More

    ಮಳೆಗಾಲದಲ್ಲಿ ವಾಹನ ಚಲಾಯಿಸುವ ಮೊದಲು ರತನ್ ಟಾಟಾ ಸಲಹೆ ಅನುಸರಿಸಿ…

    ನವದೆಹಲಿ: ಮಳೆಗಾಲದಲ್ಲಿ ಕಾರು ಚಾಲನೆ ಮಾಡುವ ಮೊದಲು ರತನ್ ಟಾಟಾ ಅವರ ಸಲಹೆಯನ್ನು ಅನುಸರಿಸಿ. ಅವರು ಏನು ಹೇಳುತ್ತಿದ್ದಾರೆ? ಎಂದು ಓದಿದ ನಂತರ, ಖಂಡಿತವಾಗಿಯೂ ಅವರ ಸಲಹೆಯನ್ನು ನೀವು ಅನುಸರಿಸುತ್ತೀರ.

    ಕೈಗಾರಿಕೋದ್ಯಮಿ ರತನ್ ಟಾಟಾ ಸಲಹೆ:
    ಮಳೆಗಾಲದಲ್ಲಿ ರಸ್ತೆಗಳಲ್ಲಿ ತಿರುಗಾಡುವ ಜನರು ಮಾತ್ರವಲ್ಲ, ಪ್ರಾಣಿಗಳನ್ನು ರಕ್ಷಿಸಬೇಕು. ಮಳೆಯಿಂದ ರಕ್ಷಣೆ ಮಾಡಿಕೊಳ್ಳಲು ಪ್ರಾಣಿಗಳು ವಾಹನಗಳ ಕೆಳಗೆ ಮಲಗಿ ಆಶ್ರಯ ಪಡೆಯುತ್ತವೆ. ಕಾರುಗಳ ಕೆಳಗೆ ಯಾವುದೇ ಪ್ರಾಣಿಗಳಿಲ್ಲ ಎಂದು ಖಚಿತಪಡಿಸಿಕೊಂಡ ನಂತರವೇ ಚಾಲನೆ ಮಾಡಿ. ಮಳೆಗಾಲದಲ್ಲಿ ರಸ್ತೆಗಳಲ್ಲಿ ನಾಯಿ ಮತ್ತು ಬೆಕ್ಕುಗಳಿಗೆ ಮನುಷ್ಯರಿಂದ ಉಂಟಾಗುವ ಅಪಾಯದ ಕುರಿತು ರತನ್ ಟಾಟಾ ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡಿದ್ದಾರೆ.

    ಮಳೆಯಿಂದ ಸೂಕ್ತ ಆಶ್ರಯವಿಲ್ಲದೆ ಮನೆ ಮುಂದೆ ನಿಲ್ಲಿಸಿರುವ ವಾಹನಗಳ ಕೆಳಗೆ ನಾಯಿ, ಬೆಕ್ಕುಗಳು ಪರದಾಡುತ್ತಿವೆ. ಗಮನಕ್ಕೆ ಬಾರದೆ ವಾಹನ ಚಲಾಯಿಸಿದರೆ ಪ್ರಾಣ ಕಳೆದುಕೊಳ್ಳುತ್ತವೆ. ಇಂತಹ ಪರಿಸ್ಥಿತಿ ಬಾರದಂತೆ ಕಾರು ಚಲಾಯಿಸುವ ಮುನ್ನ ಒಮ್ಮೆ ಪರಿಶೀಲಿಸಬೇಕು ಎಂದು ಕೈಗಾರಿಕೋದ್ಯಮಿ ರತನ್ ಟಾಟಾ ಸಲಹೆ ನೀಡಿದ್ದಾರೆ. ರತನ್ ಟಾಟಾ ಟ್ವೀಟ್ ಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಇಲ್ಲಿ ಪೆಟ್ರೋಲ್‌ಗಿಂತ ಟೊಮ್ಯಾಟೊ ದುಬಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts