More

    ರೈತರ ಸೌಲಭ್ಯ ಅನ್ಯರ ಪಾಲು: ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ವಾಗ್ದಾಳಿ

    ಮಂಡ್ಯ: ರೈತರಿಗೆ ಸಿಗಬೇಕಿರುವ ಬಹುತೇಕ ಸೌಲಭ್ಯಗಳು ಅನ್ಯರ ಪಾಲಾಗುತ್ತಿವೆ ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಬೇಸರ ವ್ಯಕ್ತಪಡಿಸಿದರು.
    ತಾಲೂಕಿನ ಹಂಪಾಪುರ ಗ್ರಾಮದಲ್ಲಿ ಭಾನುವಾರ ರೈತ ಸಂದ ಗ್ರಾಮ ಘಟಕ ಉದ್ಘಾಟಿಸಿ ವಾತನಾಡಿದರು. ರೈತರ ಪಾಲಿಗೆ ವರವಾಗಬೇಕಾದ ಸರ್ಕಾರಿ ಯೋಜನೆಗಳು ಗುತ್ತಿಗೆದಾರರು, ಮಧ್ಯಮವರ್ತಿಗಳು ಹಾಗೂ ಇವರಿಗೆ ಬೆನ್ನೆಲುಬಾಗಿ ನಿಂತಿರುವ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಪಾಲಾಗುತ್ತಿರುವುದು ವಿಪರ್ಯಾಸ ಎಂದರು.
    ದೇಶಕ್ಕೆ ಅನ್ನ ನೀಡುವ ರೈತರ ಸ್ಥಿತಿ ಆತಂಕದಲ್ಲಿದೆ. ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರ ಸ್ವಲ್ಪವೂ ಗಮನಹರಿಸುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಕೃಷಿ ಮಾಡುವುದು ದುಬಾರಿಯಾಗುತ್ತಿದೆ. ಪ್ರತಿ ವಸ್ತುವಿನ ಬೆಲೆಯೂ ಗಗನಕ್ಕೇರುತ್ತಿದೆ. ಆದರೆ ಬೆಳೆಗಳ ಬೆಲೆ ಮಾತ್ರ ಏರಿಕೆಯಾಗುತ್ತಿಲ್ಲ. ಒಂದು ವೇಳೆ ಈ ಬಗ್ಗೆ ಪ್ರಶ್ನಿಸಿದರೆ ಸರ್ಕಾರ ಬಂಧಿಸುವ ಅಥವಾ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹೀಗಾದರೆ ರೈತರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದರೆ ಎಲ್ಲ ಸರ್ಕಾರಗಳು ಸಮುದಾಯವನ್ನು ವ್ಯವಸ್ಥೆಗೆ ಹೋಗಿಸಿ ನಂತರ ಹೇಗೆ ಬಗ್ಗಿ ಬಡಿಯಬಹುದು ಎಂಬುದನ್ನು ಕರಗತ ವಾಡಿಕೊಂಡಿವೆ. ಇದಕ್ಕೆ ಉತ್ತಮ ನಿರ್ದರ್ಶನವೆಂದರೆ, ಮೊದಲೆರಡು ತಿಂಗಳ ಗ್ಯಾಸ್ ಉಚಿತವಾಗಿ ನೀಡಿ ಈಗ ತಿಂಗಳಿಗೆ 1,000 ರೂ.ಗೂ ಹೆಚ್ಚು ಹಣವನ್ನು ವಸೂಲಿ ವಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸರ್ಕಾರದ ಮಟ್ಟದಲ್ಲಿ ಯಾವುದೇ ನೇಮಕಾತಿಗಳು ಪಾರದರ್ಶಕತೆಯಿಂದ ನಡೆಯುತ್ತಿಲ್ಲ. ನೇಮಕಾತಿ ಮಾಡಿಕೊಳ್ಳುವ ಹೆಸರಿನಲ್ಲಿ ಕೋಟ್ಯಂತರ ರೂ. ದೋಚುತ್ತಿದ್ದಾರೆ. ಆದರೆ ನಮ್ಮ ಬೆಳೆ ಅಥವಾ ಹಾಲಿಗೆ ಸರಿಯಾದ ಬೆಲೆ ಕೊಡಿ ಎಂದರೆ ನಾಟಕವಾಡುತ್ತಾರೆ. ಆದ್ದರಿಂದ ಇಂತಹ ಭ್ರಷ್ಟತನವನ್ನು ಪ್ರಶ್ನಿಸುವ ದನಿಗಳು ಸಾವಿರಾರು ಸಂಖ್ಯೆಯಲ್ಲಿ ಹೆಚ್ಚಾಗಬೇಕಿದೆ. ಏಕತೆಯಿಂದ ಇಂತಹ ಅವ್ಯವಸ್ಥೆಯ ವಿರುದ್ಧ ಹೋರಾಡಲು ಚಳವಳಿಗಳು ಬಲವರ್ಧನೆ ಆಗುವ ಅವಶ್ಯಕತೆ ಬಹು ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
    ಯುವ ರೈತ ಮುಖಂಡ ಪ್ರಸನ್ನ ಎನ್.ಗೌಡ, ರೈತ ಸಂದ ರಾಜ್ಯ ಖಜಾಂಚಿ ತಗ್ಗಳ್ಳಿ ಪ್ರಸನ್ನ, ಮಂಡ್ಯ ತಾಲೂಕು ಅಧ್ಯಕ್ಷ ಶಿವಳ್ಳಿ ಚಂದ್ರು, ಮರಿಚನ್ನೇಗೌಡ, ಶೆಟ್ಟಳ್ಳಿ ರವಿಕುವಾರ್, ಚನ್ನೇಶ್, ಲಿಂಗಪ್ಪಾಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts