More

    ರಥಸಪ್ತಮಿ ದಿನ ಹಿಂದುಗಳಿಗೆ ಪವಿತ್ರ

    ಶೃಂಗೇರಿ: ಚೈತ್ರ ಮಾಸದ ಶುಕ್ಲಪಕ್ಷದಂದು ಬ್ರಹ್ಮಾಂಡ ಉಗಮಗೊಂಡಿತ್ತು. ಸೃಷ್ಟಿಯ ಆದಿಯಲ್ಲಿ ಉಗಮವಾದ ಸೂರ್ಯನನ್ನು ಆದಿದೇವ ಎಂದು ಕರೆಯಲಾಗುತ್ತಿದೆ. ಏಳು ಬಣ್ಣಗಳ ಕಿರಣಗಳನ್ನು ಜಗತ್ತಿಗೆ ಸೂಸುತ್ತ ಏಕಚಕ್ರ ರಥದಲ್ಲಿ ಸಂಚರಿಸುವ ಭಗವಾನ್ ಸೂರ್ಯ ಜನ್ಮತಳೆದ ದಿನ ರಥಸಪ್ತಮಿ ಎಂದು ಕರೆಯಲಾಗುತ್ತಿದೆ ಎಂದು ಶೃಂಗೇರಿ ಶ್ರೀ ಪತಂಜಲಿ ಯೋಗಸಮಿತಿ ತಾಲೂಕು ಸಂಚಾಲಕ ನಾಗೇಶ್ ಕಾಮತ್ ತಿಳಿಸಿದರು.

    ರಥಸಪ್ತಮಿ ಪ್ರಯುಕ್ತ ಶ್ರೀ ಮಠದ ಆವರಣದಲ್ಲಿ ಶುಕ್ರವಾರ ಶ್ರೀ ಪತಂಜಲಿ ಯೋಗ ಸಮಿತಿ ಆಯೋಜಿಸಿದ್ದ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
    ವೇದ, ಪುರಾಣಗಳಲ್ಲೂ ಉಲ್ಲೇಖಿಸಿರುವ ರಥಸಪ್ತಮಿ ದಿನ ಹಿಂದುಗಳ ಪಾಲಿಗೆ ಪವಿತ್ರ. ಸಕಲ ಜೀವಿಗಳ ಜೀವನಾಧಾರವಾಗಿರುವ ಸೂರ್ಯ ರೋಗನಿವಾರಕನೂ ಆಗಿರುತ್ತಾನೆ. ಸೂರ್ಯನನ್ನು ಗುಣಲಕ್ಷಣಗಳಿಗೆ ಅನುಸಾರ ಆದಿತ್ಯ, ದಿನಕರ, ರವಿ, ಪ್ರಭಾಕರ ಹೀಗೆ ಹಲವು ನಾಮಗಳಿಂದ ಕರೆಯಲಾಗುತ್ತಿದೆ. ಸೂರ್ಯ ಕಣ್ಣಿಗೆ ಕಾಣುವ ದೇವರು. ಪ್ರತಿದಿನ ಈ ದೇವನಿಗೆ ನಾವು ಶ್ರದ್ಧಾಭಕ್ತಿಯಿಂದ ಪೂಜಿಸಬೇಕು ಎಂದರು.
    ತಾಲೂಕು ಮಹಿಳಾ ಸಂಚಾಲಕಿ ಪದ್ಮಾ ಸುಬ್ರಹ್ಮಣ್ಯ, ಪದಾಧಿಕಾರಿಗಳಾದ ಡಾ. ದಯಾನಂದ, ರವಿ, ಗುರುರಾಜ್, ಗಾಯತ್ರಿ, ಮಂಜುನಾಥ್ ಗೌಡ, ಮಲ್ಲಿಕಾ, ಸುಲತಾ, ಆಶಾ, ಸುಬ್ರಹ್ಮಣ್ಯ, ಗೌರಮ್ಮ, ಕುಮಾರ್, ಮಕ್ಬೂಲ್, ಪ್ರೀತಿಕಾ, ಜ್ಯೋತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts