More

    ಐಪಿಎಲ್ ಸಮರಕ್ಕೆ ಆರ್‌ಸಿಬಿ ಸಿದ್ಧತೆ, ಚೆನ್ನೈನಲ್ಲಿ ತರಬೇತಿ ಆರಂಭ..

    ಚೆನ್ನೈ: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ, ಏಪ್ರಿಲ್ 9 ರಿಂದ ಆರಂಭವಾಗಲಿರುವ 14ನೇ ಆವೃತ್ತಿಯ ಐಪಿಎಲ್‌ಗೆ ಪೂರ್ವಭಾವಿಯಾಗಿ ಮಂಗಳವಾರದಿಂದ ತರಬೇತಿ ಆರಂಭಿಸಿತು. ಮುಂದಿನ 9 ದಿನಗಳ ಕಾಲ ತರಬೇತಿ ಶಿಬಿರ ನಡೆಯಲಿದೆ. ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಹಾಗೂ ಮುಖ್ಯ ಕೋಚ್ ಸೈಮನ್ ಕಾಟಿಚ್ ಮಾರ್ಗದರ್ಶನದಲ್ಲಿ ಸದ್ಯ 11 ಆಟಗಾರರು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಉಳಿದ ಆಟಗಾರರು 7 ದಿನಗಳ ಕ್ವಾರಂಟೈನ್ ಅವಧಿ ಮುಕ್ತಾಯಗೊಳಿಸಿದ ಬಳಿಕ ಶಿಬಿರ ಕೂಡಿಕೊಳ್ಳಲಿದ್ದಾರೆ. ಐಪಿಎಲ್ ಬಯೋಬಬಲ್ ಪ್ರದೇಶಕ್ಕೆ ಪ್ರವೇಶ ಪಡೆಯುವುದಕ್ಕೂ ಮುನ್ನ 7 ದಿನಗಳ ಕ್ವಾರಂಟೈನ್ ಅವಧಿಯನ್ನು ಕಡ್ಡಾಯಗೊಳಿಸಲಾಗಿದೆ.

    ಇದನ್ನೂ ಓದಿ: ಬಯೋಬಬಲ್ ನಲ್ಲಿ ಭಾರತ ಬಲಿಷ್ಠ; ವಿಂಡೀಸ್, ಆಸೀಸ್ ಪ್ರಾಬಲ್ಯ ನೆನಪಿಸಿದ ಕೊಹ್ಲಿ ಪಡೆ

    ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಗುರುವಾರ ತಂಡ ಕೂಡಿಕೊಳ್ಳಲಿದ್ದು. ಅಲ್ಲದೆ, ಕೊಹ್ಲಿ ಕೂಡ ಕ್ವಾರಂಟೈನ್‌ಗೆ ಒಳಗಾಗುವ ಸಾಧ್ಯತೆಗಳಿವೆ. ‘ಚೆನ್ನೈನಲ್ಲಿರುವ ಶ್ರೀರಾಮಚಂದ್ರ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದಲ್ಲಿರುವ ಕ್ರೀಡಾ ವಿಜ್ಞಾನ ಕೇಂದ್ರದಲ್ಲಿ 9 ದಿನಗಳ ಕಾಲ ತರಬೇತಿ ಶಿಬಿರ ನಡೆಯಲಿದೆ’ ಎಂದು ಫ್ರಾಂಚೈಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್, ಬೌಲಿಂಗ್ ಕೋಚ್ ಶ್ರೀರಾಮ್ ಶ್ರೀರಾಮ್, ಆಡಂ ಗ್ರೀಫಿತ್, ಫಿಸಿಯೋ ಶಂಕರ್ ಬಸು ಹಾಗೂ ಮಲೊಲನ್ ರಂಗರಾಜನ್ ವಿವಿಧ ವಿಭಾಗದ ಉಸ್ತುವಾರಿ ವಹಿಸಿದ್ದಾರೆ.

    ಇದನ್ನೂ ಓದಿ: VIDEO: ಓವರ್ ಗೆ 6 ಸಿಕ್ಸರ್ ಸಿಡಿಸಿದ ಥಿಸೆರಾ ಪೆರೇರಾ; ಶ್ರೀಲಂಕಾದ ಮೊದಲ ಸಾಧಕ

    ಏಪ್ರಿಲ್ 9 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಯಜುವೇಂದ್ರ ಚಾಹಲ್, ನವದೀಪ್ ಸೈನಿ, ಮೊಹಮದ್ ಸಿರಾಜ್, ಹರ್ಷಲ್ ಪಟೇಲ್, ಶಾಬಾದ್ ನದೀಂ, ಪವನ್ ದೇಶಪಾಂಡೆ, ಮೊಹಮದ್ ಅಜರುದ್ದೀನ್, ರಜತ್ ಪಟಿದಾರ್, ಸಚಿನ್ ಬೇಬಿ, ಸೂಯಾಂಶ್ ಪ್ರಭುದೇಸಾಯಿ, ಕೆಎಸ್ ಭರತ್ ಶಿಬಿರದಲ್ಲಿ ಪಾಲ್ಗೊಂಡಿರುವ ಆಟಗಾರರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts