More

    ‘ಕಂಪನಿಗಳು ಬೆವರಿನ ಅಂಗಡಿ ನಡೆಸಲು ಸಾಧ್ಯವಿಲ್ಲ’: ಪ್ರಿಯಾಂಕ್‌ ಖರ್ಗೆ – ಇನ್ಫೋಸಿಸ್​ ನಾರಾಯಣ ಮೂರ್ತಿ ಹೇಳಿಕೆಗೆ ಐಟಿ ಸಚಿವರ ಪ್ರತಿಕ್ರಿಯೆ

    ನವದೆಹಲಿ: ಕಂಪನಿಗಳು ನೌಕರರನ್ನು ಅಧಿಕ ಅವಧಿಗೆ ಕೆಲಸ ಮಾಡುವಂತೆ ಒತ್ತಾಯಿಸುವಂತಿಲ್ಲ ಎಂದು ರಾಜ್ಯ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

    ಇದನ್ನೂ ಓದಿ: ಮಣಿಪುರದಲ್ಲಿ ಪೊಲೀಸ್‌ ಅಧಿಕಾರಿ ಹತ್ಯೆ: ಕಮಾಂಡೋ ತಂಡದ ಮೇಲೆಯೂ ಬಂಡುಕೋರರ ದಾಳಿ
    ಸಾಮಾಜಿಕ ಮಾಧ್ಯಮ ಹಾಗೂ ಐಟಿ ಮತ್ತು ಟೆಕ್ ವಲಯದಲ್ಲಿ ಕೋಲಾಹಲ ಸೃಷ್ಟಿಸಿರುವ ನಾರಾಯಣ ಮೂರ್ತಿಯವರ ‘ದೇಶದ ಯುವಜನ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು’ ಹೇಳಿಕೆಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಂಪನಿಗಳು ‘ಬೆವರಿನ ಅಂಗಡಿ ನಡೆಸಲು ಸಾಧ್ಯವಿಲ್ಲ’ ಖಡಕ್ಕಾಗಿ ನುಡಿದಿದ್ದಾರೆ.

    ಐಟಿ ಉದ್ಯಮಕ್ಕೆ ಎನ್‌.ಆರ್‌.ನಾರಾಯಣ ಮೂರ್ತಿ ಅವರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು. ಆದರೆ ಒಬ್ಬ ವ್ಯಕ್ತಿ ಎಷ್ಟು ಗಂಟೆಗಳ ಕಾಲ ದುಡಿಯಬೇಕು ಎಂದು ಸಮಯವನ್ನು ನಿಗದಿಪಡಿಸುವ ಬದಲು, ಕಂಪನಿಗಳು ತಮ್ಮ ವೃತ್ತಿಪರ ಕಾರ್ಯಯೋಜನೆಯಲ್ಲಿ ಎಷ್ಟು ಉತ್ಪಾದಕವಾಗಿವೆ ಎಂಬುದನ್ನು ನೋಡಬೇಕು ಎಂದು ಕುಟುಕಿದರು.

    “ಇದು ಪ್ರತಿಯೊಬ್ಬರಿಗೂ ವಿಭಿನ್ನವಾದುದು. ಸಚಿವನಾಗಿ ನಾನು ಉತ್ಪಾದಕತೆಯ ಮೇಲೆ ಗಮನ ಕೇಂದ್ರೀಕರಿಸುತ್ತೇನೆ. ನೀವು ಏಳು ಗಂಟೆಗಳಲ್ಲಿ ಉತ್ಪಾದಕರಾಗಿದ್ದರೆ ನನಗೆ ಯಾವುದೇ ಅಭ್ಯಂತರವಿಲ್ಲ. ನಿಮ್ಮ ಉತ್ಪಾದಕತೆಯನ್ನು ಹೆಚ್ಚಿಸಲು ನಿಮ್ಮ ಇತರ ಏಳು ಗಂಟೆಗಳನ್ನು ಉಪಯೋಗಿಸಲು ನೀವು ಬಯಸಿದರೆ, ಅದು ಇಲಾಖೆ ಅಥವಾ ಸಚಿವಾಲಯಕ್ಕೆ ಸಹಾಯವಾಗುತ್ತದೆ ಎಂದಾದರೆ ನಾನು ನಿಮ್ಮ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಆದರೆ, ಇದನ್ನು (70 ಗಂಟೆಗಳ ಕೆಲಸ) ಮಾಡಲು ನಾವು ಯಾರನ್ನೂ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.

    ರಾಜ್ಯದಲ್ಲಿನ ಹೂಡಿಕೆಯ ಕುರಿತು ಮಾತನಾಡಿದ ಅವರು, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕ್ ವಾಹನಗಳು ಮತ್ತು ಸೆಮಿಕಂಡಕ್ಟರ್‌ ಕ್ಷೇತ್ರಗಳ ಕಂಪನಿಗಳನ್ನು ರಾಜ್ಯಕ್ಕೆ ಕರೆತರಲು ಕರ್ನಾಟಕವು ಪ್ರಯತ್ನ ನಡೆಸುತ್ತಿದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ನೀವು ಅಮೆರಿಕದ ದೈತ್ಯ ಕಂಪನಿ ಟೆಸ್ಲಾವನ್ನು ಸಂಪರ್ಕಿಸಿದ್ದೀರಾ ಎಂಬ ಪ್ರಶ್ನೆಗೆ ಅಮೆರಿಕಾದ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆಯು ಸದ್ಯದಲ್ಲೇ ಭಾರತಕ್ಕೆ ಕಾಲಿಡಲಿದೆ. ಈ ಬಗ್ಗೆ ಚರ್ಚೆ ನಡೆದಿವೆ ಎಂದು ಅವರು ತಿಳಿಸಿದ್ದಾರೆ.

    ಬ್ರ್ಯಾಂಡ್ ಕರ್ನಾಟಕಕ್ಕೆ ಕನ್ನಡಿಗರೇ ರಾಯಭಾರಿಯಾಗಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts