More

    ದಕ್ಷಿಣ ಕರ್ನಾಟಕ ಜಿಲ್ಲೆಗಳ ಪ್ರಾಂತೀಯ ಹಿಂದು ಅಧಿವೇಶನದ ಸಮಾರೋಪ

    ಬೆಂಗಳೂರು:  ಹಿಂದು ಜನಜಾಗೃತಿ ಸಮಿತಿ ಆಯೋಜಿಸಿದ್ದ ದಕ್ಷಿಣ ಕರ್ನಾಟಕ ಜಿಲ್ಲೆಗಳ ಪ್ರಾಂತೀಯ ಹಿಂದು ಅಧಿವೇಶನದ ಸಮಾರೋಪ ಸಮಾರಂಭ ನಗರದ ಕಾಮಾಕ್ಷಿಪಾಳ್ಯದಲ್ಲಿ ನಡೆಯಿತು. 150ಕ್ಕೂ ಹೆಚ್ಚು ಹಿಂದು ಸಂಘಟಕರು, ಸದಸ್ಯರು ಹಾಗೂ ವಕೀಲರು ಭಾಗವಹಿಸಿದ್ದರು.

    ನಮ್ಮ ಸಂಸ್ಕೃತಿ ಮತ್ತು ಧರ್ಮವೇ ನಮ್ಮ ದೇಶದ ಆತ್ಮ. ಆದ್ದರಿಂದ ಎಡಪಂಥೀಯರ ಬುದ್ಧಿವಾದ ಕೇಳುವಾಗ ಅದು ಈ ಆತ್ಮವನ್ನು ಉಳಿಸುವುದೇ ಎಂಬ ಬಗ್ಗೆ ವಿಚಾರ ಮಾಡಬೇಕು. ಈ ಬುದ್ಧಿವಾದಗಳು ದೇಶದ ಐಕ್ಯತೆಗೂ ಹಾನಿಕರ. ಇವರ ವಿಷಮ ಮಾನಸಿಕತೆಯನ್ನು ದೂರ ಇಡಬೇಕು ಎಂದು ಹೈಕೋರ್ಟ್ ವಕೀಲ ವಿವೇಕ್ ರೆಡ್ಡಿ ಹೇಳಿದರು.

    ಇಂದಿನ ಬೂಟಾಟಿಕೆಯ ಜಾತ್ಯಾತೀತವಾದ ಹಿಂದುಗಳನ್ನು ನಿಂದಿಸಿ ಅಲ್ಪಸಂಖ್ಯಾತರನ್ನು ಓಲೈಸುವ ವಾದವಾಗಿದೆ. ಭಾರತದಲ್ಲಿ ನಡೆಯುವ ಭಕ್ತಿ ಆರಾಧನೆಯು ಜಗತ್ತಿನ ಯಾವುದೇ ಮೂಲೆಯಲ್ಲಿಲ್ಲ. ಸಂತರೇ ನಮ್ಮ ಧರ್ಮದ ಬೆನ್ನೆಲುಬು. ಧಮವನ್ನು ಉಳಿಸಿದ ಸಾಧುಸಂತರ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ದೇಶಕ್ಕಾಗಿ ಯಾವ ಸಮರ್ಪಣೆಗೂ ಸಿದ್ಧರಾಗಿರುವವರ ಸ್ವತ್ತು ಈ ದೇಶ. ಅದನ್ನು ಬಿಟ್ಟು ಬೇರಾರದ್ದೂ

    ಅಲ್ಲ ಎಂದು ಹೇಳಿದರು. ಹಿರಿಯ ವಕೀಲ ಎನ್.ಪಿ. ಅಮೃತೇಶ, ಸನಾತನ ಸಂಸ್ಥೆ ಧರ್ಮ ಪ್ರಚಾರಕ ರಮಾನಂದ ಗೌಡ, ಆಧ್ಯಾತ್ಮಿಕ ಚಿಂತಕ ಡಾ. ಉಮೇಶ ಶರ್ಮ ಗುರೂಜಿ, ಹಿಂದು ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡ ಮತ್ತಿತರರು ಉಪಸ್ಥಿತರಿದ್ದರು.

    ಸನಾತನ ಧರ್ಮದ ಪುನರುತ್ಥಾನವಾಗಬೇಕು. ಸನಾತನ ಧರ್ಮವೇ ಸತ್ಯ, ಅಹಿಂಸೆ, ಪ್ರೇಮ, ದಯೆ ಹಾಗೂ ಮಾನವೀಯತೆಯನ್ನು ಜಗತ್ತಿಗೇ ಕಲಿಸಿದೆ. 

    | ಡಾ.ಉಮೇಶ ಶರ್ಮ ಗುರೂಜಿ ಆಧ್ಯಾತ್ಮಿಕ ಚಿಂತಕ

    ದೇವಸ್ಥಾನದ ಬೊಕ್ಕಸದ ದುರ್ಬಳಕೆ ಅತಿಯಾಗಿ ಕಂಡುಬರುತ್ತಿದೆ. ಸಮಿತಿಯು ಮಂದಿರ ರಕ್ಷಾ ಅಭಿಯಾನವನ್ನು ಆರಂಭಿಸಿದೆ. ನಾವೆಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಂಡು ದೇವಸ್ಥಾನಗಳನ್ನು ರಕ್ಷಿಸಲು ಸಂಘಟಿತವಾಗಿ ಪ್ರಯತ್ನಿಸೋಣ.

    | ಮೋಹನ ಗೌಡ ಹಿಂದು ಜನಜಾಗೃತಿ ಸಮಿತಿ ರಾಜ್ಯ ವಕ್ತಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts