More

    ರಕ್ಷಣಾ ಕಾರ್ಯಾಚರಣೆಗೆ ನಾಯಿಗಳಂತೆಯೇ ಇಲಿಗಳ ಬಳಕೆ!

    ಮೊರೊಗೊರೊ: ಇಲಿಗಳನ್ನು ರಕ್ಷಣಾ ಕಾರ್ಯಾಚರಣೆಯಲ್ಲೂ ಬಳಸಿಕೊಳ್ಳಬಹುದು ಎಂಬುದನ್ನು ಬೆಲ್ಜಿಯಂನ ಎಪಿಒಪಿಒ ಹೆಸರಿನ ಕಂಪನಿ ತೋರಿಸಿಕೊಟ್ಟಿದೆ.

    ತಾಂಜಾನಿಯಾದ ಮೊರೊಗೊರೊದಲ್ಲಿ ಎಪಿಒಪಿಒ ಕಂಪನಿ ಆಫ್ರಿಕನ್ ದೈತ್ಯ ಇಲಿಗಳಿಗೆ ನಾಯಿಗಳ ರೀತಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ತರಬೇತಿ ನೀಡುತ್ತಿದೆ. ಇಲಿಗಳಿಗೆ ವಿಡಿಯೊ ಕ್ಯಾಮೆರಾ ಜತೆಗೆ ದ್ವಿಮುಖ ರೇಡಿಯೊ ಒಳಗೊಂಡ ಹೈಟೆಕ್ ಬ್ಯಾಕ್‌ಪ್ಯಾಕ್ ಅಳವಡಿಸಲಾಗಿರುತ್ತದೆ. ಇದು ಸಂಭಾವ್ಯ ವಿಪತ್ತುಗಳನ್ನು ತಪ್ಪಿಸಲು ಅಥವಾ ನಿಗ್ರಹಿಸಲು ಸಹಾಯಕವಾಗಲಿದೆ.

    ರೇಡಿಯೊವು ದುರಂತದ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಲು ಅನುವು ಮಾಡಿಕೊಡುತ್ತದೆ. ಇಲಿಗಳಿಗೆ ನಾಯಿಗಳಂತೆಯೇ ತರಬೇತಿ ನೀಡಲಾಗುವುದು. ಅವುಗಳು ಉತ್ತಮವಾದ ವಾಸನೆ, ಗ್ರಹಿಕೆ ಹೊಂದಿವೆ. ಅವು ಸಣ್ಣ ಗಾತ್ರ ಮತ್ತು ನೈಸರ್ಗಿಕ ಚುರುಕುತನ ಹೊಂದಿರುವುದರಿಂದ ಚಿಕ್ಕ ಜಾಗದಲ್ಲೂ ನುಸುಳಿ ಸಂತ್ರಸ್ತರಿಗೆ ಹತ್ತಿರವಾಗಬಲ್ಲವು ಎಂದು ಪ್ರಮುಖ ಸಂಶೋಧಕ ಡಾ. ಡೊನ್ನಾ ಕೀನ್ ತಿಳಿಸಿದ್ದಾರೆ.

    ಸಂಶೋಧಕರು ಇಲ್ಲಿಯವರೆಗೆ ಇಲಿಗಳಿಗೆ ಪ್ರದೇಶಗಳನ್ನು ಶೋಧಿಸಲು, ಮಾನವ ಉಪಸ್ಥಿತಿಯನ್ನು ಪತ್ತೆ ಹಚ್ಚಲು ತರಬೇತಿ ನೀಡಿದ್ದಾರೆ. ಇಲಿಗಳಿಗೆ ಜಿಪಿಎಸ್ ಸಾಧನ ಅಳವಡಿಸಿರುವುದರಿಂದ ಸಂತ್ರಸ್ತರು ಬದುಕುಳಿದ ಸ್ಥಳವನ್ನು ಗುರುತಿಸಲು ಸಾಧ್ಯವಾಗುತ್ತದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts