ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಗೆ ಅದ್ದೂರಿ ಚಾಲನೆ ಸಿಕ್ಕಿದ್ದೇ ತಡ ಪ್ರತಿಯೊಂದು ಪಂದ್ಯವು ರೋಚಕವಾಗಿ ಸಾಗುತ್ತಿವೆ. ಇನ್ನು ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 10ನೇ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದು, ಕೆಕೆಆರ್ ಆರ್ಭಟಕ್ಕೆ ಆರ್ಸಿಬಿ ತತ್ತರಿಸಿತು.
ಇದನ್ನೂ ಓದಿ: ನೆಗೆಟಿವ್ ಕಮೆಂಟ್ಗಳ ಮಧ್ಯೆ ಇವರೊಬ್ಬರ ಅನಿಸಿಕೆ ಬಹಳ ಖುಷಿ ಕೊಡ್ತು! ನಟಿ ಅನುಪಮಾಗೆ ಹೀಗೇಳಿದ್ಯಾರು?
ಟಾಸ್ ಗೆದ್ದ ಕೆಕೆಆರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್ಗಳಲ್ಲಿ 183 ರನ್ ಗುರಿ ನೀಡಿದ ಆರ್ಸಿಬಿಗೆ ಟಕ್ಕರ್ ಕೊಡಲು ದ್ವಿತೀಯಾರ್ಧದಲ್ಲಿ ಕಣಕ್ಕಿಳಿದ ಶ್ರೇಯಸ್ಸ್ ಅಯ್ಯರ್ ಪಡೆ, ಓಪನರ್ ಆಗಿ ಸ್ಪೋಟಕ ಓಪನಿಂಗ್ ಕೊಟ್ಟ ಸುನಿಲ್ ನರೇನ್ ಮತ್ತು ಸಾಲ್ಟ್, ಸ್ಟೇಡಿಯಂನ ಸುತ್ತಮುತ್ತ ಸಿಕ್ಸರ್ಗಳ ಸುರಿಮಳೆಯನ್ನೇ ಹರಿಸಿದರು. ಈ ಮೂಲಕ 77 ರನ್ಗಳನ್ನು ಕೊಡುಗೆಯಾಗಿ ಕೊಟ್ಟ ಈ ಜೋಡಿ, ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಪೆವಿಲಿಯನ್ನತ್ತ ಮುಖಮಾಡಿದರು.
ಕೆಕೆಆರ್ ನಾಯಕ ಶ್ರೇಯಸ್ಸ್ ಅಯ್ಯರ್ 59 ಮತ್ತು ವೆಂಕಟೇಶ್ ಅಯ್ಯರ್ ಅಬ್ಬರದ ಜತೆಯಾಟದಿಂದ ಕೊಲ್ಕತ್ತಾ ಭರ್ಜರಿ ಗೆಲುವು ದಾಖಲಿಸಿತು. 83 ರನ್ ಸಿಡಿಸಿದ ವಿರಾಟ್ ಕೊಹ್ಲಿಯ ಏಕಾಂಗಿ ಹೋರಾಟ ಕಡೆಗೂ ವಿಫಲಗೊಂಡಿದ್ದು, ಆರ್ಸಿಬಿ ಅಭಿಮಾನಿಗಳಲ್ಲಿ ಭಾರೀ ಬೇಸರ ಮೂಡಿಸಿದೆ.
ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು