More

    ಚಾಲೆಂಜ್​ಗಾಗಿ ಈ ಪಾತ್ರ ಒಪ್ಪಿಕೊಂಡೆ; ಅನಂತ್​ ನಾಗ್​ ಹೀಗೆ ಹೇಳಿದ್ದು ಯಾವ ಚಿತ್ರದ ಬಗ್ಗೆ ಗೊತ್ತಾ?

    ಬೆಂಗಳೂರು: ಅನಂತ್​ ನಾಗ್​ ಅಭಿನಯದ ಹೊಸ ಚಿತ್ರ ‘ತಿಮ್ಮಯ್ಯ ಅಂಡ್​ ತಿಮ್ಮಯ್ಯ’ ಚಿತ್ರವು ಡಿಸೆಂಬರ್​ 02ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ಬಗ್ಗೆ ಅವರು ಬಹಳ ಎಕ್ಸೈಟ್​ ಆಗಿದ್ದಾರೆ. ಅದಕ್ಕೆ ಕಾರಣ, ಚಿತ್ರದಲ್ಲಿನ ಅವರ ಪಾತ್ರ. ಇದುವರೆಗೂ ಮಾಡದ ಒಂದು ವಿಭಿನ್ನ ಪಾತ್ರವೊಂದರಲ್ಲಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

    ಇದನ್ನೂ ಓದಿ: ರಿಷಭ್​ ಶೆಟ್ರಿಗೆ ಕಮಲ್​ ಹಾಸನ್​ ಪೋನ್​ ಮಾಡಿದ್ರಂತೆ … ಯಾಕೆ ಗೊತ್ತಾ?

    ಈ ಕುರಿತು ಮಾತನಾಡುವ ಅವರು, ‘ನಿರ್ದೇಶಕರು ಈ ಚಿತ್ರದ ಬಗ್ಗೆ ಹೇಳಿದಾಗ ಸ್ಕ್ರಿಪ್ಟ್​ ಕಳಿಸಿಕೊಡಿ ಎಂದೆ. ಮೊದಲ ಬಾರಿಗೆ ಓದಿದಾಗ ಖುಷಿಯಾಯಿತು. ಬಹಳ ಚೆನ್ನಾಗಿ ಬರೆದಿದ್ದರು ನಿರ್ದೇಶಕರು. ಈ ಚಿತ್ರದಲ್ಲಿ ನನ್ನದು ಕೂರ್ಗಿ ಪಾತ್ರ. ಇದೊಂದು ವಿಶಿಷ್ಟ ಮತ್ತು ಕಾಂಪ್ಲೆಕ್ಸ್​ ಆದ ಪಾತ್ರ. ಅವನು ಶ್ರೀಮಂತ. ಸಿಕ್ಕಾಪಟ್ಟೆ ಅಹಂಕಾರಿ. ಇತ್ತೀಚಿನ ವರ್ಷಗಳಲ್ಲಿ ನಾನು ಪಾಸಿಟಿವ್​ ಪಾತ್ರಗಳಲ್ಲಿ ನಟಿಸಿದ್ದೇ ಹೆಚ್ಚು. ಇಲ್ಲಿ ಅಹಂ ಮತ್ತು ಸ್ವಾರ್ಥ ಎರಡೂ ಇದೆ. ಈ ತರಹದ ಪಾತ್ರವನ್ನು ಮಾಡಲೋ, ಬೇಡವೋ ಎಂಬ ಜಿಜ್ನಾಸೆ ಇತ್ತು. ಇದೊಂದು ಸವಾಲು. ಹಾಗಾಗಿ ಒಪ್ಪಿಕೊಂಡೆ. ನೆಗೆಟಿವ್​​ ಶೇಡ್​ ಇರುವ ಪಾತ್ರವನ್ನೂ ಹೇಗೆ ಪಾಸಿಟಿವ್​ ಆಗಿ ತೋರಿಸಬಹುದು ನೋಡೇ ಬಿಡೋಣ ಎಂದು ಈ ಪಾತ್ರ ಒಪ್ಪಿಕೊಂಡೆ’  ಎನ್ನುತ್ತಾರೆ ಅನಂತ್​ ನಾಗ್​.

    ಇದು ಅಜ್ಜ ಮತ್ತು ಮೊಮ್ಮಗನ ನಡುವಿನ ಬಾಂಧವ್ಯದ ಕಥೆ ಎನ್ನುವ ಅವರು, ‘ಅವನಿಗೆ ಲಕ್ಷ್ಮೀ ಮಾತ್ರವಲ್ಲ. ಸರಸ್ವತಿ ಸಹ ಒಲಿದಿರುತ್ತಾಳೆ. ಅವನೊಬ್ಬ ಒಳ್ಳೆಯ ಟ್ರಂಪೆಟ್​ ವಾದಕ. ಒಳ್ಳೆಯ ಸಂಗೀತ ನುಡಿಸುವುದರ ಜತೆಗೆ ಅದೇ ಟ್ರಂಪೆಟ್​ನಿಂದ ಹಿಂಸೆ ಸಹ ಕೊಡುತ್ತಾನೆ. ಮನೆಯಲ್ಲಿ ನುಡಿಸಿ, ಎಲ್ಲರಿಗೂ ಕಿರಿಕಿರಿ ಕೊಡುತ್ತಾನೆ. ಅದಕ್ಕೆ ಕಾರಣ, ಮೊಮ್ಮಗ ಹಿಡತದಲ್ಲಿರಬೇಕು, ವಿಧೇಯನಾಗಿರಬೇಕು ಎಂಬ ಸ್ವಾರ್ಥ. ಈ ಚಿತ್ರದಲ್ಲಿ ಮನರಂಜನೆ ಜತೆಗೆ ಮೌಲ್ಯ ಸಹ ಇದೆ. ಕೊನೆಗೆ ಅವನಿಗೆ ಪಶ್ವಾತ್ತಾಪ ಆಗುತ್ತದೆ. ಎಲ್ಲ ಶೇಡ್​ಗಳಿರುವ ಪಾತ್ರ ಇದು’ ಎನ್ನುತ್ತಾರೆ ಅನಂತ್​ ನಾಗ್​. ಈ ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಅವರು ಟ್ರಂಪೆಟ್​ ನುಡಿಸುವುದನ್ನೂ ಕಲಿತರಂತೆ.

    ಮಾಡುತ್ತಿರುವ ಪಾತ್ರಗಳ ಬಗ್ಗೆ ಸಂತುಷ್ಟಿ ಇದೆ ಎನ್ನುವ ಅನಂತ್ ನಾಗ್​, ನಾನು ಮುಂಬೈನಲ್ಲಿದ್ದರೂ ಮೊದಲು ನಟಿಸಿದ್ದು ಕನ್ನಡದ ಚಿತ್ರದಲ್ಲಿ. ”ಸಂಕಲ್ಪ’ ನಂತರ ‘ಹಂಸಗೀತೆ’, ‘ಕನ್ನೇಶ್ವರ ರಾಮ’, ‘ದೇವರ ಕಣ್ಣು’ ಮುಂತಾದ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳು ಸಿಕ್ಕವು. ಈ ಮಧ್ಯೆ, ಹಿಂದಿ ಚಿತ್ರಗಳಲ್ಲೂ ನಟಿಸುತ್ತಿದ್ದೆ. ಅಲ್ಲಿ ಹೆಚ್ಚಾಗಿ ನೆಗೆಟಿವ್​ ಶೇಡ್​ಗಳಿರುವ ಪಾತ್ರಗಳು ಸಿಗುತ್ತಿತ್ತು. ಅವರು ನನ್ನನ್ನು ವಿಲನ್​ ಮಾಡುತ್ತಾರೇನೋ ಎಂಬ ಭಯ ಕಾಡಿತು. ಹಾಗಾಗಿ ಇಲ್ಲೇ ಉಳಿದೆ. ಜತೆಗೆ ಚಿ. ಉದಯಶಂಕರ್​, ಆರ್.ಎನ್​. ಜಯಗೋಪಾಲ್​, ಕೆ.ವಿ. ಜಯರಾಂ, ದೊರೈ-ಭಗವಾನ್​ ಉಂತಾದವರು ನನಗೆ ಇಲ್ಲೇ ಇರಿ ಎಂದರು. ಎಲ್ಲರ ಜತೆಗೂ 8-10 ಸಿನಿಮಾಗಳನ್ನು ಮಾಡಿದೆ. ಅಲ್ಲಿಗೆ ಇದೇ ನನ್ನ ಕರ್ಮಭೂಮಿ ಎಂದನಿಸಿತು. ಅಷ್ಟರಲ್ಲಿ ನಾನು ಕನ್ನಡದ ನಟನಾಗಿ ಗುರುತಿಸಿಕೊಂಡಿದ್ದೆ. ಸ್ಯಾಂಪಲ್​ಗಾಗಿ ಬೇರೆ ಭಾಷೆಗಳಲ್ಲಿ ಆಗಾಗ ನಟಿಸುತ್ತಿದ್ದೆ. ನನಗೆ ಆ ಬಗ್ಗೆ ಬೇಸರವಿಲ್ಲ. ಸಂತುಷ್ಟಿ ಇದೆ ಎನ್ನುತ್ತಾರೆ ಅನಂತ್​ ನಾಗ್​.

    ಇದನ್ನೂ ಓದಿ: ‘ಆರಾಮ್​ ಅರವಿಂದಸ್ವಾಮಿ’ ಆದ ಅನೀಶ್​; ಹೊಸ ಲುಕ್​ ಬಿಡುಗಡೆ

    ಕನ್ನಡ ಚಿತ್ರರಂಗದಲ್ಲಿ ಎಲ್ಲರಿಗೂ ಬೇಕಾದ ನಟರಾಗಿರುವ ಅನಂತ್ ನಾಗ್​, ಈಗಲೂ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಹೊಸ ನಿರ್ದೇಶಕರ ಚಿತ್ರಗಳಲ್ಲೇ ಹೆಚ್ಚಾಗಿ ನಟಿಸುತ್ತಿದ್ದಾರಂತೆ. ಈ ಬಗ್ಗೆ ಮಾತನಾಡುವ ಅವರು, ‘ಹೊಸಬರ ಜತೆಗೆ ಹೆಚ್ಚಾಗಿ ಕೆಲಸ ಮಾಡುತ್ತಿದ್ದೇನೆ. ಇನ್ನೊಂದಿಷ್ಟು ಹೊಸ ಕಥೆಗಳು ಬರುತ್ತಿವೆ. ಆದರೆ, ವಯಸ್ಸಾಗುತ್ತಿದೆ. ಎಲ್ಲವನ್ನೂ ಒಪ್ಪಿಕೊಳ್ಳುವುದಕ್ಕೆ ಹುಮ್ಮಸ್ಸು ಬರುತ್ತಿಲ್ಲ. ಇಷ್ಟ ಆಗದಿದ್ದರೆ ಮಾಡಬೇಡಿ ಎಂದು ಮನೆಯಲ್ಲೂ ಹೇಳಿದ್ದಾರೆ. ಹಾಗಾಗಿ, ಎಲ್ಲ ಚಿತ್ರಗಳನ್ನು ಮಾಡಲೇಬೇಕು ಅಂತೇನಿಲ್ಲ. ಎರಡ್ಮೂರು ವಿಭಿನ್ನ ಕಥೆಗಳು ಬಂದಿವೆ. ಆದರೆ, ಸದ್ಯಕ್ಕೆ ಒಪ್ಪಿಲ್ಲ’ ಎನ್ನುತ್ತಾರೆ ಅನಂತ್​ ನಾಗ್​.

    ಅಪ್ಪನ ವಯಸ್ಸಿನ ನಟನ ಜತೆಗೆ ಸೋನಾಕ್ಷಿ ಸಿನ್ಹಾ ನಟನೆ? ಆ ಹೀರೋ ಯಾರು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts