More

    ರಾಯಣ್ಣನ ದೇಶಪ್ರೇಮ ಯುವ ಪೀಳಿಗೆ ಸ್ಮರಿಸಲಿ

    ಕನಕಗಿರಿ: ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಹೋರಾಟದ ಕಿಚ್ಚು, ಸಾಹಸ, ಶೌರ್ಯ, ನಿಸ್ವಾರ್ಥ ದೇಶಪ್ರೇಮ ಇಂದಿನ ಯುವ ಜನಾಂಗವು ಸ್ಮರಿಸಬೇಕಾಗಿದೆ ಎಂದು ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ ಹೇಳಿದರು.

    ಇದನ್ನೂ ಓದಿ: http://ರಾಯಣ್ಣನ ದೇಶಪ್ರೇಮ ಯುವ ಪೀಳಿಗೆ ಸ್ಮರಿಸಲಿ

    ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಹಳೆ ಕಟ್ಟಡದ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣನ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕನ್ನಡ ನಾಡಿನ ಆದಿ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನು ಗಂಡು ಮೆಟ್ಟಿನ ನೆಲದ ಹೋರಾಟಗಾರ. ದೇಶದ ಜನರ ದೇಶಭಕ್ತಿ ಅನಾವರಣಗೊಳ್ಳುವುದು ಆ.15ರ ಸ್ವಾತಂತ್ರೃ ದಿನಾಚರಣೆ ಹಾಗೂ ಜ.26ರ ಗಣರಾಜ್ಯೋತ್ಸವ ದಿನದಂದು.

    ಕಾಕತಾಳಿಯವೆಂಬಂತೆ ಇಲ್ಲವೋ ಸಂಭವಿತವೋ ತಿಳಿಯದು, ಆ.15 ರಾಯಣ್ಣನ ಜನ್ಮದಿನ, ಅತ ಮಡಿದಿದ್ದು, ಜ.26ರಂದು. ಮಣ್ಣಿನ ಋಣ ತೀರಿಸುವುದು ಎಲ್ಲರಿಗೂ ಲಭಿಸದು. ಆತಂಕ ದಿನಗಳಲ್ಲೂ ಧೃತಿಗೆಡದೆ ಧೀರನಾಗಿ ಎದುರಿಸಿ ಅಮರನಾದರು ಎಂದರು.

    ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ ಮಾತನಾಡಿ, ಕನ್ನಡ ನಾಡಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಕ್ರಾಂತಿಯ ಅಸ್ಮಿತೆಯಾಗಿ ರಾಯಣ್ಣ ನೆಲೆಗೊಂಡಿದ್ದಾನೆ. ಕಿತ್ತೂರು ಸಂಸ್ಥಾನವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಪಾರು ಮಾಡಲು ಹಗಲಿರುಳು ಹೋರಾಡಿದ.

    ಗಂಡುಗಲಿ ಸಂಗೊಳ್ಳಿ ರಾಯಣ್ಣ ಬೆಳಗಾವಿ ಜಿಲ್ಲೆಯ ಕಿತ್ತೂರು ಸಮೀಪದ ಸಂಗೊಳ್ಳಿಯಲ್ಲಿ ಬರಮಣ್ಣ ರೋಗಣ್ಣನವರ್ ಮತ್ತು ಕೆಂಚವ್ವ ನವರ ದಂಪತಿಯ ಪುತ್ರನಾಗಿ ಜನಿಸಿದವರು.

    ರಾಯಣ್ಣನ ತಾತ ರೋಗಪ್ಪ ದೇಸಾಯಿ ಒಬ್ಬ ರಣಕಲಿಯಾಗಿದ್ದು, ಈತನ ಹೋರಾಟದ ನೆರಳು ಮೊಮ್ಮಗನ ಮೇಲೆ ಬಿದ್ದಿದ್ದು, ಎಳೆ ವಯಸ್ಸಿನಲ್ಲಿ ಗರಡಿಯಲ್ಲಿ ಪಳಗಿ. ನಂತರ ರಾಣಿ ಚೆನ್ನಮ್ಮಳ ಸೈನ್ಯದಲ್ಲಿ ಹೋರಾಡುತ್ತಾ ಯುದ್ಧ ಕಲೆಯನ್ನು ಕಲಿತನು.

    ಕಿತ್ತೂರು ಸಂಸ್ಥಾನದ ರಕ್ಷಕನಾಗಿ ಚೆನ್ನಮ್ಮಳ ಬಲಗೈ ಬಂಟನಾಗಿ ಅನುರೂಪವಾದ ಸೇವೆಗೈದವನು. ರಾಣಿಯ ಬಂಧನವಾದ ಸಮಯದಲ್ಲಿ ತಾನು ಸೆರೆವಾಸದಿಂದ ಹೊರಬಂದು ಸೈನ್ಯ ಸಂಘಟಿಸಿ ತುಳರ ಅಟ್ಟಹಾಸ ಅಡಗಿಸಿ ಬ್ರಿಟಿಷರ ನಿದ್ದೆಗೆಡಸಿದ್ದ.

    ರಾಯಣ್ಣ ತಾನು ಕೊಟ್ಟ ಮಾತಿನಂತೆ ಕಿತ್ತೂರಿಗಾಗಿ ಕೊನೆಯ ಉಸಿರು ಇರೋವರೆಗೂ ಹೋರಾಟ ಮಾಡಿದ್ದು, ನಗುನಗುತ್ತಲೇ ನೇಣಿನ ಕುಣಿಕಿಗೆ ಒಡ್ಡಿದ ವೀರನಾಗಿದ್ದಾನೆ. ಪ್ರಮುಖರಾದ ಸಣ್ಣ ಕನಕಪ್ಪ, ನಾಗರಾಜ ಕನಕಗಿರಿ, ಶಿವು ಕುಮಾರ ಚೌಡ್ಕಿ, ಕಲ್‌ಮಸ್ತೆಪ್ಪ. ಕಿರಣ ಕುಮಾರ, ನಿಂಗರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts