More

    ಬಾಲಿವುಡ್ ನಟಿಗೆ ಪ್ರಧಾನಿ ಮೋದಿಯಿಂದ ಭಾವುಕ ಪತ್ರ! ಕಾರಣ?

    ಬಾಲಿವುಡ್ ನಟಿ ರವೀನಾ ಟಂಡನ್‌ ಕೆಜಿಎಫ್ 2′ ಸಿನಿಮಾದ ಮೂಲಕ ಕನ್ನಡಿಗರಿಗೆ ಬಹಳ ಹತ್ತಿರವಾದರು. ಸದ್ಯ, ನಟಿ ರವೀನಾ ಟಂಡನ್‌ರ ತಂದೆ ಫೆಬ್ರವರಿ 11 ರಂದು ನಿಧನರಾಗಿದ್ದು, ಇದು ಅವರಿಗೆ ತುಂಬಾ ನೋವಿನ ಸಮಯ ಎಂದೇ ಹೇಳಬೇಕು. ಇನ್ನು, ಅವರ ತಂದೆಯ ನಿಧನಕ್ಕೆ ನಟಿಗೆ ಚಿತ್ರರಂಗದ ಗಣ್ಯರು, ಆಪ್ತರು ಸಂತಾಪ ಸೂಚಿಸಿದರು. ಆದರೆ, ಇದೀಗ ಗಮನ ಸೆಳೆಯುತ್ತಿರುವ ವಿಷಯವೆಂದರೆ, ಫೆಬ್ರವರಿ 24ಕ್ಕೆ ರವೀನಾ ಟಂಡನ್‌ ಅವರ ತಂದೆ ನಿಧನರಾಗಿ ಹದಿಮೂರು ದಿನಗಳಾದ್ದು, ನಟಿ ಒಂದು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್​ನಲ್ಲಿ ಏನಿದೇ ಅಂತೀರಾ…?
    ಅಂದಹಾಗೆ, ನಟಿ ರವೀನಾ ಟಂಡನ್ ಅವರಿಗೆ ಪ್ರಧಾನಿ ಮೋದಿಯವರು ಒಂದು ಭಾವುಕವಾದ ಪತ್ರವನ್ನು ಬರೆದಿದ್ದು, ಅದನ್ನು ನಟಿ ತಮ್ಮ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಶೇರ್ ಮಾಡಿಕೊಂಡಿದ್ದಾರೆ. ಪತ್ರದಲ್ಲಿ, ”ತಮ್ಮ ಪ್ರತಿಭೆಯಿಂದ ಭಾರತೀಯ ಸಿನಿಮಾವನ್ನು ಎತ್ತರಕ್ಕೆ ಕೊಂಡೊಯ್ದರು. ನಟಿಯ ತಂದೆಗೆ ಚಿತ್ರ ನಿರ್ದೇಶನದ ಬಹಳ ಸೂಕ್ಷ್ಮ ವಿಷಯಗಳು ಗೊತ್ತಿದ್ದವು. ಕೆಲವು ಮರೆಯಲಾಗದ ಚಿತ್ರಗಳನ್ನು ಭಾರತ ಸಿನಿಮಾ ರಂಗಕ್ಕೆ ನಟಿಯ ತಂದೆ ನೀಡಿದ್ದಾರೆ. ಈಗ, ಅವರ ಅಗಲಿಕೆ ಕಲಾ ಜಗತ್ತಿಗೆ ತುಂಬಲಾರದ ನಷ್ಟಎಂದು ಮೋದಿಯವರು ಮೊದಲು ರವೀನಾ ಅವರ ತಂದೆಯ ಬಗ್ಗೆ ಪತ್ರದಲ್ಲಿ ತಿಳಿಸಿದ್ದಾರೆ.
    ಜತೆಗೆ, ರವೀನಾ ಬಗ್ಗೆಯೂ ಪತ್ರದ ಮೂಲಕ ತಿಳಿಸಿರುವ ಪ್ರಧಾನಿ, ”ಸಿನಿಮಾ ರಂಗದಲ್ಲಿ ರವೀನಾ ಯಶಸ್ಸು, ಸುದೀರ್ಘ ಪಯಣ, ನಟಿಯ ವ್ಯಕ್ತಿತ್ವ ಗಮನಿಸಿದರೆ, ನಿಮ್ಮ ತಂದೆಯವರು ನಿಮಗೆ ನೀಡಿರುವ ಮಾರ್ಗದರ್ಶನ, ನಿಮಗೆ ಅವರು ನೀಡಿರುವ ಜೀವನದ ಮೌಲ್ಯಗಳ ಪಾಠಗಳು ಎಲ್ಲಿರಗೂ ಅರ್ಥವಾಗುತ್ತೆ”, ಎಂದು ಹೇಳಿದ್ದಾರೆ. ಇನ್ನು, ಮೋದಿ ಅವರ ಈ ಪತ್ರವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರುವ ನಟಿ ರವೀನಾ, ”ಅಪ್ಪ ಅಗಲಿ ಇಂದಿಗೆ ಹದಿಮೂರು ದಿನಗಳಾದವು. ಮೋದಿಯವರ ಮಾತುಗಳಿಗೆ ತುಂಬು ಹೃದಯದ ಧನ್ಯಾವದಗಳುಎಂಬ ಕ್ಯಾಪ್ಷನ್ ನೀಡಿದ್ದಾರೆ. ಸದ್ಯ, ಮೋದಿಯವರು ನಟಿಗೆ ಸಂತಾಪ ಸೂಚಿಸಿರುವ ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ

    ಬಾಲಿವುಡ್ ನಟಿಗೆ ಪ್ರಧಾನಿ ಮೋದಿಯಿಂದ ಭಾವುಕ ಪತ್ರ! ಕಾರಣ? ಬಾಲಿವುಡ್ ನಟಿಗೆ ಪ್ರಧಾನಿ ಮೋದಿಯಿಂದ ಭಾವುಕ ಪತ್ರ! ಕಾರಣ? ಬಾಲಿವುಡ್ ನಟಿಗೆ ಪ್ರಧಾನಿ ಮೋದಿಯಿಂದ ಭಾವುಕ ಪತ್ರ! ಕಾರಣ?

    7 ತಿಂಗಳು ಪ್ರೆಗ್ನೆಂಟ್​ ಸಂಜನಾ ಗಲ್ರಾನಿ ಮಗು ಯಾವಾಗ ಜನಿಸುತ್ತೆ ಗೊತ್ತಾ? ನಟಿಯ ವಿಡಿಯೋ ವೈರಲ್…

    ಒಂದು ಅಂಗಡಿ ಉದ್ಘಾಟನೆಗೆ ಬಂದ್ರೆ ಸಮಂತಾ ಪಡೆಯುವ ಸಂಭಾವನೆ ಇಷ್ಟೋಂದಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts