

ಬೆಂಗಳೂರು: ಗ್ರಾಹಕರು ಹಾಗೂ ರಿಯಾಲ್ಟಿ ಕಂಪನಿಗಳ ನಡುವೆ ಸೇತುವೆಯಾಗಿ ವಿಜಯವಾಣಿ, ದಿಗ್ವಿಜಯ 24×7 ನ್ಯೂಸ್ ಸಹಯೋಗದಲ್ಲಿ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ‘ರಿಯಲ್ ಎಸ್ಟೇಟ್ ಎಕ್ಸ್ಪೋ’ಗೆ ಶುಕ್ರವಾರ (ಏ.8) ವಿದ್ಯುಕ್ತ ಚಾಲನೆ ಸಿಗಲಿದೆ. ಭಾನುವಾರದವರೆಗೆ (ಏ.10) ಎಕ್ಸ್ಪೋ ನಡೆಯಲಿದೆ.
ಕನಸು ನನಸಾಗಿಸಿಕೊಳ್ಳಿ
ಜೀವನದಲ್ಲಿ ಸ್ವಂತ ಮನೆ ಹೊಂದಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಕೋವಿಡ್ ಬಳಿಕ ಮನೆಯ ಮಹತ್ವ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಆಗಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಸುತ್ತಮುತ್ತ ಕೈಗೆಟಕುವ ದರದಲ್ಲಿ ನಿವೇಶನ, ವಿಲ್ಲಾ, ಅಪಾರ್ಟ್‌ಮೆಂಟ್ ಹಾಗೂ ಫಾರ್ಮ್ ಹೌಸ್ಗಳನ್ನು ಖರೀದಿಸಿ ತಮ್ಮ ಕನಸುಗಳನ್ನು ನನಸಾಗಿಸುವ ಸುವರ್ಣಾವಕಾಶ ಸಿಕ್ಕಿದೆ. ಬಿಡಿಎ ಹಾಗೂ ಬಿಎಂಆರ್ಡಿಎ ಸೈಟ್ಗಳು ಲಭ್ಯವಿದೆ. ಆಕರ್ಷಕ ಕೊಡುಗೆಗಳು ಸಿಗಲಿವೆ. ಆದ್ದರಿಂದ ಇಂತಹ ಒಳ್ಳೆಯ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬಹುದು.
ಶಾಸಕ ಗರುಡಾಚಾರ್ ಚಾಲನೆ
ಶುಕ್ರವಾರ ಮಧ್ಯಾಹ್ನ 12.30ಕ್ಕೆ ರಿಯಲ್ ಎಸ್ಟೇಟ್ ಎಕ್ಸ್ಪೋಗೆ ಶಾಸಕ ಉದಯ್ ಬಿ. ಗರುಡಾಚಾರ್ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ನಟಿ ಪ್ರಿಯಾಂಕಾ ತಿಮ್ಮೇಶ್, ವಿಆರ್ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಭಾಗಿಯಾಗಲಿದ್ದಾರೆ.
ಉಚಿತ ಪ್ರವೇಶ
ಸಾರ್ವಜನಿಕರಿಗೆ ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಎಕ್ಸ್ಪೋಗೆ ಉಚಿತ ಪ್ರವೇಶ ಇರಲಿದೆ.
ಬೃಹತ್ ವೇದಿಕೆ
ಕಾಲೇಜು ಮೈದಾನದಲ್ಲಿ ರಿಯಾಲ್ಟಿ ಮೇಳಕ್ಕೆ ಬೃಹತ್ ವೇದಿಕೆ ನಿರ್ವಿುಸಲಾಗಿದೆ. ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವೇಶ ದ್ವಾರದಲ್ಲಿ ಆಕರ್ಷಕ ಕಮಾನು ಗ್ರಾಹಕರನ್ನು ಸ್ವಾಗತಿಸಲಿದೆ. ಸ್ಟಾಲ್ಗಳ ಪ್ರವೇಶದಲ್ಲಿ ಸುಂದರವಾದ ಕಟೌಟ್ ನಿರ್ಮಾಣವಾಗಿದೆ. ಎಕ್ಸ್ಪೋಗೆ ಉಚಿತ ಪ್ರವೇಶ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರು ಹಾಗೂ ಇತರ ವಾಹನಗಳಿಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲಿದೆ. ಒಂದೇ ಸೂರಿನಡಿ ಗ್ರಾಹಕರು ರಿಯಾಲ್ಟಿ ಕ್ಷೇತ್ರದ ವಿವಿಧ ಕಂಪನಿಗಳ ನಿವೇಶನ, ಅಪಾರ್ಟ್‌ಮೆಂಟ್, ವಿಲ್ಲಾ, ಫಾರ್ಮ್ ಹೌಸ್ ಹಾಗೂ ಫಾರ್ಮ್ ಪ್ಲಾಟ್ ಯೋಜನೆಗಳ ಮಾಹಿತಿ ಪಡೆಯಬಹುದು. 3 ದಿನ ನಡೆಯುವ ಈ ಮೇಳದಲ್ಲಿ 20-25 ಸಾವಿರ ಗ್ರಾಹಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
| ಬಿ. ಚಂದ್ರಪ್ಪ ಮದರ್ ಅರ್ತ್ ಬಿಲ್ಡರ್ಸ್ ಆಂಡ್ ಡೆವಲಪರ್ರ್ಸ್ನ ಎಂ.ಡಿ.
| ವಿ. ದುರ್ಗ ಚಂದ್ರು, ಗೃಹಮಿತ್ರ ಕನ್ಸ್ಟ್ರಕ್ಷನ್ ಕಂಪನಿ ಕಾರ್ಯಾಚರಣೆ ಮುಖ್ಯಸ್ಥ
| ಆರ್.ಅಶೋಕ್, ಎಂಆರ್ ಪ್ರಾಪರ್ಟಿ ಎಂ.ಡಿ.
| ಟಿ.ರವಿಕುಮಾರ್, ಆಶೀರ್ವಾದ ಡೆವಲಪರ್ಸ್ ಎಂ.ಡಿ.