಟೋ ಕಾಪಿಗಾಗಿ ಅರ್ಜಿ ಸಲ್ಲಿಸಿದವರ ಪ್ರಮಾಣದಲ್ಲಿ ಶೇ.50 ಕಡಿಮೆಯಾಗಿದೆ. ಇದಕ್ಕೆ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಉತ್ತಮ ಫಲಿತಾಂಶ ಬಂದಿರುವುದೇ ಕಾರಣ.

    | ಎಚ್.ಎನ್ ಗೋಪಾಲಕೃಷ್ಣ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts