More

    ಹೆದರುವ ಅವಶ್ಯಕತೆ ಇಲ್ಲ ಎಂದು ಆಶಿಕಾಗೆ ಧೈರ್ಯ ತುಂಬಿದ ರವಿಚಂದ್ರನ್​

    ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಆಶಿಕಾ ರಂಗನಾಥ್​ ಕುರಿತು ಇತ್ತೀಚೆಗೆ ಸೋಷಿಯಲ್​ ಮೀಡಿಯಾದಲ್ಲಿ ಒಂದು ವಿಡಿಯೋ ಹರಿದಾಡಿತ್ತು. ಆಶಿಕಾ ಕುಡಿದು ತೂರಾಡುತ್ತಿರುವ ದೃಶ್ಯವಿರುವ ಈ ವಿಡಿಯೋ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು ನಿಜವೇನೆಂದರೆ, ಇದು ‘ರೆಮೋ’ ಚಿತ್ರದ ಒಂದು ದೃಶ್ಯ. ಇದು ಗೊತ್ತಿರದವರು ಆಶಿಕಾ ಬಗ್ಗೆ ಟ್ರೋಲ್​ ಮಾಡಿದ್ದರು. ಈ ಬಗ್ಗೆ ಆಶಿಕಾ ಬೇಸರಿಸಿಕೊಂಡಿದ್ದೂ ಆಗಿತ್ತು.

    ಇದನ್ನೂ ಓದಿ: ‘ಆರಾಮ್​ ಅರವಿಂದಸ್ವಾಮಿ’ ಆದ ಅನೀಶ್​; ಹೊಸ ಲುಕ್​ ಬಿಡುಗಡೆ

    ಈಗ ಆಶಿಕಾ ಪರವಾಗಿ ರವಿಚಂದ್ರನ್​ ಬ್ಯಾಟಿಂಗ್​ ಮಾಡಿದ್ದಾರೆ. ಆಕೆ ಆ ರೀತಿ ಅಲ್ಲ ಎಂದು ಹೇಳಿದ್ದಾರೆ. ಭಾನುವಾರ ರಾತ್ರಿ ನಡೆದ ‘ರೆಮೋ’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಆಶಿಕಾ ನೀವು ಈ ಚಿತ್ರದಲ್ಲಿ ಬಹಳ ಚೆನ್ನಾಗಿ ಕಾಣುತ್ತೀರಾ. ಇತ್ತೀಚೆಗೆ ಬಿಡುಗಡೆಯಾದ ವಿಡಿಯೋ ನೋಡಿ ನಿಮಗೆ ಬೇಸರವಾಯಿತು ಎಂದು ಕೇಳಿದೆ. ನನ್ನ ಹೆಂಡತಿ ಸಹ ನಿಮ್ಮ ವೀಡಿಯೋ ಬಗ್ಗೆ ಹೇಳಿದರು. ಆದರೆ, ನೀವು ಆ ತರಹ ಅಲ್ಲ ಎಂದು ಹೇಳಿದೆ. ನನಗೆ ಗೊತ್ತು. ನಿಮಗೂ ಗೊತ್ತು. ಹಾಗಾಗಿ, ಹೆದರುವ ಅವಶ್ಯಕತೆ ಇಲ್ಲ. ಅದು ಸಿನಿಮಾದ ಒಂದು ಭಾಗ. ಬಹಳ ಬೋಲ್ಡ್​ ಆಗಿ ಕಾಣುತ್ತೀರಾ. ನೀವು ಬೋಲ್ಡ್​ ಆಂಡ್​ ಬ್ಯೂಟಿಫುಲ್​’ ಎಂದು ರವಿಚಂದ್ರನ್​ ಹೇಳೀದರು.

    ಇದನ್ನೂ ಓದಿ: ಚಾಲೆಂಜ್​ಗಾಗಿ ಈ ಪಾತ್ರ ಒಪ್ಪಿಕೊಂಡೆ; ಅನಂತ್​ ನಾಗ್​ ಹೀಗೆ ಹೇಳಿದ್ದು ಯಾವ ಚಿತ್ರದ ಬಗ್ಗೆ ಗೊತ್ತಾ?

    ಇನ್ನು, ನಾಯಕ ಇಶಾನ್​ ಬಗ್ಗೆ ಮಾತನಾಡಿದ ಅವರು, ‘ಇಶಾನ್​ ಬಹಳ ಶ್ರೀಮಂತ ಎಂದು ಯಾರೋ ಹೇಳಿದರು. ಸ್ಟೈಲ್​, ಸ್ಮೈಲ್​, ಚೆಲುವು ಎಲ್ಲದರಲ್ಲೂ ಅವರು ಬಹಳ ರಿಚ್​ ಆಗಿದ್ದಾರೆ. ಅವರು ಕ್ರೇಜಿ ಸ್ಟಾರ್ ಅಲ್ಲ, ಅದಕ್ಕೂ ಮಿಗಿಲು. ಮೊದಲ ಸಿನಿಮಾ ಮಾಡುವಾಗ ನಾವು ಅವನಷ್ಟು ವಿಶ್ವಾಸದಿಂದ ಇರಲಿಲ್ಲ. ಹೇಗೋ ಇದ್ವಿ. ಕ್ರಮೇಣ ಸರಿ ಮಾಡಿಕೊಂಡು ಬಂದೆವು. ನೀವು ಎರಡನೇ ಸಿನಿಮಾಗೆ ಬಹಳ ಕ್ಲಿಯರ್​ ಆಗಿದ್ದೀರಾ. ತುಂಬಾ ಚೆನ್ನಾಗಿ ಕಾಣಿಸ್ತೀರಾ. ನಿಮಗೆ ಖಂಡಿತಾ ಇಲ್ಲೊಂದು ಸ್ಥಾನವಿದೆ. ಎಷ್ಟು ದೂರ ಹೋಗುತ್ತೀರಾ ಎನ್ನುವುದು ನಿಮ್ಮ ಮೇಲೆ ಬಿಟ್ಟಿದೆ. ಕೆಲಸ ಮಾಡುತ್ತಿರಿ. ಕೆಲಸ ಅಷ್ಟೇ ನಮ್ಮಿಂದ ಸಾಧ್ಯ. ಇನ್ನೆಲ್ಲವೂ ಆ ವಿಧಿಯ ಆಟ. ಪ್ರಾಮಾಣಿಕವಾಗಿ ಮಾಡಿದರೆ, ಎಲ್ಲವೂ ಸಿಗುತ್ತದೆ’ ಎಂದು ರವಿಚಂದ್ರನ್​ ಹೇಳಿದರು.

    ‘ಕೆಜಿಎಫ್​’ ಎನ್ನುವುದು ಕಾನ್ಫಿಡೆನ್ಸ್​; ‘ಕಾಂತಾರ’ ಎನ್ನುವುದು ಎಮೋಷನ್​ … ರವಿಚಂದ್ರನ್​ ವ್ಯಾಖ್ಯಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts