More

    ಇಡಿಯಿಂದ ಎಎಪಿ ಸಚಿವ ಸಂಜಯ್ ಸಿಂಗ್ ನಿಕಟವರ್ತಿ ವಿವೇಕ್ ತ್ಯಾಗಿ ವಿಚಾರಣೆ

    ದೆಹಲಿ: ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಆಮ್​ ಆದ್ಮಿ ಪಕ್ಷದ ನಾಯಕ, ಸಂಸದ ಸಂಜಯ್ ಸಿಂಗ್ ಆಪ್ತ ವಿವೇಕ್ ತ್ಯಾಗಿ ವಿಚಾರಣೆಗಾಗಿ ಶನಿವಾರ ಜಾರಿ ನಿರ್ದೇಶನಾಲಯ(ಇಡಿ) ಕಚೇರಿಗೆ ಆಗಮಿಸಿದ್ದಾರೆ.

    ಅ.4 ರಂದು ಎಎಪಿ ನಾಯಕ ಸಂಜಯ್ ಸಿಂಗ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಇಡಿ ಬಳಿಕ ಅವರನ್ನು ಬಂಧಿಸಿತ್ತು. ಇದಾದ ಬಳಿಕ ಅವರ ಆಪ್ತ ವಿವೇಕ್​ ತ್ಯಾಗಿ ವಿಚಾರಣೆಗೆ ಹಾಜರಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
    ಲಿಕ್ಕರ್​ ಗುತ್ತಿಗೆ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ಸಿಂಗ್ ಅವರ ನಿವಾಸದಲ್ಲಿ ಅ.4ರಂದು 10 ಗಂಟೆ ಕಾಲ ಶೋಧ ನಡೆಸಿದ್ದ ಇಡಿ ಅಧಿಕಾರಿಗಳು ಬಳಿಕ ಅವರನ್ನು ಬಂಧಿಸಿತ್ತು.

    ಇದನ್ನೂ ಓದಿ: ಏಳು ಸೈನಿಕರು ಸೇರಿದಂತೆ 51 ಜನರು ಸಾವು, ನೂರಾರು ಮಂದಿ ನಾಪತ್ತೆ…ಸಿಕ್ಕಿಂನಲ್ಲಿ ಪ್ರವಾಹಕ್ಕೆ ಕಾರಣ ತಿಳಿಸಿದ ಸಿಎಂ!

    ಇಡಿ ಮೂಲಗಳ ಪ್ರಕಾರ 2 ಕೋಟಿ ರೂ. ಅಕ್ರಮ ನಡೆದಿರುವ ಸಾಧ್ಯತೆಯಿದ್ದು, ಇದರಲ್ಲಿ ವಿವೇಕ್ ತ್ಯಾಗಿ ಜತೆ ಸಂಜಯ್​ ಸಿಂಗ್​ ಸಹವರ್ತಿ ಸರ್ವೇಶ್ ಮಿಶ್ರಾ ಮತ್ತು ಕನ್ವರ್ಬೀರ್ ಸಿಂಗ್ ಎಂಬುವವರ ಪಾತ್ರವೂ ಇದ್ದು, ಅವರಲ್ಲಿ ಸರ್ವೇಶ್ ಮಿಶ್ರಾ ಶುಕ್ರವಾರ ಇಡಿ ತನ್ನ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿತ್ತು.

    ಪ್ರಕರಣ ಸಂಬಂಧ ಸಂಜಯ್ ಸಿಂಗ್ ಅವರನ್ನು ಐದು ದಿನಗಳ ಕಾಲ(ಅ.10ರವರೆಗೆ) ಜಾರಿ ನಿರ್ದೇಶನಾಲಯದ ವಿಚಾರಣೆಗೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ನೀಡಿ ಆದೇಶಿಸಿದೆ.

    ಸಂಜಯ್ ಸಿಂಗ್ ಎದುರು ತ್ಯಾಗಿಯನ್ನು ಪ್ರಶ್ನಿಸಲು ಇಡಿ ಅಧಿಕಾರಿಗಳು ಮುಂದಾಗಿದ್ದಾರೆ. ಪ್ರಕರಣದಲ್ಲಿ ಸರ್ವೇಶ್ ಮಿಶ್ರಾ ಎರಡು ಬಾರಿ ಸಂಜಯ್ ಸಿಂಗ್ ಅವರಿಂದ 2 ಕೋಟಿ ರೂಪಾಯಿ ಪಡೆದಿದ್ದಾರೆ ಎಂನ್ನಲಾಗಿದ್ದು, ಇದರೊಂದಿಗೆ ಸಂಜಯ್ ಸಿಂಗ್ ಅವರ ಪಿಎ ವಿಜಯ್ ತ್ಯಾಗಿಗೆ ಆರೋಪಿ ಅಮಿತ್ ಅರೋರಾ ಅವರ ಕಂಪನಿ ಅರಾಲಿಯಾಸ್ ಹಾಸ್ಪಿಟಾಲಿಟಿ ಮದ್ಯ ಹಗರಣದ ವ್ಯವಹಾರದಲ್ಲಿ ಪಾಲನ್ನು ನೀಡಿದೆ ಎಂಬುದು ಇಡಿ ಪ್ರಮುಖ ಆರೋಪವಾಗಿದೆ.
    ಅಮಿತ್ ಅರೋರಾ ಮತ್ತು ದಿನೇಶ್ ಅರೋರಾ ಅವರ ಆದೇಶದ ಮೇರೆಗೆ ಐಎಂಎಫ್‌ಎಲ್ ಬ್ರಾಂಡ್‌ಗಳಿಗೆ ಬ್ರ್ಯಾಂಡ್ ನೋಂದಣಿ ಮಾನದಂಡವನ್ನು ಹೆಚ್ಚಿಸಲು 2020-21 ರ ಅಂದಿನ ಪ್ರಸ್ತಾವಿತ ಅಬಕಾರಿ ನೀತಿಯಲ್ಲಿ ಮನೀಶ್ ಸಿಸೋಡಿಯಾ ಮೂಲಕ ಬದಲಾವಣೆ ತಂದು ಅನುಕೂಲ ಮಾಡಿಕೊಡುವುದಾಗಿ ಸಿಂಗ್ ಭರವಸೆ ನೀಡಿದ್ದರು ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.

    ಈ ಪ್ರಕರಣದಲ್ಲಿ ಸಂಜಯ್ ಸಿಂಗ್ ಅವರ ಬಂಧನವನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷವು ರಾಷ್ಟ್ರ ರಾಜಧಾನಿ ಮತ್ತು ದೇಶದ ಇತರ ಭಾಗಗಳಲ್ಲಿ ಪ್ರತಿಭಟನೆ ನಡೆಸಿತ್ತು. ಸಂಜಯ್ ಸಿಂಗ್ ಅವರನ್ನು ಯಾವುದೇ ಪುರಾವೆಗಳು ಅಥವಾ ನಿರ್ದಿಷ್ಟ ಕಾರಣವಿಲ್ಲದೆ ಬಂಧಿಸಲಾಗಿದೆ. ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತಿದ್ದಾರೆ ಎಂದು ಇದು ಸಾಬೀತುಪಡಿಸುತ್ತದೆ. ಹೀಗಾಗಿಯೇ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಎಎಪಿ ಸಚಿವ ಸೌರಭ್ ಭಾರದ್ವಾಜ್ ಈ ಹಿಂದೆ ಆರೋಪಿಸಿದ್ದರು.

    ಇನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ ಎಎಪಿಯ ಮೂರನೇ ಪ್ರಮುಖ ನಾಯಕ ಸಿಂಗ್ ಆಗಿದ್ದಾರೆ. ಈ ಹಿಂದೆ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಾಗಿತ್ತು.

    ಆರ್​ಟಿಐ ಅಸ್ತ್ರ ದುರ್ಬಳಕೆ: ಬರೀ 15 ಜನರಿಂದ ಮಾಹಿತಿ ಆಯೋಗಕ್ಕೆ 18,134 ಮೇಲ್ಮನವಿ ಸಲ್ಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts