More

    ಯುಎಇಯಲ್ಲಿ ಐಪಿಎಲ್​ ನಡೆದರೆ ಆರ್​ಸಿಬಿಗೆ ಟ್ರೋಫಿ ಗೆಲ್ಲುವ ಅದೃಷ್ಟ ಇದೆಯಂತೆ..!

    ಬೆಂಗಳೂರು: ಆಸ್ಟ್ರೆಲಿಯಾದಲ್ಲಿ ನಿಗದಿಯಾಗಿದ್ದ 2020ರ ಟಿ20 ವಿಶ್ವಕಪ್​ ಮುಂದೂಡಿಕೆಯಾದ ಬೆನ್ನಲ್ಲೆ 13ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಚಟುವಟಿಕೆಗಳು ಗರಿಗೆದರಿವೆ. ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಯುಎಇಯಲ್ಲಿ ಲೀಗ್​ ಆಯೋಜಿಸಲು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ತುದಿಗಾಲಲ್ಲಿ ನಿಂತಿದೆ. ಯುಎಇಯಲ್ಲಿ ಲೀಗ್​ ನಡೆದ 3 ಬಾರಿ ರನ್ನರ್​ಅಪ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡಕ್ಕೆ ಅನುಕೂಲ ಎಂಬ ಮಾತುಗಳು ಕ್ರಿಕೆಟ್​ ವಲಯದಲ್ಲಿ ಈಗಾಗಲೇ ಕೇಳಿ ಬರುತ್ತಿವೆ. ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಆಕಾಶ್​ ಚೋಪ್ರಾ ಯೂಟ್ಯೂಬ್​ ಚಾನೆಲ್​ ಜತೆ ಮಾತನಾಡುತ್ತಾ ಈ ಅಭಿಪ್ರಾಯ ಹೊರಹಾಕಿದ್ದಾರೆ.

    ಇದನ್ನೂ ಓದಿ: ದೀಪಾವಳಿವರೆಗೆ ನಡೆಯುತ್ತಾ ಐಪಿಎಲ್ ಹಬ್ಬ?

    ಯುಎಇಯಲ್ಲಿ ಐಪಿಎಲ್​ ನಡೆದರೆ ಆರ್​ಸಿಬಿಗೆ ಟ್ರೋಫಿ ಗೆಲ್ಲುವ ಅದೃಷ್ಟ ಇದೆಯಂತೆ..!ಯುಎಇ ಪಿಚ್​ಗಳಿಗೂ ಭಾರತೀಯ ಪಿಚ್​ಗಳಿಗೂ ಅಷ್ಟೊಂದು ವ್ಯತ್ಯಾಸವಿಲ್ಲ. ಆದರೆ, ದೊಡ್ಡ ಬೌಂಡರಿ ಲೈನ್​ ಇರುವುದರಿಂದ ಆರ್​ಸಿಬಿಯಂಥ ತಂಡಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂದು ಆಕಾಶ್​ ಹೇಳಿದ್ದಾರೆ. ಬೌಲಿಂಗ್​ನಲ್ಲಿ ಅಷ್ಟೊಂದು ಪ್ರಬಲವಾಗಿರದ ಆರ್​ಸಿಬಿ ತಂಡಕ್ಕೆ ಬ್ಯಾಟಿಂಗ್​ ವಿಭಾಗವೇ ದೊಡ್ಡ ಶಕ್ತಿ ಎಂದಿದ್ದಾರೆ. ಗುಣಮಟ್ಟದ ಸ್ಪಿನ್ನರ್​ಗಳನ್ನು ಹೊಂದಿರುವ ಸಿಎಸ್​ಕೆ, ಸ್ಪಿನ್​ ಪಿಚ್​ಗಳಿದ್ದರೆ ಪ್ರಬಲ ತಂಡವಾಗಲಿದೆ ಎಂದು ಮಾಜಿ ಕ್ರಿಕೆಟ್​ ಆಕಾಶ್​ ಹೇಳಿದ್ದಾರೆ. ಯುಎಇಯಲ್ಲಿ ಹೆಚ್ಚು ಬಿಸಿಲಿದ್ದರೂ ಅಕ್ಟೋಬರ್​-ನವೆಂಬರ್​ ವೇಳೆಗೆ ಅಷ್ಟೊಂದು ಪ್ರಬಲವಾಗಿರುವುದಿಲ್ಲ ಎಂದು ಆಕಾಶ್ ಹೇಳಿದ್ದಾರೆ. 

    ಇದನ್ನೂ ಓದಿ: ವಿಂಡೀಸ್, ಪಾಕಿಸ್ತಾನದ ಬಳಿಕ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾದ ಆಸ್ಟ್ರೇಲಿಯಾ

    ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ 2009ರಲ್ಲಿ ಸಂಪೂರ್ಣ ಟೂನಿರ್ಯನ್ನೇ ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಬಳಿಕ 2014ರಲ್ಲೂ ಲೀಗ್​ನ ಅರ್ಧದಷ್ಟು ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು. ಟಿ20 ವಿಶ್ವಕಪ್​ ಮುಂದೂಡಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಐಸಿಸಿ ಕಳೆದ ಎರಡು ತಿಂಗಳಿಂದ ಹಗ್ಗಜಗ್ಗಾಟದಲ್ಲೇ ಮುಳುಗಿತ್ತು. ಸೆಪ್ಟೆಂಬರ್​ 26 ರಿಂದ ನವೆಂಬರ್​ 7 ಅಥವಾ 8ರವರೆಗೆ ಯುಎಇಯಲ್ಲಿ ಲೀಗ್​ ನಡೆಯುವ ಸಾಧ್ಯತೆಗಳಿವೆ. ಆದರೆ, ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ಐಪಿಎಲ್​ ಭವಿಷ್ಯದ ನಿಂತಿದೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts