More

    ಆರ್‌ಸಿಬಿ ಶುಭಾರಂಭ, ಮುಂಬೈ ಇಂಡಿಯನ್ಸ್ ಎದುರು 2 ವಿಕೆಟ್ ಜಯ

    ಚೆನ್ನೈ: ದೇಶಾದ್ಯಂತ ಭಯ ಹುಟ್ಟಿಸಿರುವ ಕರೊನಾ ಎರಡನೇ ಅಲೆಯ ಅಬ್ಬರದ ನಡುವೆಯೇ ಆರಂಭಗೊಂಡ ಐಪಿಎಲ್ 14ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡ ಶುಭಾರಂಭ ಕಂಡಿತು. ಚೆಪಾಕ್‌ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮಧ್ಯಮ ವೇಗಿ ಹರ್ಷಲ್ ಪಟೇಲ್ (27ಕ್ಕೆ 5) ಮಾರಕ ದಾಳಿ ಹಾಗೂ ಅನುಭವಿ ಎಬಿ ಡಿವಿಲಿಯರ್ಸ್‌ (48 ರನ್, 27 ಎಸೆತ, 4 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ ವಿರಾಟ್ ಕೊಹ್ಲಿ ಬಳಗ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 2 ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ ಮುಂಬೈ ತಂಡದ ಟೂರ್ನಿ ಆರಂಭಿಕ ಪಂದ್ಯಗಳ ಸೋಲು ಮುಂದುವರಿದಂತಾಗಿದೆ.

    ಇದನ್ನೂ ಓದಿ: ಐಪಿಎಲ್ 14ನೇ ಆವೃತ್ತಿಯಲ್ಲಿ ಹೊಸದೇನಿದೆ ಗೊತ್ತೇ..?

    ಟಾಸ್ ಜಯಿಸಿದ ನಾಯಕ ವಿರಾಟ್ ಕೊಹ್ಲಿ ಎದುರಾಳಿ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಹರ್ಷಲ್ ಪಟೇಲ್ ದಾಳಿಗೆ ನಲುಗಿದ ಮುಂಬೈ 9 ವಿಕೆಟ್‌ಗೆ 159 ರನ್ ಪೇರಿಸಿತು. ಪ್ರತಿಯಾಗಿ ಆರ್‌ಸಿಬಿ, ಎಬಿಡಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (39ರನ್, 28 ಎಸೆತ, 3 ಬೌಂಡರಿ, 2 ಸಿಕ್ಸರ್) ಭರ್ಜರಿ ನಿರ್ವಹಣೆಯಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 160 ರನ್ ಕಲೆಹಾಕಿತು.

    ಇದನ್ನೂ ಓದಿ: ರಾಹುಲ್ ದ್ರಾವಿಡ್ಗೆ ಕೋಪ ಉಕ್ಕೇರಿದಾಗ ಬಂತು ಕನ್ನಡದ ನುಡಿ..ಒಡೆದ್ ಹಾಕ್ ಬಿಡ್ತೀನಿ..!

    ಮುಂಬೈ ಇಂಡಿಯನ್ಸ್: 9 ವಿಕೆಟ್‌ಗೆ 159 (ಕ್ರಿಸ್ ಲ್ಯಾನ್ 49, ಸೂರ್ಯಕುಮಾರ್ ಯಾದವ್ 31, ಇಶಾನ್ ಕಿಶನ್ 38, ಹಾರ್ದಿಕ್ ಪಾಂಡ್ಯ 13, ಹರ್ಷಲ್ ಪಟೇಲ್ 27ಕ್ಕೆ 5, ವಾಷಿಂಗ್ಟನ್ ಸುಂದರ್ 7ಕ್ಕೆ 1), ಆರ್‌ಸಿಬಿ: 8 ವಿಕೆಟ್‌ಗೆ 160 (ಎಬಿ ಡಿವಿಲಿಯರ್ಸ್‌ 48, ಗ್ಲೆನ್ ಮ್ಯಾಕ್ಸ್‌ವೆಲ್ 39, ವಿರಾಟ್ ಕೊಹ್ಲಿ 33, ಜಸ್‌ಪ್ರೀತ್ ಬುಮ್ರಾ 26ಕ್ಕೆ 2, ಮಾರ್ಕೋ ಜಾನ್ಸೆನ್ 28ಕ್ಕೆ 2, ಟ್ರೆಂಟ್ ಬೌಲ್ಟ್ 36ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts