More

    ಆರ್‌ಸಿಬಿಗೆ ಸತತ 2ನೇ ಸೋಲು; ಸಿಎಸ್‌ಕೆ ಎದುರು ಮುಗ್ಗರಿಸಿದ ಕೊಹ್ಲಿ ಪಡೆ

    ಶಾರ್ಜಾ: ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತೋರಿದ ಭರ್ಜರಿ ನಿರ್ವಹಣೆ ಎದುರು ಸಂಪೂರ್ಣ ಮಂಕಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-14ರ ಎರಡನೇ ಭಾಗದಲ್ಲಿ ಸತತ 2ನೇ ಸೋಲನುಭವಿಸಿತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ 6 ವಿಕೆಟ್‌ಗಳಿಂದ ಶರಣಾಯಿತು. ಅಂಕಪಟ್ಟಿಯಲ್ಲಿ ಮೇಲೇರುವ ಲೆಕ್ಕಾಚಾರದಲ್ಲಿದ್ದ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲೇ ಉಳಿಯಿತು. ಮತ್ತೊಂದೆಡೆ, ಅರಬ್ ನಾಡಿನಲ್ಲಿ ಸತತ 2ನೇ ಜಯ ಕಂಡ ಎಂಎಸ್ ಧೋನಿ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಪ್ಲೇಆಫ್ ಹಂತಕ್ಕೆ ಮತ್ತಷ್ಟು ಸನಿಹವಾಯಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ಕೊಹ್ಲಿ-ಪಡಿಕಲ್ ಜೋಡಿ ಮೊದಲ ವಿಕೆಟ್‌ಗೆ 111 ರನ್ ಕಲೆಹಾಕಿದರೂ, ಸ್ಲಾಗ್ ಓವರ್‌ಗಳಲ್ಲಿ ವೇಗಿಗಳಾದ ಡ್ವೇನ್ ಬ್ರಾವೊ (24ಕ್ಕೆ 3) ಹಾಗೂ ಶಾರ್ದೂಲ್ ಠಾಕೂರ್ (29ಕ್ಕೆ 2) ಆಘಾತ ನೀಡಿದರು. ಇದರಿಂದ ದಿಢೀರ್ ಕುಸಿತ ಕಂಡ ಆರ್‌ಸಿಬಿ 6 ವಿಕೆಟ್‌ಗೆ 156 ರನ್‌ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ತೃಪ್ತಿಪಟ್ಟಿತು. ಪ್ರತಿಯಾಗಿ ಸರಾಗವಾಗಿ ಈ ಸವಾಲನ್ನು ಬೆನ್ನಟ್ಟಿದ ಸಿಎಸ್‌ಕೆ, 18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 157 ರನ್‌ಗಳಿಸಿ ಜಯದ ನಗೆ ಬೀರಿತು. ಇದರೊಂದಿಗೆ ಪ್ರಸಕ್ತ ಲೀಗ್‌ನಲ್ಲಿ ಸಿಎಸ್‌ಕೆ ಎದುರು ಆರ್‌ಸಿಬಿ ಎರಡು ಮುಖಾಮುಖಿಯಲ್ಲೂ ಸೋಲು ಕಂಡಿತು.

    ಆರ್‌ಸಿಬಿ: 6 ವಿಕೆಟ್‌ಗೆ 156 (ವಿರಾಟ್ ಕೊಹ್ಲಿ 53, ದೇವದತ್ ಪಡಿಕಲ್ 70, ಎಬಿಡಿ 12, ಮ್ಯಾಕ್ಸ್‌ವೆಲ್ 11, ಶಾರ್ದೂಲ್ ಠಾಕೂರ್ 29ಕ್ಕೆ 2, ಡ್ವೇನ್ ಬ್ರಾವೊ 24ಕ್ಕೆ 3), ಸಿಎಸ್‌ಕೆ: 18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 157 (ಋತುರಾಜ್ ಗಾಯಕ್ವಾಡ್ 38, ಫಾಫ್ ಡು ಪ್ಲೆಸಿಸ್ 31, ಮೊಯಿನ್ ಅಲಿ 23, ರಾಯುಡು 32, ಸುರೇಶ್ ರೈನಾ 17*, ಧೋನಿ 11*, ಹರ್ಷಲ್ ಪಟೇಲ್ 25ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts