More

    ರಾಷ್ಟ್ರದಲ್ಲಿ ಶಾಂತಿ ನಿರ್ವಹಣೆಗಾಗಿ ಯಾವುದೇ ಪಾತ್ರ ನಿಭಾಯಿಸಲು ನಾನು ಸಿದ್ಧ: ರಜಿನಿಕಾಂತ್​

    ಚೆನ್ನೈ: ಕೆಲ ದಿನಗಳ ಹಿಂದಷ್ಟೇ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮುಗಲಭೆಯನ್ನು ಖಂಡಿಸಿದ್ದ ಸೂಪರ್​ಸ್ಟಾರ್​ ರಜಿನಿಕಾಂತ್ ಇದೀಗ ದೇಶದಲ್ಲಿ ಶಾಂತಿ ನಿರ್ವಹಣೆಗಾಗಿ ಯಾವುದೇ ಪಾತ್ರವನ್ನು ನಿಭಾಯಿಸುವುದಾಗಿ ಹೇಳಿದ್ದಾರೆ. ​

    ಮುಸ್ಲಿಂ ಸಂಘಟನೆಯ ಕೆಲ ನಾಯಕರು ಭಾನುವಾರ ರಜಿನಿ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ ಬಳಿಕ ಟ್ವೀಟ್​ ಮಾಡಿದ್ದಾರೆ. ರಾಷ್ಟ್ರದಲ್ಲಿ ಶಾಂತಿ ಸ್ಥಾಪನೆಗಾಗಿ ನಾನು ಯಾವುದೇ ಪಾತ್ರವನ್ನು ಬೇಕಾದರು ನಿಭಾಯಿಸುತ್ತೇನೆ. ದೇಶದಲ್ಲಿನ ಪ್ರೀತಿ, ಐಕ್ಯತೆ ಮತ್ತು ಶಾಂತಿಯ ಮಾತುಗಳನ್ನಾಡಿದ ಮುಸ್ಲಿಂ ನಾಯಕರ ಹೇಳಿಕೆಯನ್ನು ನಾನು ಒಪ್ಪುತ್ತೇನೆ ಎಂದು ಹೇಳಿದ್ದಾರೆ.

    ಇದಕ್ಕೂ ಮುನ್ನ ಜಮಾ ಅಥುಲ್​ ಉಮಾ ಸಬಾಯಿ ಮುಸ್ಲಿಂ ಸಂಘಟನೆಯ ಸದಸ್ಯರು ಚೆನ್ನೈನಲ್ಲಿನ ಪೋಸ್ ಗಾರ್ಡನ್ ನಿವಾಸದಲ್ಲಿ ರಜಿನಿ ಅವರನ್ನು ಭೇಟಿ ಮಾಡಿ, ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಚರ್ಚಿಸಿದರು ಎಂದು ತಿಳಿದುಬಂದಿದೆ. ಇದಾದ ಬೆನ್ನಲ್ಲೇ ಟ್ವೀಟ್​ ಮಾಡಿದ್ದಾರೆ.

    ಕಳೆದ ವಾರ ಈಶಾನ್ಯ ದೆಹಲಿಯಲ್ಲಿ ಸಿಎಎ ಪರ-ವಿರೋಧ ಬಣದಿಂದ ಆರಂಭವಾದ ಗಲಭೆ ಹಿಂಸಾಚಾರಕ್ಕೆ ತಿರುಗಿ 42 ಮಂದಿ ಸಾವಿಗೀಡಾಗಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

    ಕಳೆದ ವಾರವಷ್ಟೇ ಗಲಭೆ ಸಂಬಂಧ ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಜಿನಿ, ಖಂಡಿತವಾಗಿ ಇದು ಕೇಂದ್ರ ಸರ್ಕಾರದ ಗುಪ್ತಚರ ವೈಫಲ್ಯ. ಗುಪ್ತಚರ ಇಲಾಖೆ ತನ್ನ ಕರ್ತವ್ಯವನ್ನು ನಿರ್ವಹಿಸಿಲ್ಲ. ಗುಪ್ತಚರ ವೈಫಲ್ಯವೆಂದರೆ, ಅದು ಗೃಹ ಸಚಿವಾಲಯದ ವೈಫಲ್ಯ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

    ಪ್ರತಿಭಟನೆ ಹಿಂಸಾತ್ಮಕವಾಗಿರದೇ ಶಾಂತಿಯುತವಾಗಿ ನಡೆಯಬೇಕಿತ್ತು. ಪ್ರತಿಭಟನೆ ನಡೆದರೆ, ಅದು ಖಂಡಿತವಾಗಿ ಉಕ್ಕಿನ ಕೈಗಳಿಂದ ನಡೆಸಬೇಕು. ಅದನ್ನು ಬಿಟ್ಟು ಹಿಂಸೆಯನ್ನು ಆಯ್ದುಕೊಳ್ಳಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts