More

    ಓದು ಅಂಕ ಗಳಿಕೆಗೆ ಸೀಮಿತವಾಗದಿರಲಿ

    ಅಥಣಿ: ವಿದ್ಯಾರ್ಥಿಗಳ ಪಾಲಿಗೆ ಎಸ್‌ಎಸ್‌ಎಲ್‌ಸಿ ಎಂಬುದು ಭವಿಷ್ಯದ ಮೊದಲ ಘಟ್ಟ. ಇಲ್ಲಿ ಪಡೆಯುವ ಅಂಕಗಳ ಮೇಲೆ ಮುಂದಿನ ಶಿಕ್ಷಣ ನಿರ್ಧಾರವಾಗುವ ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಯುದ್ದವೆಂದು ತಿಳಿಯದೇ ಹಬ್ಬದಂತೆ ಭಾವಿಸಿ ಪರೀಕ್ಷೆ ಎದುರಿಸಬೇಕು ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ನೋಡಲ್ ಅಧಿಕಾರಿ ಅರಿಹಂತ ಬಿರಾದಾರ ಪಾಟೀಲ ಹೇಳಿದ್ದಾರೆ.

    ಬುಧವಾರ ಪಟ್ಟಣದ ವಿವೇಕಾನಂದ ಶಿಕ್ಷಣ ಸಂಸ್ಥೆಯ ಎಸ್.ಡಿ.ಮೆಕನಮರಡಿ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಪೂರ್ವ ತಯಾರಿ ಸಂಬಂಧ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿ, ಶಿಕ್ಷಣ ಕೇವಲ ಅಂಕ ಗಳಿಕೆಗೆ ಸೀಮಿತವಾಗಬಾರದು. ಸಮಾಜಕ್ಕೆ ಕೊಡುಗೆ ನೀಡುವ ಪ್ರೇರಣಾದಾಯಕ ಅಂಶವಾಗಬೇಕು ಎಂದರು.

    ಸಂಸ್ಥೆಯ ಅಧ್ಯಕ್ಷ ಡಿ.ಡಿ.ಮೆಕನಮರಡಿ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ಹೊರಬಂದು ಏಕ್ರಾಗತೆಯಿಂದ ಓದಿ ಉತ್ತಮ ಅಂಕ ಗಳಿಸಬೇಕು ಎಂದರು. ಲಲಿತಾ ಮೆಕನಮರಡಿ, ವೈ.ಎ.ಜಮಾದಾರ, ಪ್ರಶಾಂತ ಮುನ್ನೋಳಿ, ರಾಜಶ್ರೀ ಕುಲಕರ್ಣಿ, ಎಂ.ಎ.ಮಠಪತಿ, ಗಂಗೂ ಹೊಸಮನಿ ಸೇರಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts