ಬೆಂಗಳೂರು: ಗ್ರಾಹಕರು ಹಾಗೂ ರಿಯಾಲ್ಟಿ ಕಂಪನಿಗಳ ನಡುವೆ ಸೇತುವೆಯಾಗಿ ವಿಜಯವಾಣಿ, ದಿಗ್ವಿಜಯ 24×7 ನ್ಯೂಸ್ ಸಹಯೋಗದಲ್ಲಿ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ‘ರಿಯಲ್ ಎಸ್ಟೇಟ್ ಎಕ್ಸ್ಪೋ’ಗೆ ಅದ್ಧೂರಿ ಚಾಲನೆ ದೊರೆತಿದೆ.
ಶಾಸಕ ಉದಯ್ ಗರುಡಾಚಾರ್ ಎಕ್ಸ್ಪೋಗೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ನಟಿ ಪ್ರಿಯಾಂಕಾ ತಿಮ್ಮೇಶ್, ವಿಆರ್ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಭಾಗಿಯಾಗಿದರು.
ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ರಿಯಲ್ ಎಸ್ಟೇಟ್ ಎಕ್ಸ್ಪೋ ನಡೆಯಲಿದ್ದು, 50ಕ್ಕೂ ಅಧಿಕ ರಿಯಲ್ ಎಸ್ಟೇಟ್ ಕಂಪನಿಗಳು ಭಾಗಿಯಾಗಲಿವೆ. ಸಿಲಿಕಾನ್ ಸಿಟಿ ಸುತ್ತಮುತ್ತ ನಿವೇಶನ, ವಿಲ್ಲಾ, ಅಪಾರ್ಟ್ಮೆಂಟ್ ಖರೀದಿಗೆ ಸುವರ್ಣಾವಕಾಶ ಇದಾಗಿದೆ. ಕೈಗೆಟುಕುವ ದರದಲ್ಲಿ ನಿವೇಶನಗಳು ಲಭ್ಯವಾಗಲಿದೆ. ಸ್ಪಾಟ್ ಬುಕ್ಕಿಂಗ್ ಮಾಡಿದವರಿಗೆ ಆಕರ್ಷಕ ರಿಯಾಯಿತಿ, ಕೊಡುಗೆ ಸಿಗಲಿದೆ.
ಅಶ್ವಸೂರ್ಯ ರಿಯಾಲಿಟಿಸ್ ಅರ್ಪಿಸುವ ಈ ಎಕ್ಸ್ಪೋದಲ್ಲಿ ರಾಜ್ಯದ ಪ್ರಮುಖ ರಿಯಾಲ್ಟಿ ಕಂಪನಿಗಳಾದ ಪ್ರಾವಿಡೆಂಟ್, ಎಸ್ಆರ್ಎಸ್ ಪ್ರಮೋಟರ್ಸ್, ಅಥರ್ವ ಗ್ರೂಪ್ಸ್, ಡಿಎಸ್ ಮ್ಯಾಕ್ಸ್, ಕೆಎನ್ಎಸ್ ಇನ್ಫ್ರಾ, ಕಲ್ಯಾಣ್ ಶೆಲ್ಟರ್ಸ್, ಗುರು ಪುನ್ವಾನಿ, ಆರ್ಯನ್ ಡೆವಲಪರ್ಸ್ ಮತ್ತು ಪ್ರಮೋಟರ್ಸ್, ಶರಣ್ಯ ಫಾರ್ಮ್ಸ್, ಎಂ.ಆರ್. ಪ್ರಾಪರ್ಟಿಸ್, ಆಶೀರ್ವಾದ ಪ್ರಾಪರ್ಟೀಸ್ , ಅಲೈಡ್ ಹ್ಯಾಬಿಟ್ಯಾಟ್ಸ್, ಕರ್ನಾಟಕ ಗೃಹ ಮಂಡಳಿ, ಓಂ ಶ್ರೀ ಇನ್ಫ್ರಾಸ್ಟ್ರಕ್ಚರ್, ಎ4 ಪ್ರಾಪರ್ಟಿಸ್, ಭಗಿನಿ ಡೆವಲಪರ್ಸ್, ಎಂಎಚ್ ಪ್ರಮೋಟರ್ಸ್, ಎಂಡಿಎಸ್, ಗೃಹಮಿತ್ರ ಡೆವಲಪರ್ಸ್, ಪಿ.ಸಿ. ರಿಯಾಲ್ಟಿ, ಮದರ್ ಅರ್ತ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಮತ್ತು ಎಟಿಝುಡ್ ಪ್ರಾಪರ್ಟಿಸ್ ಸೇರಿ ವಿವಿಧ ರಿಯಾಲ್ಟಿ ಕಂಪನಿಗಳು ಮೇಳದಲ್ಲಿ ಭಾಗವಹಿಸಿವೆ.
ಸಾರ್ವಜನಿಕರಿಗೆ ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಎಕ್ಸ್ಪೋಗೆ ಉಚಿತ ಪ್ರವೇಶ ಇರಲಿದೆ. ಕಾಲೇಜು ಮೈದಾನದಲ್ಲಿ ರಿಯಾಲ್ಟಿ ಮೇಳಕ್ಕೆ ಬೃಹತ್ ವೇದಿಕೆ ನಿರ್ವಿುಸಲಾಗಿದೆ. ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವೇಶ ದ್ವಾರದಲ್ಲಿ ಆಕರ್ಷಕ ಕಮಾನು ಗ್ರಾಹಕರನ್ನು ಸ್ವಾಗತಿಸಲಿದೆ. ಸ್ಟಾಲ್ಗಳ ಪ್ರವೇಶದಲ್ಲಿ ಸುಂದರವಾದ ಕಟೌಟ್ ನಿರ್ಮಾಣವಾಗಿದೆ. ಎಕ್ಸ್ಪೋಗೆ ಉಚಿತ ಪ್ರವೇಶ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರು ಹಾಗೂ ಇತರ ವಾಹನಗಳಿಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲಿದೆ. ಒಂದೇ ಸೂರಿನಡಿ ಗ್ರಾಹಕರು ರಿಯಾಲ್ಟಿ ಕ್ಷೇತ್ರದ ವಿವಿಧ ಕಂಪನಿಗಳ ನಿವೇಶನ, ಅಪಾರ್ಟ್‌ಮೆಂಟ್, ವಿಲ್ಲಾ, ಫಾರ್ಮ್ ಹೌಸ್ ಹಾಗೂ ಫಾರ್ಮ್ ಪ್ಲಾಟ್ ಯೋಜನೆಗಳ ಮಾಹಿತಿ ಪಡೆಯಬಹುದು. 3 ದಿನ ನಡೆಯುವ ಈ ಮೇಳದಲ್ಲಿ 20-25 ಸಾವಿರ ಗ್ರಾಹಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಲ್ಯಾಂಡಿಂಗ್ ವೇಳೆ ಪತನಗೊಂಡು ಇಬ್ಭಾಗವಾದ ಕಾರ್ಗೋ ವಿಮಾನ: ಭಯಾನಕ ವಿಡಿಯೋ ವೈರಲ್!
ಎಸಿ ಸ್ಫೋಟಕ್ಕೆ ಗಂಡ-ಹೆಂಡತಿ, ಇಬ್ಬರು ಮಕ್ಕಳ ಸಾವು: ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಕಣ್ಣೀರು