More

    ನಿಷೇಧವಾಗುತ್ತಾ 2 ಸಾವಿರ ರೂ. ಮುಖಬೆಲೆ ನೋಟು? ಪ್ರಿಂಟ್​ ಏಕೆ ಮಾಡ್ತಾಯಿಲ್ಲ ಗೊತ್ತಾ?

    ನವದೆಹಲಿ: ದೇಶದ ವಿವಿಧೆಡೆ ಇರುವ ಭಾರತೀಯ ನೋಟು ಮುದ್ರಣಾಲಯಗಳಲ್ಲಿ 2019-20ರ ಅವಧಿಯಲ್ಲಿ 2000 ಮುಖಬೆಲೆಯ ಒಂದು ನೋಟೂ ಕೂಡ ಮುದ್ರಣವಾಗಿಲ್ಲ….! ಅಚ್ಚರಿಯಾದರೂ ಕೂಡ ಇದು ಸತ್ಯ.

    ರಿಸರ್ವ್​ ಬ್ಯಾಂಕ್​ ಆಂಡಿಯಾ (ಆರ್​ಬಿಐ) ಆಗಸ್ಟ್​ 25ರಂದು ಬಿಡುಗಡೆಮಾಡಿರುವ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ. ಸಾಮಾನ್ಯವಾಗಿ ದೇಶದಲ್ಲಿ ಚಾಲ್ತಿಯಲ್ಲಿರುವ ವಿವಿಧ ಮುಖಬೆಲೆಯ ನೋಟುಗಳ ಪ್ರಮಾಣವನ್ನು ಆಧರಿಸಿ ಹೊಸ ನೋಟುಗಳನ್ನು ಮುದ್ರಿಸಲಾಗುತ್ತದೆ. ಆರ್​ಬಿಐ ಜತೆಗಿನ ಸಮಾಲೋಚನೆಯೊಂದಿಗೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಳ್ಳುತ್ತದೆ.

    2016ರ ನವೆಂಬರ್​ 8ರಂದು ಹಳೆಯ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ಬಳಿಕ 2000 ನೋಟುಗಳನ್ನು ಜಾರಿಗೆ ತರಲಾಗಿತ್ತು. 500 ಹಾಗೂ 1000 ಮುಖಬೆಲೆಯ ನೋಟುಗಳು ಒಟ್ಟಾರೆ ಚಲಾವಣೆಯಲ್ಲಿದ್ದ ನೋಟುಗಳ ಪೈಕಿ ಶೇ.86 ಆಗಿತ್ತು.

    ಇದನ್ನೂ ಓದಿ; ಮಾವನ ಜತೆ ಸೇರಿ ಡಕಾಯಿತಿ ಮಾಡಿದ ಸಬ್​ ಇನ್​ಸ್ಪೆಕ್ಟರ್; 26.50 ಲಕ್ಷ ರೂ. ದರೋಡೆ ಮಾಡಿದ್ದವರ ಸೆರೆ 

    ಹೊಸದಾಗಿ 2,000 ರೂ. ಮುಖಬೆಲೆಯ ನೋಟು ಮುದ್ರಣ ಮಾಡದೇ ಇರಲು ಕಾರಣ ಹೊಸದಾಗಿ ಯಾರೂ ಬೇಡಿಕೆಯನ್ನೇ ಸಲ್ಲಿಸಿಲ್ಲ ಎಂದು ನೋಟು ಮುದ್ರಣಾಲಯಗಳು ತಿಳಿಸಿವೆ. ಸದ್ಯ ಚಾಲ್ತಿಯಲ್ಲಿರುವ ನೋಟುಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಉದ್ದೇಶದ ಕಾರಣದಿಂದಾಗಿ ಸರ್ಕಾರ ಹೊಸ ನೋಟುಗಳನ್ನು ಮುದ್ರಿಸುತ್ತಿಲ್ಲ ಎಂದು ಹೇಳಲಾಗಿದೆ

    206-17ರಲ್ಲಿ ಒಟ್ಟಾರೆ ನೋಟುಗಳಲ್ಲಿ 2,000 ರೂ. ನೋಟುಗಳ ಪಾಲು ಶೇ.50.2 ಆಗಿತ್ತು. ನಂತರ 2017-18 ರಲ್ಲಿ ಇದು 37.3 ಕ್ಕೆ ಇಳಿಯಿತು. 2018-19ರಲ್ಲಿ 31.2ಕ್ಕೆ ಕುಸಿಯಿತು. ಸದ್ಯ ದೇಶದಲ್ಲಿ ಚಾಲ್ತಿಯಲ್ಲಿರುವ 2,000 ರೂ. ಮುಖಬೆಲೆಯ ನೋಟುಗಳ ಪ್ರಮಾಣ ಶೇ.22.6 ಆಗಿದೆ. ಇನ್ನು 500 ರೂ. ಮುಖಬೆಲೆಯ ನೋಟುಗಳೇ ಹೆಚ್ಚಾಗಿದ್ದು, ಒಟ್ಟು ನೋಟುಗಳಲ್ಲಿ ಇವುಗಳ ಪ್ರಮಾಣ ಶೇ.60.8 ಆಗಿದೆ.

    ಇದನ್ನೂ ಓದಿ; ಮೆಟ್ರೋ ರೈಲು ಶುರುವಾಗುತ್ತೆ, ಶಾಲಾ- ಕಾಲೇಜುಗಳು ಮುಚ್ಚಿರುತ್ತೆ; ಅನ್​ಲಾಕ್​ 4.0 ಹೀಗಿರುತ್ತೆ…! 

    2,000 ರೂ. ನೋಟುಗಳ ಪ್ರಮಾಣ ಕಡಿಮೆಯಾಗಲು ಇನ್ನೊಂದು ಮುಖ್ಯ ಕಾರಣವೆಂದರೆ, ಅಪಾರ ಪ್ರಮಾಣದ ನೋಟುಗಳನ್ನು ಹಾಳಾದ ನೋಟುಗಳೆಂದು ವಿಂಗಡಿಸಿ ಬಳಕೆಗೆ ಅನರ್ಹಗೊಳಿಸಿದೆ. ಇನ್ನು ಕೆಲ ವರ್ಷಗಳಲ್ಲಿ ನೋಟು ಮುದ್ರಣವಾಗದಿದ್ದರೆ, 2,000 ರೂ. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿಯೇ ಇಲ್ಲವಾಗಬಹುದು. ಅಲ್ಲಿಗೆ ಅಧಿಕೃತವಾಗಿ ನಿಷೇಧವಾಗದಿದ್ದರೂ ಇವುಗಳು ಚಾಲ್ತಿಯನ್ನೇ ಕಳೆದುಕೊಳ್ಳಲಿವೆ ಎಂಬುದಂತೂ ನಿಜ.

    ಶಾಲಾ- ಕಾಲೇಜು ಮತ್ತೆ ಬಂದ್​; ಫ್ಯಾನ್​ ಬಳಕೆಗೂ ನಿರ್ಬಂಧ ವಿಧಿಸಿದೆ ಈ ದೇಶ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts