More

    ಆರ್​ಸಿಬಿ ಮ್ಯಾನೇಜ್​ಮೆಂಟ್​ ವಿರುದ್ಧ ಆಕ್ರೋಶ :ತಂಡದ ನೀರಸ ನಿರ್ವಹಣೆಗೆ ಸೆಹ್ವಾಗ್​, ಭೂಪತಿ ಕಟುಟೀಕೆ

    ಬೆಂಗಳೂರು: ಹೊಸ ಜೆರ್ಸಿ, ಲಾಂಛನದ ಜತೆಗೆ ಹೆಸರಿನಲ್ಲೂ “ಬೆಂಗಳೂರು’ ಪದ ಸರಿಪಡಿಸಿಕೊಂಡು “ಹೊಸ ಅಧ್ಯಾಯ’ ಎಂಬ ಬರೆಯುವ ಉತ್ಸಾಹದೊಂದಿಗೆ ಅಭಿಯಾನ ಆರಂಭಿಸಿದ್ದ ಆರ್​ಸಿಬಿ ಪಾಲಿಗೆ ಈಗ ಐಪಿಎಲ್​&17 ಬಹುತೇಕ “ಮುಗಿದ ಅಧ್ಯಾಯ’ ಎಂಬಂತಾಗಿದೆ. ಮೊದಲ 7ರಲ್ಲಿ 1ರಲ್ಲಿ ಮಾತ್ರ ಗೆದ್ದಿರುವ ಆರ್​ಸಿಬಿ ಇನ್ನು ಪ್ಲೇಆ್​ಗೇರಬೇಕಾದರೆ ಉಳಿದ ಏಳರಲ್ಲೂ ಗೆದ್ದರಷ್ಟೇ ಸಾಲದು, ಟೂರ್ನಿಯ ಇತರ ಲಿತಾಂಶಗಳೂ ವರವಾಗಿ ಬರಬೇಕಿದೆ. ಹೀಗಾಗಿ 17ನೇ ಸಲವೂ ಕಪ್​ ಕೈತಪು$್ಪತ್ತಿರುವ ಬಗ್ಗೆ ಅಭಿಮಾನಿಗಳಲ್ಲಿ ಅಸಮಾಧಾನ ಕಾಣಿಸಿಕೊಂಡಿದ್ದರೆ, ಮಾಜಿ ಕ್ರಿಕೆಟಿಗರು, ಕ್ರಿಕೆಟ್​ ಪ್ರೇಮಿಗಳ ಆಕ್ರೋಶವೂ ಜೋರಾಗುತ್ತಿದೆ. ಪ್ರಮುಖವಾಗಿ ಈಗ ತಂಡದ ಆಟಗಾರರಿಗಿಂತ ಟೀಮ್​ ಮ್ಯಾನೇಜ್​ಮೆಂಟ್​ ವಿರುದ್ಧವೇ ಹೆಚ್ಚಿನ ಟೀಕೆಗಳು ವ್ಯಕ್ತವಾಗುತ್ತಿವೆ.

    ಟೀಮ್​ ಇಂಡಿಯಾ ಮಾಜಿ ಬ್ಯಾಟರ್​ ವೀರೇಂದ್ರ ಸೆಹ್ವಾಗ್​, ಮನೋಜ್​ ತಿವಾರಿ ಆರ್​ಸಿಬಿ ಮ್ಯಾನೇಜ್​ಮೆಂಟ್​ಅನ್ನೇ ಪ್ರಶ್ನೆ ಮಾಡಿದ್ದಾರೆ. ಆರ್​ಸಿಬಿ ಕೋಚ್​ (ಆಂಡಿ ್ಲವರ್​), ನಿರ್ದೇಶಕ (ಮೋ ಬೋಬಟ್​) ಸಹಿತ ತಂಡದ ಮ್ಯಾನೇಜ್​ಮೆಂಟ್​ನಲ್ಲಿ ಬಹುತೇಕ ವಿದೇಶಿಯರೇ ತುಂಬಿದ್ದರೆ, ತಂಡ ಬಹುತೇಕ ಭಾರತೀಯ ಆಟಗಾರರು ಇಂಗ್ಲಿಷ್​ ಗೊತ್ತಿಲ್ಲದವರಾಗಿದ್ದಾರೆ. ಹೀಗಾಗಿ ಅವರಿಗೆ ಈ ವಿದೇಶೀಯರು ಹೇಗೆ ಪ್ರೇರಣೆ ನೀಡಲು ಸಾಧ್ಯ? ತರಬೇತಿ ಸಿಬ್ಬಂದಿ ಬಳಗದಲ್ಲಿ ಒಬ್ಬನೇ ಒಬ್ಬ ಭಾರತೀಯನಿಲ್ಲ. ಆಟಗಾರರನ್ನು ಅವರು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹೇಗೆ ಸಾಧ್ಯ? ಎಂದು ಸೆಹ್ವಾಗ್​ ಕಿಡಿಕಾರಿದ್ದಾರೆ. ಇನ್ನು ಮನೋಜ್​ ತಿವಾರಿ ಆರ್​ಸಿಬಿ ತಂಡದ ಹರಾಜಿನ ಕಾರ್ಯತಂತ್ರವನ್ನು ಪ್ರಮುಖವಾಗಿ ದೂರಿದ್ದು, ಪ್ರಮುಖ ವಿಕೆಟ್​ ಟೇಕರ್​ ಯಜುವೇಂದ್ರ ಚಾಹಲ್​ರನ್ನು ಕೈಬಿಟ್ಟ ಮತ್ತು ವಿರಾಟ್​ ಕೊಹ್ಲಿ ನಾಯಕತ್ವವನ್ನು ಉಳಿಸಿಕೊಳ್ಳದ ಬಗ್ಗೆ ಟೀಕೆ ಮಾಡಿದ್ದಾರೆ.

    ಮಹೇಶ್​ ಭೂಪತಿ ಕಿಡಿ: ಅಭಿಮಾನಿಗಳ ಪ್ರೀತಿಗೆ ಸರಿಯಾದ ಬೆಲೆ ನೀಡದ ಆರ್​ಸಿಬಿ ಮ್ಯಾನೇಜ್​ಮೆಂಟ್​ ವಿರುದ್ಧ ದಿಗ್ಗಜ ಟೆನಿಸ್​ ಆಟಗಾರ ಹಾಗೂ ಕನ್ನಡಿಗ ಮಹೇಶ್​ ಭೂಪತಿ ಕೂಡ “ಎಕ್ಸ್​’ನಲ್ಲಿ ಕಿಡಿಕಾರಿದ್ದಾರೆ. “ಕ್ರೀಡೆ, ಐಪಿಎಲ್​, ಅಭಿಮಾನಿಗಳು ಮತ್ತು ಆಟಗಾರರ ಹಿತದೃಷ್ಟಿಯಿಂದ ಬಿಸಿಸಿಐ, ಆರ್​ಸಿಬಿ ತಂಡವನ್ನು ಮಾರಾಟ ಮಾಡಿ, ಹೆಚ್ಚಿನ ಇತರ ್ರಾಂಚೈಸಿಗಳಂತೆ ಬಲಿಷ್ಠವಾದ ತಂಡ ಕಟ್ಟಬಲ್ಲಂಥ ಹೊಸ ಮಾಲೀಕರಿಗೆ ಅದರ ಒಡೆತವನ್ನು ಒಪ್ಪಿಸಬೇಕು’ ಎಂದು ಭೂಪತಿ ಬರೆದುಕೊಂಡಿದ್ದಾರೆ.

    ಆರ್​ಸಿಬಿ 11 ಬ್ಯಾಟರ್​ಗಳನ್ನೇ ಆಡಿಸುವುದು ಉತ್ತಮ. ಡು ಪ್ಲೆಸಿಸ್​ ಕೂಡ 2 ಓವರ್​ ಬೌಲಿಂಗ್​ ಮಾಡಬಹುದು. ವಿರಾಟ್​ ಕೊಹ್ಲಿ ಬೌಲಿಂಗ್​ ಮಾಡಿದರೂ, ಅಷ್ಟೊಂದು ರನ್​ ಬಿಟ್ಟುಕೊಡಲಾರರು.
    > ಕೆ. ಶ್ರೀಕಾಂತ್​, ಮಾಜಿ ಕ್ರಿಕೆಟಿಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts