More

    ರಾಯಬರೇಲಿಯಲ್ಲಿ ರಾಹುಲ್ ಗೆಲುವು ನಿಶ್ಚಿತ, ಡಾ. ಶರಣಪ್ಪ ಹೇಳಿಕೆ

    ಹುಬ್ಬಳ್ಳಿ: ಉತ್ತರ ಪ್ರದೇಶ ರಾಜ್ಯದ ಪ್ರತಿಷ್ಠಿತ ರಾಯಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜಯಭೇರಿ ಬಾರಿಸುವದು ನಿಶ್ಚಿತ ಎಂದು ಹಿರಿಯ ಕಾಂಗ್ರೆಸ್ ಧುರೀಣ ಡಾ. ಶರಣಪ್ಪ ಕೊಟಗಿ ಹೇಳಿದರು.

    ಕರ್ನಾಟಕದಿಂದ ರಾಯಬರೇಲಿಗೆ ತೆರಳಿದ ನಿಯೋಗದ ನೇತೃತ್ವ ವಹಿಸಿದ್ದ ಅವರು, 4 ದಿನಗಳವರೆಗೆ ರಾಯಬರೇಲಿಯ ನಗರ, ಪಟ್ಟಣಗಳು, ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಪ್ರಚಾರ ಮಾಡಿದ ಅವರು ಈ ವಿಶ್ವಾಸ ವ್ಯಕ್ತಪಡಿಸಿದ್ದಾರೆ

    ಮತದಾರರಿಂದ ರಾಹುಲ್ ಪರ ಒಲವು ಇದೆ. ಈ ಕ್ಷೇತ್ರದಿಂದ ಹಿಂದೆ ಸ್ಪರ್ಧಿಸಿ ಗೆದ್ದಿರುವ ರಾಹುಲ್ ಅವರ ತಾಯಿ ಸೋನಿಯಾ ಗಾಂಧಿ ಅವರನ್ನು ಮತದಾರರು ಈಗಲೂ ಸ್ಮರಿಸುತ್ತಾರೆ. ಈ ಹಿನ್ನೆಲೆಯಲ್ಲಿ ರಾಹುಲ್‍ರವರ ಗೆಲುವು ಶತಃಸಿದ್ದ ಎಂದರು.

    ರಾಯಬರೇಲಿಗೆ ತೆರಳಿದ್ದ ನಿಯೋಗದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾಜಿ ಸೈನಿಕರ ಘಟಕದ ಅಧ್ಯಕ್ಷ ಕರ್ನಲ್ ರೋಹಿತ್ ಚೌದರಿ, ಕೆಪಿಸಿಸಿ ಮಾಜಿ ಸೈನಿಕರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಟಿ, ಕೆಪಿಸಿಸಿ ಮಾಜಿ ಸೈನಿಕರ ಘಟಕದ ಉಪಾಧ್ಯಕ್ಷ ಎಂ.ಎಚ್. ಚಳ್ಳಮರದ ಶೇಖ್, ಮಾಜಿ ಸೈನಿಕರ ಘಟಕದ ಪದಾಧಿಕಾರಿಗಳಾದ ದಿನೇಶ ರಾವ್, ಕರ್ನಲ್ ಸುಧೀರ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts