More

    ರಾಮಮಂದಿರ ಭೂಮಿಪೂಜೆ ಬೆನ್ನಿಗೇ ಅಯೋಧ್ಯೆಯಲ್ಲಿ ರಿಯಾಲ್ಟಿ ಬೂಮ್​

    ಅಯೋಧ್ಯೆ: ರಾಮ ಜನ್ಮಭೂಮಿಯಲ್ಲಿ ಮಂದಿರಕ್ಕೆ ಭೂಮಿಪೂಜೆ ನೆರವೇರಿದ ಬೆನ್ನಿಗೇ ಅಯೋಧ್ಯೆಯಲ್ಲಿ ರಿಯಲ್ ಎಸ್ಟೇಟ್​ ಕ್ಷಿಪ್ರಗತಿಯಲ್ಲಿ ಗರಿಗೆದರಿದ್ದು, ಒಂದೇ ತಿಂಗಳಲ್ಲಿ ಜಾಗದ ಬೆಲೆ ದುಪ್ಪಟ್ಟಾಗಿದೆ.

    ಕೋವಿಡ್​-19 ಹಾಗೂ ಲಾಕ್​​ಡೌನ್​ ಹಿನ್ನೆಲೆಯಲ್ಲಿ ಎಲ್ಲ ವಹಿವಾಟು ತಗ್ಗಿ, ದೇಶದೆಲ್ಲೆಡೆ ರಿಯಾಲ್ಟಿ ಕೂಡ ಮಂಕಾಗಿದ್ದರೂ ಅಯೋಧ್ಯೆಯಲ್ಲಿ ‘ರಾಮನ ದಯೆ’ಯಿಂದ ರಿಯಲ್​ ಎಸ್ಟೇಟ್​​ ಏಳಿಗೆ ಕಂಡಿದೆ.

    ರಾಮಜನ್ಮಭೂಮಿ ಕುರಿತು ಸುಪ್ರೀಂಕೋರ್ಟ್​ ತೀರ್ಪು ನೀಡಿ ವಿವಾದ ಇತ್ಯರ್ಥ ಪಡಿಸಿದ ನಂತರ ಅಯೋಧ್ಯೆಯಲ್ಲಿ ರಿಯಲ್​ ಎಸ್ಟೇಟ್​ನಲ್ಲಿ ಸುಮಾರು ಶೇ. 30 ಹೆಚ್ಚಳ ಕಂಡುಬಂದಿತ್ತು. ಇದೀಗ ಆಗಸ್ಟ್​ನಲ್ಲಿ ಭೂಮಿ ಪೂಜೆ ನಡೆದ ಬಳಿಕ ರಿಯಾಲ್ಟಿ ಬೂಮ್​ ಆಗಿದ್ದು, ಬೆಲೆ ದುಪ್ಪಟ್ಟಾಗಿದೆ. ಸುಪ್ರೀಂಕೋರ್ಟ್​ ತೀರ್ಪಿಗೂ ಮುನ್ನ ಚದರಡಿಗೆ 900 ರೂ. ಇದ್ದ ಬೆಲೆ ಇದೀಗ 2ರಿಂದ 3 ಸಾವಿರ ರೂ. ವರೆಗೆ ತಲುಪಿದೆ ಎನ್ನುತ್ತಾರೆ ರಿಯಲ್​ ಎಸ್ಟೇಟ್​ ಎಕ್ಸ್​ಪರ್ಟ್ಸ್​​.

    ಸದ್ಯದ ಕ್ಷಿಪ್ರ ಹೆಚ್ಚಳಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘೋಷಿಸಿರುವ ಬೃಹತ್ ಇನ್​ಫ್ರಾಸ್ಟ್ರಕ್ಚರ್​ ಪ್ರಾಜೆಕ್ಟ್​ಗಳು, ತ್ರೀ ಸ್ಟಾರ್ ಹೋಟೆಲ್​ಗಳು ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗಳೂ ಕಾರಣ ಎಂದು ಕೂಡ ಹೇಳಲಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts