More

    ಮಾಸ್ಕ್​ ಧರಿಸದಿರುವುದನ್ನು ಪ್ರಶ್ನಿಸಿದ್ದಕ್ಕೆ ಮಹಿಳಾ ಪೊಲೀಸ್​ ಜತೆ ಕ್ರಿಕೆಟಿಗ ರವೀಂದ್ರ ಜಡೇಜಾ ವಾಗ್ವಾದ!

    ರಾಜ್​ಕೋಟ್​: ಟೀಮ್​ ಇಂಡಿಯಾ ಆಲ್ರೌಂಡರ್​ ರವೀಂದ್ರ ಜಡೇಜಾ ಮಾಸ್ಕ್​ ಧರಿಸದೆ ಓಡಾಡುತ್ತಿದ್ದ ಬಗ್ಗೆ ಮಹಿಳಾ ಪೊಲೀಸರೊಬ್ಬರು ಪ್ರಶ್ನಿಸಿದ ಸಂದರ್ಭ ಅನುಚಿತ ವರ್ತನೆ ತೋರಿ ವಿವಾದಕ್ಕೀಡಾಗಿದ್ದಾರೆ. ಮಹಿಳಾ ಪೊಲೀಸ್​ ಜತೆಗೆ ಜಡೇಜಾ ಮತ್ತು ಅವರ ಪತ್ನಿ ರಿವಾಬಾ ವಾಗ್ವಾದ ನಡೆಸಿದ್ದಾರೆ ಎಂದು ದೂರಲಾಗಿದೆ.

    ಮಹಿಳಾ ಪೊಲೀಸ್​ ಠಾಣೆಯ ಹೆಡ್​ ಕಾನ್​ಸ್ಟೇಬಲ್​ ಸೋನಲ್​ ಗೋಸೈ ಎಂಬವರು ಕಿಸಾನ್​ಪರ ಚೌಕ್​ನಲ್ಲಿ ಸೋಮವಾರ ರಾತ್ರಿ 9 ಗಂಟೆಯ ವೇಳೆಗೆ ರವೀಂದ್ರ ಜಡೇಜಾ ಅವರ ಕಾರನ್ನು ತಡೆದಿದ್ದರು. ಕಾರಿನಲ್ಲಿ ಜಡೇಜಾ ಮತ್ತು ಅವರ ಪತ್ನಿ ರಿವಾಬಾ ಇದ್ದರು. ಈ ವೇಳೆ ಅವರಿಬ್ಬರು ಮಾಸ್ಕ್​ ಧರಿಸಿರಲಿಲ್ಲ. ಹೀಗಾಗಿ ದಂಡ ಕಟ್ಟುವಂತೆ ಪೊಲೀಸರು ಸೂಚಿಸಿದ್ದರು. ಈ ವೇಳೆ ಜಡೇಜಾ ಅನುಚಿತ ವರ್ತನೆ ತೋರಿದ್ದಾರೆ ಎನ್ನಲಾಗಿದೆ. ಘಟನೆಯ ಬಳಿಕ ಸೋನಲ್​ ಗೋಸೈ ಮತ್ತು ಜಡೇಜಾ ಪತ್ನಿ ರಿವಾಬಾ ಅವರು ಬಳಿಕ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಪತಂಜಲಿ ಐಪಿಎಲ್​! ಟ್ವಿಟರ್​ನಲ್ಲಿ ಭರ್ಜರಿ ಟ್ರೆಂಡಿಂಗ್​, ಟ್ರೋಲ್​!

    ಜಡೇಜಾ ಮತ್ತು ಮಹಿಳಾ ಪೊಲೀಸ್​ ಇಬ್ಬರೂ ಅನುಚಿತ ವರ್ತನೆಯ ಬಗ್ಗೆ ಪರಸ್ಪರ ಆರೋಪಿಸಿದ್ದಾರೆ ಎಂದು ಡಿಎಸ್​ಪಿ ಮನೋಹರ್​ಸಿನ್ಹಾ ಜಡೇಜಾ ತಿಳಿಸಿದ್ದಾರೆ. ಆದರೆ ಇದುವರೆಗೆ ಇಬ್ಬರಿಂದಲೂ ಅಧಿಕೃತವಾಗಿ ದೂರು ದಾಖಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಜತೆಗೆ ತಮಗೆ ಬಂದ ಮಾಹಿತಿಯ ಪ್ರಕಾರ ಘಟನೆಯ ವೇಳೆ ರವೀಂದ್ರ ಜಡೇಜಾ ಅವರು ಮಾಸ್ಕ್​ ಧರಿಸಿರಲಿಲ್ಲ. ಆದರೆ ಅವರ ಪತ್ನಿ ಮಾಸ್ಕ್​ ಧರಿಸಿದ್ದರೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಜಡೇಜಾ ಪತ್ನಿ ರಿವಾಬಾ ವರ್ಷದ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಜಡೇಜಾ ಅವರು ಮುಂಬರುವ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ಪರ ಆಡಲಿದ್ದಾರೆ.

    ಕ್ರೀಡಾತಾರೆಯರಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts