More

    ಅನುಷ್ಕಾರ ನಮಸ್ಕಾರ ಹಿಂದಿರುವ ಅರ್ಥವೇನು? ಪತಿ ವಿರಾಟ್​ ಕೊಹ್ಲಿಗೆ ರವಾನಿಸಿದ ಸಂದೇಶ ಹೀಗಿದೆ…

    ಬೆಂಗಳೂರು: ಮೊನ್ನೆ (ಮೇ 12) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 47 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 187 ರನ್‌ಗಳ ಗುರಿ ನೀಡಿತು. ಬಳಿಕ ಚೇಸಿಂಗ್ ಆರಂಭಿಸಿದ ಡೆಲ್ಲಿ 19.1 ಓವರ್​ಗಳಲ್ಲಿ 140 ರನ್​ಗಳಿಗೆ ಸರ್ವಪತನ ಕಂಡಿತು.

    ಬ್ಯಾಟಿಂಗ್​ನಲ್ಲಿ 32 ರನ್ ಗಳಿಸಿ ತಮ್ಮ ಶಕ್ತಿ ಪ್ರದರ್ಶಿಸಿದ ಕ್ಯಾಮರೂನ್ ಗ್ರೀನ್ ಬೌಲಿಂಗ್​ನಲ್ಲೂ ವಿಕೆಟ್ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಆದರೆ, ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ.

    ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ಲಂಡನ್‌ನಲ್ಲಿದ್ದ ಅನುಷ್ಕಾ ಶರ್ಮಾ ದ್ವಿತೀಯಾರ್ಧದಲ್ಲಿ ಭಾರತಕ್ಕೆ ಬಂದಿಳಿದರು. ಪ್ರತಿಯೊಂದು ಆರ್‌ಸಿಬಿ ಪಂದ್ಯಗಳಿಗೆ ಹಾಜರಾಗುತ್ತಿದ್ದಾರೆ. ವಿರಾಟ್ ಬ್ಯಾಟಿಂಗ್ ಸಮಯದಲ್ಲಿ, ಆರ್​ಸಿಬಿ ಫೀಲ್ಡಿಂಗ್ ಸಮಯದಲ್ಲಿ, ಕ್ಯಾಮೆರಾಗಳು ಹೆಚ್ಚಾಗಿ ಅನುಷ್ಕಾ ಅವರ ಮೇಲೆಯೇ ಕೇಂದ್ರೀಕರಿಸುತ್ತವೆ. ಕೊಹ್ಲಿ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದಾಗಲೂ ಅನುಷ್ಕಾ ಸಂಭ್ರಮಿಸುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಅನುಷ್ಕಾ ಗೆಲುವಿನ ಸಂಭ್ರಮಾಚರಣೆ ಮಾಡಿದ್ದಾರೆ.

    ಡೆಲ್ಲಿ ತಂಡದ ಕೊನೆಯ ವಿಕೆಟ್ ಪತನವಾದಾಗ ಅನುಷ್ಕಾ ತುಂಬಾ ಉತ್ಸಾಹದಿಂದ ಎದ್ದು ನಿಂತು ವಿಭಿನ್ನವಾಗಿ ನಮಸ್ಕಾರ ಮಾಡುವ ಮೂಲಕ ಸಂಭ್ರಮಿಸಿದರು. ನೀವು ಅಂದುಕೊಂಡ ಯಶಸ್ಸು ಸಾಧಿಸಿದ್ದೀರಿ, ನಿಮಗೆ ಅಭಿನಂದನೆಗಳು ಎನ್ನುವ ಅರ್ಥದಲ್ಲಿ ಅನುಷ್ಕಾ ನಮಸ್ಕಾರ ಮಾಡಿದರು. ಈ ವೇಳೆ ಕೊಹ್ಲಿ, ಪತ್ನಿ ಅನುಷ್ಕಾ ಕಡೆ ನೋಡಿ, ಅಂದುಕೊಂಡಿದ್ದನ್ನು ಸಾಧಿಸಿದವರಂತೆ ಪತ್ನಿಯತ್ತ ಬೆರಳು ತೋರಿಸುತ್ತಾ ಸನ್ನೆ ಮಾಡಿದರು.

    ಕೊಹ್ಲಿ ಮತ್ತು ಅನುಷ್ಕಾ ನಡುವಿನ ವಿಶೇಷ ಕ್ಷಣಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ಇನ್ನೂ ಆರ್​ಸಿಬಿ ಭಾರಿ ಅಂತರದಿಂದ ಸಿಎಸ್​ಕೆ ತಂಡವನ್ನು ಸೋಲಿಸಿದರೆ ಮಾತ್ರ ಪ್ಲೇಆಫ್​ಗೆ ಅರ್ಹತೆ ಪಡೆಯಲಿದೆ. ಮೇ 18ರಂದು ಸಿಎಸ್​ಕೆ ಮತ್ತು ಬೆಂಗಳೂರು ಮುಖಾಮುಖಿಯಾಗಿಲಿವೆ. (ಏಜೆನ್ಸೀಸ್​)

    30 ವರ್ಷಗಳ ಹಿಂದೆ ಮೃತಪಟ್ಟ ಮಗಳಿಗೆ ಅದ್ಧೂರಿ ಮದುವೆ ಮಾಡಲು ತುಳು ಕುಟುಂಬ ತಯಾರಿ!

    ಎಲ್‌ಎಸ್‌ಜಿ ನಾಯಕತ್ವ ತೊರೆಯುವರೇ ರಾಹುಲ್ ?: ಲಖನೌ ಎದುರು ಗೆದ್ದರೂ ಡೆಲ್ಲಿಗಿಲ್ಲ ಪ್ಲೇಆಫ್​ ಚಾನ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts