More

    ರೆಪೋ ದರವನ್ನು 40 ಮೂಲಾಂಶ ಕಡಿತಗೊಳಿಸಿದ ಆರ್​ಬಿಐ, ಗ್ರಾಹಕರಿಗೆ ಏನೆಲ್ಲ ಲಾಭ?

    ನವದೆಹಲಿ: ಕರೊನಾ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿರುವ ದೇಶದಲ್ಲಿ ಆರ್ಥಿಕತೆಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ರೆಪೋ ದರವನ್ನು 40 ಮೂಲಾಂಶದಷ್ಟು ಕಡಿತಗೊಳಿಸಿದೆ. ರಿವರ್ಸ್​ ರೆಪೋ ದರವನ್ನು ಕೂಡ ಶೇ.3.35ಕ್ಕೆ ಇಳಿಕೆ ಮಾಡಿದೆ.

    ಆರ್​ಬಿಐ ಗವರ್ನರ್​ ಶಕ್ತಿಕಾಂತಾ ದಾಸ್​ ಶುಕ್ರವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ಈ ವಿಷಯವನ್ನು ತಿಳಿಸಿದರು. ಕೋವಿಡ್​-19 ಲಾಕ್​ಡೌನ್​ ನಂತರದಲ್ಲಿ ಭಾರತದಲ್ಲಿ ಮಾತ್ರವೇ ಆಲ್ಲ, ವಿಶ್ವದಾದ್ಯಂತ ಆರ್ಥಿಕ ಹಿಂಜರಿತ ಉಂಟಾಗುತ್ತಿದೆ ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ರೆಪೋ ದರಗಳನ್ನು ಇಳಿಸಿರುವುದಾಗಿ ಹೇಳಿದರು.

    ಕರೊನಾದಿಂದಾಗಿ ಕೈಗಾರಿಕೆ ಉತ್ಪಾದನೆ ಶೇ. 17 ರಷ್ಟು ಕುಸಿದಿದೆ. ಆಹಾರ ಉತ್ಪಾದನೆ 3.7 ರಷ್ಟು ಏರಿಕೆಯಾಗಿದೆ. ಸಿಮೆಂಟ್​ ಉತ್ಪಾದನೆಯಲ್ಲಿ 19 ರಷ್ಟು ಕುಸಿದಿದೆ. ಕುಸಿದಿರುವ ಜಿಡಿಪಿ 2021ರ ಬಳಿಕ ಚೇತರಿಕೆಯಾಗುವ ವಿಶ್ವಾಸವಿದೆ ಎಂದು ಶಕ್ತಿಕಾಂತ್ ದಾಸ್​ ತಿಳಿಸಿದರು.

    ಕರೊನಾಕ್ಕೆ ರುಬೊಲಾ ಚುಚ್ಚುಮದ್ದು, ಮನೆಯವರ ಮೇಲೆ ಪ್ರಯೋಗಿಸಿದ ವೈದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts