More

    ಕೋರ್ಟ್ ಕೆಲಸ ಕಾರ್ಯಗಳ ಮರು ಹಂಚಿಕೆ

    ಬೆಂಗಳೂರು: ಹೈಕೋರ್ಟ್ ನಿರ್ದೇಶನ ಮೇರೆಗೆ ನಗರದ ಸಿಎಂಎಂ/ಎಸಿಎಂಎಂ ನ್ಯಾಯಾಲಯದ ಕಾರ್ಯ ವ್ಯಾಪ್ತಿಯನ್ನು ಪೊಲೀಸ್ ಉಪ ವಿಭಾಗಗಳ ಪ್ರಕಾರ ಮರು ಹಂಚಿಕೆ ಮಾಡಲಾಗಿದೆ. ಕೋರ್ಟ್ ವಿಚಾರಣೆ, ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ವಕೀಲರಿಗೆ ಅನುಕೂಲವಾಗಲಿದೆ.

    ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಈ ಮೊದಲು ಒಂದೇ ವಿಭಾಗದ ಪೊಲೀಸ್ ಠಾಣೆಗಳು ಬೇರೆ ಬೇರೆ ಕೋರ್ಟ್ ವ್ಯಾಪ್ತಿಯಲ್ಲಿ ವಿಚಾರಣೆ ನಡೆಯುತ್ತಿದ್ದವು. ಇದರಿಂದ ಸಮನ್ವಯತೆ ಕೊರತೆ ಕಾಡುತ್ತಿತ್ತು. ಆದರಿಂದ ಹೈಕೋರ್ಟ್ ಸೂಚನೆ ಮೇರೆಗೆ ಎಸಿಎಂಎಂ ಕೋರ್ಟ್‌ನೊಂದಿಗೆ ಸಮನ್ವಯ ಸಾಧಿಸಲು ಎಸಿಪಿ ದರ್ಜೆ ಅಧಿಕಾರಿಯನ್ನು ನೇಮಿಸಲಾಗಿದೆ.

    ವಿಚಾರಣೆ ಹಂತದಲ್ಲಿ ಇರುವ ಪ್ರಕರಣಗಳ ಮಾನಿಟರಿಂಗ್‌ಗೆ ಅನುಕೂಲ ಆಗಲಿದ್ದು, ನ್ಯಾಯಾಲಯದ ಸಮನ್ಸ್ ಮತ್ತು ವಾರಂಟ್ ಜಾರಿ ಮಾಡುವಲ್ಲಿ ಸುಧಾರಣೆ ಆಗಲಿದೆ ಎಂದು ಮಾಹಿತಿ ನೀಡಿದರು.
    ಜಾರಿಯಾಗದ ವಾರಂಟ್‌ಗಳನ್ನು ನ್ಯಾಯಾಲಯ ಸಂಬಂಧಪಟ್ಟ ಎಸಿಪಿಗೆ ನೇರವಾಗಿ ಸೂಚನೆ ನೀಡಬಹುದು. ಪ್ರಕರಣಗಳ ವಿಚಾರಣೆ ತ್ವರಿತವಾಗಿ ವಿಲೇವಾರಿಗೆ ಅನುಕೂಲವಾಗುತ್ತದೆ. ಲೋಕ ಅದಾಲತ್ ಪ್ರಕರಣಗಳ ವಿಲೇವಾರಿ ಸಹ ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ. ಕೋರ್ಟ್ ಕರ್ತವ್ಯದಲ್ಲಿ ಇರುವ ಪೊಲೀಸರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಲಿದೆ.

    ಇದೇ ರೀತಿಯಾಗಿ ವಕೀಲರಿಗೂ ಸಹ ಅನುಕೂಲ ಆಗಲಿದೆ. ನಿರ್ದಿಷ್ಠ ಭೌಗೋಳಿಕ ಪ್ರದೇಶದ ಪ್ರಕರಣಗಳು ಒಂದೇ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದರಿಂದ ವಕೀಲರಿಗೆ ಸಮಯ ಉಳಿತಾಯ ಮತ್ತು ಅಭಿಯೋಜನೆ ಮತ್ತು ಸಮನ್ವಯತೆ ಇರಲಿದೆ ಎಂದು ತಿಳಿಸಿದರು.
    ಅಭಿಯೋಜಕರು, ವಾರಂಟ್‌ಗಳನ್ನು ಸಂಬಂಧಪಟ್ಟ ಸಹಾಯಕ ಪೊಲೀಸ್ ಆಯುಕ್ತರಿಗೆ ನೇರವಾಗಿ ಕಳುಹಿಸಬಹುದು. ಹಿರಿಯ ಅಧಿಕಾರಿಗಳ ನೇರ ಮೇಲ್ವಿಚಾರಣೆ ಇಂದಾಗಿ ನ್ಯಾಯಾಲಯದ ಸಮನ್ಸ್ ಮತ್ತು ವಾರಂಟ್‌ಗಳ ಜಾರಿ ವಿಚಾರದಲ್ಲಿ ಸುಧಾರಿಸುತ್ತದೆ ಎಂದು ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts