More

    ದೀಪಾವಳಿಗೂ ಮುನ್ನ ಈರುಳ್ಳಿ ದರದಲ್ಲಿ ಭಾರೀ ಏರಿಕೆಯಾಗಲು ಅಸಲಿ ಕಾರಣ ಇಲ್ಲಿದೆ…

    ನವದೆಹಲಿ: ದೇಶವು ಪ್ರತಿ ವರ್ಷ ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಳಿತಗಳಿಗೆ ಸಾಕ್ಷಿಯಾಗುತ್ತದೆ. ಈ ವರ್ಷವೂ ಕೂಡ ಇದೇ ವಿದ್ಯಾಮಾನ ಮುಂದುವರಿದಿದೆ. ಈ ವರ್ಷದ ಆರಂಭದಲ್ಲಿ ಈರುಳ್ಳಿ ಬೆಲೆಯ ದಿಢೀರ್​ ಕುಸಿತದಿಂದ ರೈತರು ಕಂಗಾಲಾಗಿದ್ದರು. ಅದೇ ರೀತಿ ಇದೀಗ ದೀಪಾವಳಿಗೂ ಮುನ್ನವೇ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಜೇಬಿಗೆ ಹೊರೆಯಾಗುತ್ತಿದೆ. ಈರುಳ್ಳಿ ಬೆಲೆಯಲ್ಲಿ ಏನೇ ವ್ಯತ್ಯಾಸವಾದರೂ ಯಾರಾದರೂ ಒಬ್ಬರಿಗೆ ಅದರ ಪರಿಣಾಮ ಬೀರಲಿದೆ.

    ಆರು ತಿಂಗಳ ಹಿಂದೆ ಈರುಳ್ಳಿ ಬೆಲೆ ಕೆಜಿಗೆ 5 ರಿಂದ 10 ರೂಪಾಯಿ ಇತ್ತು. ಇದೀಗ ಕೆಜಿಗೆ 70, 80, 90 ಮತ್ತು 100 ರೂಪಾಯಿಗೂ ತಲುಪಿದೆ. ಇದೇ ಬೆಲೆ 150 ರೂ.ವರೆಗೂ ತಲುಪಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಈರುಳ್ಳಿ ಬೆಲೆಯ ಈ ಹಠಾತ್ ಕುಸಿತ ಮತ್ತು ಏರಿಕೆಯ ಏರಿಳಿತದ ಹಿಂದಿನ ಕಾರಣದ ಬಗ್ಗೆ ಸಾಕಷ್ಟು ಕುತೂಹಲ ಇರುತ್ತದೆ. ಈ ಸಂದರ್ಭದಲ್ಲಿ ಎರಡು ಸಂಭಾವ್ಯ ವಿವರಣೆಗಳು ಆಗಾಗ ಕೇಳಿಬರುತ್ತವೆ. ಮೊದಲನೆಯದು ಅತಿಯಾದ ಬೇಡಿಕೆ ಮತ್ತು ಪೂರೈಕೆಯ ಕೊರತೆ ಮತ್ತು ಎರಡನೆಯ ಕಾರಣವೆಂದರೆ ಕಳೆದ ಕೆಲವು ದಿನಗಳಲ್ಲಿ ಈರುಳ್ಳಿ ಬೆಲೆ ಎರಡರಿಂದ ಮೂರು ಬಾರಿ ಹೆಚ್ಚಾಗಿದೆ ಎನ್ನುವುದು.

    ಮೊದಲ ಸಂಭವನೀಯ ಕಾರಣ ಬೇಡಿಕೆ ಮತ್ತು ಪೂರೈಕೆಯಲ್ಲಿನ ಅಂತರವಾಗಿದೆ. ಆದರೆ, ಭಾರತದಲ್ಲಿ ಈರುಳ್ಳಿಯನ್ನು ವರ್ಷಕ್ಕೆ ಎರಡು ಬಾರಿ ಕೊಯ್ಲು ಮಾಡಲಾಗುತ್ತದೆ ಎಂದು ತಿಳಿದಾಗ ಈರುಳ್ಳಿ ಕೊರತೆಯ ಬಗ್ಗೆ ಅಚ್ಚರಿಯುಂಟಾಗುತ್ತದೆ. ಈರುಳ್ಳಿಯನ್ನು ರಾಬಿ ಸೀಸನ್​ (ನವೆಂಬರ್​/ಡಿಸೆಂಬರ್​) ಮತ್ತು ಖಾರಿಫ್​ ಸೀಸನ್​ (ಜೂನ್​/ಜುಲೈ ಮತ್ತು ಸೆಪ್ಟೆಂಬರ್​/ಅಕ್ಟೋಬರ್​) ಎರಡೂ ಸೀಸನ್​ಗಳಲ್ಲಿ ಬೆಳೆಯಲಾಗುತ್ತದೆ. ಇದರರ್ಥ ದೇಶದಲ್ಲಿ ಈರುಳ್ಳಿಯನ್ನು ವರ್ಷವಿಡೀ ಬೆಳೆಯಲಾಗುತ್ತದೆ. ಇದರಿಂದಾಗಿ ಇಂದು ಈರುಳ್ಳಿಯ ಎರಡನೇ ಅತಿದೊಡ್ಡ ಉತ್ಪಾದಕ ದೇಶ ಭಾರತವಾಗಿದೆ.

    ಅಸಲಿ ಕಾರಣವೇನು?
    ವರ್ಷ ಪೂರ್ತಿ ಈರುಳ್ಳಿಯನ್ನು ಬೆಳೆದರೂ ಪ್ರತಿ ವರ್ಷ ಈರುಳ್ಳಿ ಕೊರತೆ ಏಕೆ ಉಂಟಾಗುತ್ತದೆ ಎಂಬ ದೊಡ್ಡ ಪ್ರಶ್ನೆ ನಿಮಗೆ ಕಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ. ಬೆಲೆ ಏರಿಳಿತದ ಹಿಂದಿನ ಪ್ರಾಥಮಿಕ ಕಾರಣವೆಂದರೆ ಈರುಳ್ಳಿ ಬೆಳೆಯುವ ರೈತರು ಹೆಚ್ಚಿನ ಹಣವನ್ನು ಗಳಿಸುವ ಉದ್ದೇಶದಿಂದ ಈರುಳ್ಳಿಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ. ಇದರಿಂದಾಗಿ ದೇಶದಲ್ಲಿ ಪೂರೈಕೆಯ ಕೊರತೆ ಸೃಷ್ಟಿಯಾಗುತ್ತದೆ ಮತ್ತು ಸಹಜವಾಗಿಯೇ ಬೆಲೆ ಏರಿಕೆಯಾಗುತ್ತದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಮಾರಾಟವನ್ನು ಮಿತಿಗೊಳಿಸಲು, ಸರ್ಕಾರವು 40 ಪ್ರತಿಶತ ರಫ್ತು ತೆರಿಗೆಯನ್ನು ಪರಿಚಯಿಸಿದೆ. ಆದರೆ, ಈ ಹಿಂದೆ ಈರುಳ್ಳಿಗೆ ರಫ್ತು ತೆರಿಗೆ ಇರಲಿಲ್ಲ. ಕೇಂದ್ರವು ಈರುಳ್ಳಿ ರಫ್ತಿಗೆ ಕನಿಷ್ಠ ರಫ್ತು ಬೆಲೆಯನ್ನು (ಎಂಇಪಿ) ಪ್ರತಿ ಟನ್​ಗೆ 66,730 ರೂ. ನಿಗದಿ ಮಾಡಿದೆ. ಅಂದರೆ ಡಿಸೆಂಬರ್ 31ರವರೆಗೆ ಯಾವುದೇ ಈರುಳ್ಳಿ ವ್ಯಾಪಾರಿ ಇದಕ್ಕಿಂತ ಕಡಿಮೆ ಬೆಲೆಗೆ ಈರುಳ್ಳಿ ರಫ್ತು ಮಾಡುವಂತಿಲ್ಲ. ನಾಫೆಡ್‌ನ ಬಫರ್ ಸ್ಟಾಕ್‌ನಲ್ಲಿ ಇರಿಸಲಾಗಿರುವ 2.5 ಲಕ್ಷ ಟನ್ ಈರುಳ್ಳಿಯನ್ನು ಸರ್ಕಾರ ಸ್ಥಳೀಯ ಮಾರುಕಟ್ಟೆಯಲ್ಲಿ ಕೆಜಿಗೆ 25 ರಿಂದ 30 ರೂ.ಗೆ ಸದ್ಯ ಮಾರಾಟ ಮಾಡುತ್ತಿದೆ. (ಏಜೆನ್ಸೀಸ್​)

    ಕೆಜಿಗೆ 70 ರೂ. ಏರಿಕೆ ಕಂಡ ಈರುಳ್ಳಿ: ಟೊಮ್ಯಾಟೋ ಬಳಿಕ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಉಳ್ಳಾಗಡ್ಡಿ

    ‘ಕಂಪನಿಗಳು ಬೆವರಿನ ಅಂಗಡಿ ನಡೆಸಲು ಸಾಧ್ಯವಿಲ್ಲ’: ಪ್ರಿಯಾಂಕ್‌ ಖರ್ಗೆ – ಇನ್ಫೋಸಿಸ್​ ನಾರಾಯಣ ಮೂರ್ತಿ ಹೇಳಿಕೆಗೆ ಐಟಿ ಸಚಿವರ ಪ್ರತಿಕ್ರಿಯೆ

    ಕೇರಳ ಸ್ಫೋಟ ಪ್ರಕರಣ: ಆರೋಪಿಯ ಅಸಾಧಾರಣ ಬುದ್ಧಿವಂತಿಕೆ ಕಂಡು ಪೊಲೀಸರೇ ದಿಗ್ಭ್ರಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts