More

    ಸತತ 6ನೇ ಬಾರಿ ರೆಪೋ ದರ ಏರಿಸಿದ RBI: ಬ್ಯಾಂಕ್​ ಸಾಲಗಾರರಿಗೆ ಇಎಂಐ ಮತ್ತಷ್ಟು ದುಬಾರಿ

    ನವದೆಹಲಿ: ಸತತ ಆರನೇ ಬಾರಿಗೆ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ತನ್ನ ರೆಪೋ ದರವನ್ನು ಏರಿಕೆ ಮಾಡಿದೆ. ಬುಧವಾರ ( ಫೆ.08) 25 ಮೂಲ ಅಂಶಗಳ ಏರಿಕೆಯೊಂದಿಗೆ ಶೇ. 6.5ಕ್ಕೆ ರೆಪೋ ದರವನ್ನು ಆರ್​ಬಿಐ ಹೆಚ್ಚಳ ಮಾಡಿದೆ.

    ರೆಪೋ ದರ ಏರಿಕೆಯಿಂದ ಗೃಹ, ವಾಹನ ಸಾಲಗಳ ಬ್ಯಾಂಕ್​ಗಳ ಇಎಂಐ ಮೊತ್ತ ಮತ್ತಷ್ಟು ದುಬಾರಿಯಾಗಲಿದ್ದು, ಜನ ಸಾಮಾನ್ಯರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಆದರೆ, ನಿಶ್ಚಿತ ಠೇವಣಿ ಇರಿಸುವವರಿಗೆ ರೆಪೋ ದರ ಏರಿಕೆಯಿಂದ ಕೊಂಚ ಪ್ರಯೋಜನವಾಗಲಿದೆ.

    ಆರ್​ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ)ಯ ಮೂರು ದಿನಗಳ ಸಭೆಯ ಬಳಿಕ ರೆಪೋ ದರ ಏರಿಕೆ ನಿರ್ಧಾರವನ್ನು ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್ ಬುಧವಾರ ಪ್ರಕಟಿಸಿದ್ದಾರೆ. ಆರು ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ ನಾಲ್ವರು ಸದಸ್ಯರು ರೆಪೋ ದರ ಏರಿಕೆ ಪರವಾಗಿ ಮತ ಚಲಾಯಿಸಿದರು ಎಂದು ಶಕ್ತಿಕಾಂತ್​ ದಾಸ್​ ಮಾಹಿತಿ ನೀಡಿದರು.

    ಸ್ಥೂಲ ಆರ್ಥಿಕ ಪರಿಸ್ಥಿತಿ ಮತ್ತು ಅದರ ದೃಷ್ಟಿಕೋನದ ಮೌಲ್ಯಮಾಪನವನ್ನು ಆಧರಿಸಿ, ಹಣದುಬ್ಬರ ಕಡಿಮೆ ಮಾಡುವ ಉದ್ದೇಶದಿಂದ ಹಣಕಾಸು ನೀತಿ ಸಮಿತಿಯು ರೆಪೋ ದರವನ್ನು 25 ಮೂಲ ಅಂಶಗಳೊಂದಿಗೆ ಶೇ. 6.5 ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಶಕ್ತಿಕಾಂತ್​ ದಾಸ್​ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕಳೆದ ವರ್ಷದ ಮೇ ತಿಂಗಳಿಂದ ಈವರೆಗೂ ಒಟ್ಟು 250 ಮೂಲ ಅಂಶವನ್ನು ಆರ್​ಬಿಐ ಏರಿಕೆ ಮಾಡಿದೆ. ಪ್ರಸಕ್ತ ಹಣಕಾಸು ವರ್ಷ 2022-2023ಕ್ಕೆ ಹಣದುಬ್ಬರವನ್ನು ಶೇ. 6.5 ಎಂದು ಅಂದಾಜಿಸಲಾಗಿದ್ದು, 2023-24ನೇ ಹಣಕಾಸು ವರ್ಷಕ್ಕೆ ಶೇ. 5.3 ಎಂದು ಊಹಿಸಿರುವ ಆರ್​ಬಿಐ, ಹಣದುಬ್ಬರ ಇಳಿತದ ನಿರೀಕ್ಷೆಯನ್ನು ಹೊಂದಿದೆ. ಅಲ್ಲದೆ, 2023-24ನೇ ಸಾಲಿಗೆ ಜಿಡಿಪಿ ಶೇ. 6.4 ಎಂದು ಅಂದಾಜಿಸಿದೆ. (ಏಜೆನ್ಸೀಸ್​)

    ಅಂಬೇಡ್ಕರ್​ ಪುತ್ತಳಿಗೆ ಬಸ್​ನಿಂದಲೇ ಹಾರ ಎಸೆದ ಡಿಕೆಶಿ!

    ಚುನಾವಣೆ ಪ್ರಚಾರಕ್ಕೆ ಬಂದ ಶಾಸಕರ ಚಳಿ ಬಿಡಿಸಿದ ಗ್ರಾಮಸ್ಥರು!

    17 ಗಂಟೆಗಳ ಕಾಲ ಪುಟ್ಟ ತಮ್ಮನನ್ನು ಕಟ್ಟಡಗಳ ಅವಶೇಷದ ಕೆಳಗೆ ಕಾಪಾಡಿದ ಏಳು ವರ್ಷದ ಬಾಲಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts